ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಪ್ರಭುತ್ವದಿಂದ ಪ್ರಜಾಸತ್ತಾತ್ಮಕ ಮೌಲ್ಯದ ಮೇಲೆ ದಾಳಿ ನಡೆಯುತ್ತಿದೆ'

|
Google Oneindia Kannada News

ಬೆಂಗಳೂರು ಫೆಬ್ರವರಿ 20: 'ಇಂದಿನ ಪ್ರಭುತ್ವ ಹೇರುತ್ತಿರುವ ನಿರ್ಬಂಧ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ' ಎಂದು ಚಿಂತಕಿ ಎನ್ ಗಾಯತ್ರಿ ಅಭಿಪ್ರಾಯಪಟ್ಟರು.

ಬೆಂಗಳೂರಲ್ಲಿ ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ 'ಅವಧಿ ಲೈವ್' ಕಾರ್ಯಕ್ರಮದಲ್ಲಿ ಎನ್ ಎಸ್ ಶಂಕರ್ ಅವರ 'ಆಜಾದಿ ಕನ್ಹಯ್ಯ ದಲಿತ ದನಿ ಜಿಗ್ನೇಶ್' ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

'ಇಂದಿನ ದುರಿತ ಕಾಲದಲ್ಲಿ ಕನ್ಹಯ್ಯ ಹಾಗೂ ಜಿಗ್ನೇಶ್ ಭರವಸೆಯ ಕಿಡಿಗಳಾಗಿ ಹೊಮ್ಮಿದ್ದಾರೆ. ಅವರ ವಿಚಾರವಂತಿಕೆ ಸಮಾಜಕ್ಕೆ ಮಾದರಿಯಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು.

Fear To Democracy In India Says Writer N Gayitri

ಮುಖ್ಯ ಅತಿಥಿಯಾಗಿದ್ದ ಭಾರತ ಕಮ್ಮ್ಯುನಿಸ್ಟ್ ಪಕ್ಷ (ಸಿಪಿಐ) ರಾಜ್ಯ ಕಾರ್ಯದರ್ಶಿ ಡಾ ಸಿದ್ಧನಗೌಡ ಪಾಟೀಲ್ ಮಾತನಾಡಿ, 'ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ತೀವ್ರವಾಗಿ ದಮನಿಸುತ್ತಿರುವ ಈ ಹೊತ್ತಿನಲ್ಲಿ ಕನ್ಹಯ್ಯ ಮತ್ತು ಜಿಗ್ನೇಶ್ ಹೋರಾಟವನ್ನು ಮುಂದಕ್ಕೊಯ್ಯುವ ರಿಲೇ ರೆಸ್ ನಲ್ಲಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ತೀವ್ರವಾದದ ಮೂರು ಧಾರೆಗಳಿದ್ದವು. ಈಗಿನ ತಲೆಮಾರಿನ ಹೋರಾಟಗಾರರು ಈ ಮೂರೂ ಧಾರೆಗಳನ್ನು ಒಗ್ಗೂಡಿಸಿ ಮುನ್ನಡೆದಿದ್ದಾರೆ' ಎಂದು ಅಭಿಪ್ರಾಯಪಟ್ಟರು.

ಲೇಖಕ ಎನ್ ಎಸ್ ಶಂಕರ್, 'ಅವಧಿ'ಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು.

English summary
Fear To Democracy In India Says N Writer Gayitri In Bengaluru at Avadhi Blog Live Progaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X