ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲಿಗೆ ಹೆದರಿ ಬಿಬಿಎಂಪಿ ಚುನಾವಣೆ ಮುಂದೂಡಿಕೆ: ಎಎಪಿ

|
Google Oneindia Kannada News

ಬೆಂಗಳೂರು, ಸೆ. 24: ಬಿಬಿಎಂಪಿ ವಾರ್ಡ್‌ ಸಂಖ್ಯೆಗಳನ್ನು 250 ಕ್ಕೆ ಹೆಚ್ಚಳ ಮಾಡಲು ಶಾಸಕ ಎಸ್ ರಘು ನೇತೃತ್ವದ ಜಂಟಿ ಸಲಹಾ ಸಮಿತಿ ಶಿಫಾರಸು ಮಾಡಿದೆ. ಹೊಸ ವಾರ್ಡ್‌ಗಳ ರಚನೆ ಮತ್ತು ಚುನಾವಣೆಗೆ ಮೀಸಲಾತಿ ಮರು ನಿಗದಿ ಮಾಡಬೇಕಾಗಿರುವುದರಿಂದ ಕೂಡಲೇ ಚುನಾವಣೆ ನಡೆಸಲು ಆಗುವುದಿಲ್ಲ ಎಂಬ ಕುಂಟು ನೆಪ ಮಾಡಿಕೊಂಡಿರುವ ರಾಜ್ಯ ಸರ್ಕಾರ, 'ಕರ್ನಾಟಕ ಪೌರಸಭೆಗಳ ಕಾಯ್ದೆ (ಮೂರನೇ ತಿದ್ದುಪಡಿ) ಮಸೂದೆ'ಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವುದು ಬಿಜೆಪಿಯವರ ಪುಕ್ಕಲುತನವನ್ನು ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ, ಕೂಡಲೇ ಬಿಬಿಎಂಪಿ ಚುನಾವಣೆ ನಡೆದರೆ ಹೀನಾಯವಾಗಿ ಸೋಲುವುದಾಗಿ ವರದಿ ಬಂದಿದೆ. ಕೊರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಸೇರಿದಂತೆ ಸದನದಲ್ಲಿ ಅನೇಕ ಜನವಿರೋಧಿ ರೈತ ವಿರೋಧಿ ಕಾರ್ಮಿಕ ವಿರೋಧಿ ಮಹಿಳಾ ವಿರೋಧಿ ಮಸೂದೆಗಳನ್ನು ಮಂಡಿಸಿ ಉಳಿಗಮಾನ್ಯ ಪದ್ಧತಿ ಜೀತದಾಳು ಪದ್ಧತಿ ಮತ್ತು ವಸಾಹತುಶಾಹಿ ಪದ್ಧತಿಗಳನ್ನು ಮತ್ತೆ ಪುನರ್ ಪ್ರತಿಷ್ಠಾಪಿಸಿದೆ.

ಆಸ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷದ ಅವ್ಯವಹಾರ: ಎಎಪಿಆಸ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷದ ಅವ್ಯವಹಾರ: ಎಎಪಿ

ಈ ಕೆಟ್ಟ ಆಡಳಿತದಿಂದ ಬೇಸತ್ತಿರುವ ಜನ ಬಿಜೆಪಿ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಗಳಿಂದಾಗಿ ಅಧಿಕಾರವನ್ನು ಹಿಡಿಯುವುದು ಅಸಾಧ್ಯ ಎಂಬುದು ಬಿಜೆಪಿಗರಿಗೆ ಅರಿವಾಗಿದೆ . ಆದ ಕಾರಣ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆಯನ್ನು ಮುಂದೂಡುತ್ತಿವೆ ಎನ್ನುವುದು ಆಮ್ ಆದ್ಮಿ ಪಕ್ಷದ ಆರೋಪ.

 ಹಿಂಬಾಲಕರಿಗೆ ಅಧಿಕಾರ ನೀಡಲು ವಾರ್ಡ್ ಸಂಖ್ಯೆ ಹೆಚ್ಚಳ

ಹಿಂಬಾಲಕರಿಗೆ ಅಧಿಕಾರ ನೀಡಲು ವಾರ್ಡ್ ಸಂಖ್ಯೆ ಹೆಚ್ಚಳ

ಒಳ ಜಗಳದಲ್ಲೇ ಮುಳುಗಿರುವ ಬಿಜೆಪಿ ನಾಯಕರಿಂದ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿಲ್ಲ. ಅಲ್ಲದೇ ಅನೇಕ ವರ್ಷಗಳಿಂದ ಪಕ್ಷದಲ್ಲಿದ್ದು ಅವಕಾಶ ಸಿಗದ ಹಿಂಬಾಲಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದು ಇದಕ್ಕೆ ಹೆದರಿರುವ ಯಡಿಯೂರಪ್ಪ ಅವರು "ನಾನು ತಿಂದಿದ್ದೇವೆ, ಈಗ ನೀವು ತಿನ್ನಿ" ಎನ್ನುವ ಯೋಜನೆಯನ್ನು ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಮೂಲಕ ತರುತ್ತಿದ್ದಾರೆ.

ಏಕ ಗವಾಕ್ಷಿ (ಸಿಂಗಲ್ ವಿಂಡೊ) ಭ್ರಷ್ಟಾಚಾರಕ್ಕೆ ಅವಕಾಶ

ಏಕ ಗವಾಕ್ಷಿ (ಸಿಂಗಲ್ ವಿಂಡೊ) ಭ್ರಷ್ಟಾಚಾರಕ್ಕೆ ಅವಕಾಶ

ಅಲ್ಲದೇ ಈಗಿರುವ ವಾರ್ಡ್‌ಗಳು ವಿಧಾನಸಭಾ ಕ್ಷೇತ್ರಗಳ ನಡುವೆ ಹಂಚಿ ಹೋಗಿದ್ದು ಆಯಾಯ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಒಳಗಡೆ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಹೇಳುವ ಮೂಲಕ ಏಕ ಗವಾಕ್ಷಿ (ಸಿಂಗಲ್ ವಿಂಡೊ) ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿದ್ದಾರೆ.

198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ ಬಿಬಿಎಂಪಿ198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ ಬಿಬಿಎಂಪಿ

ಕಿಂಚಿತ್ತೂ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್ ಹಾಗೂ ಜೆಡಿಎಸ್‌

ಕಿಂಚಿತ್ತೂ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್ ಹಾಗೂ ಜೆಡಿಎಸ್‌

ಸರ್ಕಾರದ ಈ ನಿರ್ಧಾರಕ್ಕೆ ಕಿಂಚಿತ್ತೂ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಸರ್ಕಾರದ ಈ ನಡೆಯನ್ನು ಕಿಂಚಿತ್ತು ವಿರೋಧಿಸದೇ ಸರ್ಕಾರದ ಜತೆ ಕೈಜೋಡಿಸಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ .

Recommended Video

KG halli , DJ halli ಪ್ರಕರಣದ ಆರೋಪಿ Naveenಗೆ Bail ನಿರಾಕರಣೆ | Oneindia Kannada
ನೀಚ ರಾಜಕೀಯ ಮಾಡುತ್ತಿರುವ 3 ಪಕ್ಷಗಳು

ನೀಚ ರಾಜಕೀಯ ಮಾಡುತ್ತಿರುವ 3 ಪಕ್ಷಗಳು

ವಿಧಾನಸಭೆ ಅಧಿವೇಶನವನ್ನು ದುರುಪಯೋಗ ಪಡಿಸಿಕೊಂಡು ಸರಿಯಾದ ಸಮಯಕ್ಕೆ ಚುನಾವಣೆ ನಡೆಸದೆ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವದ ಬದ್ದತೆಗೆ ದಕ್ಕೆ ತರುತ್ತಿರುವ ಇವರುಗಳ ನಡೆ ದುರದೃಷ್ಟಕರ.

ಜನ ಸಾಮಾನ್ಯ ಕೊರೋನಾ ಸೋಂಕಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾಯುತ್ತಿರುವ ಹೊತ್ತಿನಲ್ಲೂ ನೀಚ ರಾಜಕೀಯ ಮಾಡುತ್ತಿರುವ 3 ಪಕ್ಷಗಳ ನಡೆಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.

English summary
Fearing defeat, the BJP government in Karnataka has decided to postpone the elections to the BBMP, which were due this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X