ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

7 ವರ್ಷದ ಮಗನ ಶವವಿಟ್ಟುಕೊಂಡು ಕೊವಿಡ್ ವರದಿಗಾಗಿ 4 ದಿನ ಕಾದ ತಂದೆ

|
Google Oneindia Kannada News

ಬೆಂಗಳೂರು, ಜುಲೈ 9: ಏಳು ವರ್ಷದ ಮೃತ ಮಗನ ಶವವಿಟ್ಟುಕೊಂಡು ತಂದೆಯೊಬ್ಬರು ಕೊವಿಡ್ ವರದಿಗಾಗಿ ನಾಲ್ಕು ದಿನ ಕಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೆಬ್ಬಾಳದಲ್ಲಿ ಘಟನೆ ನಡೆದಿದ್ದು, ಬಾಲಕ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಕೊನೆಯುಸಿರೆಳೆದಿದ್ದ, ಬಳಿಕ ಕೊವಿಡ್ ವರದಿಗಾಗಿ ಆಸ್ಪತ್ರೆಯಲ್ಲಿ ಕಾಯಿಸಿದ್ದರಿಂದ ಅನಿವಾರ್ಯವಾಗಿ ಮಗನನ್ನು ಐಸ್‌ಕ್ರೀಂ ಫ್ರೀಜರ್‌ನಲ್ಲಿಡಬೇಕಾಯಿತು.

ಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆ

ಆಟೊಪ್ಸಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಯಿತು. ಅಷ್ಟೇ ಅಲ್ಲದೆ ಫ್ರೀಜರ್‌ನ ಬಾಡಿಗೆಯನ್ನೂ ನೀಡಬೇಕಾಯಿತು.

Father Waits For Covid Report Of A 7 Year Old So For 4 Days

ಜುಲೈ 2 ರಂದು ಸ್ಟೇರ್‌ಕೇಸ್‌ ಮೇಲೆ ಆಟವಾಡಿಕೊಂಡಿದ್ದ ಬಾಲಕ ಸಂಜೆ 6.45ರ ಸುಮಾರಿಗೆ ಆಯತಪ್ಪಿ ಕೆಳಗೆ ಬಿದ್ದಿದ್ದ, ಬಳಿಕ ಆತನನ್ನು ಮೂರು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.
ಆತನನ್ನು ದಾಖಲಿಸಿಕೊಳ್ಳಲು ಯಾವ ಆಸ್ಪತ್ರೆಯೂ ಮುಂದೆ ಬರಲಿಲ್ಲ. ವಿಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.

ಹೆಬ್ಬಾಳ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡ ಮರಣೋತ್ತರ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದರು. ಅದಕ್ಕೂ ಮುನ್ನ ಕೊವಿಡ್ ಟೆಸ್ಟ್ ಮಾಡಿಸಲಾಯಿತು. ಸ್ವ್ಯಾಬ್ ಪಡೆದು ಮೆಡಿಕಲ್ ಕಾಲೇಜಿಗೆ ಶವವನ್ನು ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ಫ್ರೀಜರ್ ಇರಲಿಲ್ಲ. ಬಳಿಕ ಬೇರೆಡೆಗೆ ಶವವನ್ನು ವರ್ಗಾಯಿಸಲಾಯಿತು.

ಪಾಶಾ ಆಸ್ಪತ್ರೆಗೆ 90 ಸಾವಿರವನ್ನು ಕಟ್ಟಿದ್ದು, ಇದೀಗ ಪ್ರತಿ ನಿತ್ಯ ಫ್ರೀಜರ್‌ಗೆ 4 ಸಾವಿರ ರೂ ವೆಚ್ಚ ಮಾಡುವಂತಾಗಿದೆ. ಕಳೆದ ಮೂರು ತಿಂಗಳಿನಿಂದ ಕೆಲಸವಿರಲಿಲ್ಲ. ಅಲ್ಪ ಸ್ವಲ್ಪ ಕೂಡಿಟ್ಟ ಹಣವೆಲ್ಲಾ ಖಾಲಿಯಾಗಿದೆ ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ. ಮಗುವಿನ ಶವ ಸಂಸ್ಕಾರ ಮಾಡಲು ನಾಲ್ಕು ದಿನ ಕಾಯಬೇಕಾಯಿತು.

English summary
Father Waits For Covid Report Of A 7 Year Old So For 4 Days in Bengaluru. Boy Fell to his death from the second floor of his Hebbal residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X