ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾರ ಕಳೆದರೂ ಕೈ ಗೆ ಸಿಗುತ್ತಿಲ್ಲ ಫಾಸ್ಟ್ಯಾಗ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಬಳಸಲು ಗಡುವು ವಿಸ್ತರಣೆ ನಡುವೆಯೂ, ಫಾಸ್ಟ್ಯಾಗ್ ಗ್ರಾಹಕರ ಕೈಗೆ ಸಿಗುವುದು ವಿಳಂಬವಾಗುತ್ತಿದೆ. ಫಾಸ್ಟ್ಯಾಗ್ ಗಳನ್ನು ಆನ್ಲೈನ್ ನಲ್ಲಿ ಖರೀದಿಸುತ್ತಿರುವ ಗ್ರಾಹಕರಿಗೆ ಇನ್ನೂ ಸಿಗುತ್ತಿಲ್ಲ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೌಂಟರ್ ಗಳು, ಆಯ್ದ ೨೨ ಬ್ಯಾಂಕುಗಳು ಮತ್ತು ಪೆಟಿಎಂ, ಅಮೆಜಾನ್, ಫ್ಲಿಪ್ ಕಾರ್ಟ್ ಗಳಲ್ಲಿ ಆನ್ಲೈನ್ ಮಾರಾಟಕ್ಕೂ ಅವಕಾಶ ಕಲ್ಪಿಸಿದೆ.

ವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲ ವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲ

ಅನೇಕ ಗ್ರಾಹಕರು ವಾರದ ಹಿಂದೆಯೇ ಆನ್ಲೈನ್ ನಲ್ಲಿ ಖರೀದಿಸಿದ್ದರೂ, ಅವರ ಕೈ ಸೇರುವುದು ಮಾತ್ರ ವಿಳಂಬವಾಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Fast Tags Are Not Getting To Hand For a Week

ಟೋಲ್ ಪ್ಲಾಜಾಗಳಲ್ಲಿ ತೆರೆದಿರುವ ಫಾಸ್ಟ್ಯಾಗ್ ಕೌಂಟರ್ ಗಳಲ್ಲಿ ತೆಗೆದುಕೊಳ್ಳಲು ಬರುವ ಗ್ರಾಹಕರ ಸಂಖ್ಯೆ ಕಳೆದೆರಡು ದಿನಗಳಿಂದ ಇಳಿಮುಖವಾಗಿದೆ.

ಪ್ರಾರಂಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಫಾಸ್ಟ್ಯಾಗ್ ಪಡೆಯಲು ವಾಹನಗಳ ಮಾಲೀಕರು ಬರುತ್ತಿದ್ದರು. ಈಗ ಕಡಿಮೆಯಾಗುತ್ತಿದೆ ಎಂದು ಟೋಲ್ ಪ್ಲಾಜಾ ಉಸ್ತುವಾರಿಗಳು ಹೇಳುತ್ತಿದ್ದಾರೆ.

ಫಾಸ್ಟ್‌ ಟ್ಯಾಗ್ ಕಡ್ಡಾಯದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರಫಾಸ್ಟ್‌ ಟ್ಯಾಗ್ ಕಡ್ಡಾಯದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

ಫಾಸ್ಟ್ಯಾಗ್ ಅವಡಿಸಿಕೆ ಕಡ್ಡಾಯವಾದ ಬಳಿಕ ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಚಾರಕ್ಕೆ ದಿನದ ಹಾಗೂ ತಿಂಗಳ ಪಾಸ್ ವಿತರಣೆ ನಿಲ್ಲಿಸಲಾಗಿದೆ. ಇದರಿಂದ ಟೋಲ್ ಪ್ಲಾಜಾ ಮೂಲಕ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ.

English summary
Despite the extension of the deadline to use Fast Tag for vehicles traveling on national highways, fast tags are getting delayed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X