ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಫೇಸ್ ಬುಕ್ ಅವಾಂತರ, ಏಕಾಂತದ ವಿಡಿಯೋ ಕಳಿಸಿ ಬ್ಲ್ಯಾಕ್ ಮೇಲ್

|
Google Oneindia Kannada News

ಬೆಂಗಳೂರು, ಮೇ 27: ಫೇಸ್ ಬುಕ್ ಎಂಬುದು ಬೇರೆಯದೇ ಜಗತ್ತು ಎಂದು ಸಕಾರಾತ್ಮಕ ಹಾಗೂ ನಕಾರಾತ್ಮಕ ಸಂಗತಿಗಳು ಚಾಲ್ತಿಯಲ್ಲಿವೆ. ಬೆಂಗಳೂರಿನಲ್ಲಿ ನಡೆದ ಈ ಘಟನೆ ಬಗ್ಗೆ ಗಮನಿಸಿದರೆ ಪೋಷಕರು ಮಕ್ಕಳ ಬಗ್ಗೆ ಎಷ್ಟು ಎಚ್ಚರದಿಂದ ಇದ್ದರೂ ಸಾಲದು ಎನಿಸುವುದು ಹೌದು.

ಹದಿಮೂರು ವರ್ಷದ ಬಾಲಕನೊಬ್ಬ ತನಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಗೆ ಪೋಷಕರ ಏಕಾಂತದ ವಿಡಿಯೋಗಳನ್ನು ಕಳಿಸಿದ್ದು, ಅದನ್ನು ಮುಂದೆ ಮಾಡಿಕೊಂಡು ಬಾಲಕನ ತಂದೆಗೆ ಅಪರಿಚಿತನೊಬ್ಬ ಒಂದು ಕೋಟಿ ರುಪಾಯಿ ಹಣಕ್ಕಾಗಿ ಒತ್ತಾಯಿಸಿದ್ದಾನೆ. ಮನೆಯ ಕೊಠಡಿಯಲ್ಲಿ ಪತ್ನಿಯೊಂದಿಗೆ ಇದ್ದ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.[ಬಿಜೆಪಿ ವಕ್ತಾರ ರಮೇಶ್ ಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ]

FB friend blackmails teen with parents' nude pictures, videos

ಇದೀಗ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಗಾಗಿ ಶೋಧ ನಡೆಯುತ್ತಿದೆ. ದೂರು ನೀಡಿದ ವ್ಯಕ್ತಿಯ ಮಗ ಈಚೆಗೆ ಫೇಸ್ ಬುಕ್ ನಲ್ಲಿ ಖಾತೆ ತೆರೆದಿದ್ದ. ಆತನನ್ನು ತೇಜಸ್ ಪಟೇಲ್ ಎಂಬಾತ ಸ್ನೇಹಿತನನ್ನಾಗಿ ಮಾಡಿಕೊಂಡಿದ್ದ. ಆ ನಂತರ ಬಾಲಕನ ಸ್ನೇಹ ಸಂಪಾದಿಸಿ, ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಕಳಿಸಿದ್ದಾನೆ.

ಬಾಲಕನಿಗೆ ಅದೇನು ಹೇಳಿ ಪುಸಲಾಯಿಸಿದನೋ ತಂದೆ-ತಾಯಿಯ ಏಕಾಂತದ ವಿಡಿಯೋ ಕಳಿಸು ಎಂದಿದ್ದಾನೆ. ಆತನ ಮಾತಿನಂತೆಯೇ ಬಾಲಕ ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿದು ಕಳಿಸಿದ್ದಾನೆ. ಅದನ್ನು ಇಟ್ಟುಕೊಂಡು ಒಂದು ಕೋಟಿ ನೀಡುವಂತೆ ಅಪರಿಚಿತ ಬೇಡಿಕೆ ಇಟ್ಟಿದ್ದಾನೆ.[ಫೇಸ್ ಬುಕ್ ನಲ್ಲಿ ಅವಹೇಳನಾಕರಿ ಪೋಸ್ಟ್: ಹಂಪಿ ವಿವಿ ಅಧೀಕ್ಷಕ ಅರೆಸ್ಟ್]

ಬಾಲಕನ ಮೇಲೆ ಅನುಮಾನದಿಂದ ತಂದೆ ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಇದೀಗ ಫೇಸ್ ಬುಕ್ ಕಂಪೆನಿಗೆ ಪತ್ರ ಬರೆದಿರುವ ತನಿಖಾಧಿಕಾರಿಗಳು ಆರೋಪಿಯ ಪತ್ತೆಗಾಗಿ ಪ್ರಯತ್ನ ಮುಂದುವರಿಸಿದ್ದಾರೆ.

English summary
The father of a 13-year-old boy in Bengaluru has approached the cyber crime police, saying the teenager’s Facebook friend had threatened to leak not only his private pictures and videos but also those of his parents if they don’t pay up a ransom of Rs 1 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X