ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ. ಆರ್. ಮಾರುಕಟ್ಟೆ ತೆರೆಯುವಂತೆ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ಬೆಂಗಳೂರಿನ ಕೆ. ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯದ ಮಾರುಕಟ್ಟೆ ತೆರೆಯುವಂತೆ ರೈತರು ಪ್ರತಿಭಟನೆ ನಡೆಸಿದರು. ಲಾಕ್ ಡೌನ್ ಘೋಷಣೆ ಮಾಡಿದ ದಿನದಿಂದ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.

Recommended Video

Chris Gayle went to a party with Usain Bolt, who has now tested Corona Positive | Oneindia Kannada

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಕೆ. ಆರ್. ಮಾರುಕಟ್ಟೆ ಬಳಿ ಪ್ರತಿಭಟನೆ ನಡೆಸಿದರು. ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಮಾರುಕಟ್ಟೆಯನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಸೆಪ್ಟೆಂಬರ್ 1ರಿಂದ ಕೆ. ಆರ್. ಮಾರುಕಟ್ಟೆ ಓಪನ್ ಸೆಪ್ಟೆಂಬರ್ 1ರಿಂದ ಕೆ. ಆರ್. ಮಾರುಕಟ್ಟೆ ಓಪನ್

ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, "ಕೋವಿಡ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಈಗ ಲಾಕ್ ಡೌನ್ ತೆರವು ಮಾಡಲಾಗಿದೆ. ಹಲವು ಮಾರುಕಟ್ಟೆಗಳು ತೆರೆದಿವೆ. ಬಿಬಿಎಂಪಿ ಮಾತ್ರ ಮಾರುಕಟ್ಟೆ ತೆರೆಯಲು ಅನುಮತಿ ನೀಡಿಲ್ಲ" ಎಂದು ಆರೋಪಿಸಿದರು.

ಆಗಸ್ಟ್ 31ರವರೆಗೂ ಕಲಾಸಿಪಾಳ್ಯ, ಕೆಆರ್ ಮಾರ್ಕೆಟ್ ಸೀಲ್ ಡೌನ್ಆಗಸ್ಟ್ 31ರವರೆಗೂ ಕಲಾಸಿಪಾಳ್ಯ, ಕೆಆರ್ ಮಾರ್ಕೆಟ್ ಸೀಲ್ ಡೌನ್

Farmers Protest Demanding Reopen Of KR Market

"ರೈತರು ತರಕಾರಿ, ಹೂವುಗಳನ್ನು ತಂದು ಮಾರಾಟ ಮಾಡಲು ಕೆ. ಆರ್. ಮಾಕರುಟ್ಟೆ, ಕಲಾಸಿಪಾಳ್ಯ ಸರಿಯಾದ ಸ್ಥಳವಾಗಿದೆ. ಇದು ನಗರದ ಮಧ್ಯ ಭಾಗದಲ್ಲಿದ್ದು, ಜನರಿಗೂ ಸಹ ಅನುಕೂಲವಾಗಲಿದೆ" ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಕೊರೊನಾ ಸೃಷ್ಠಿಸಿದ ಚೀನಾದ 'ಡೆಡ್ಲಿ ಮಾರ್ಕೆಟ್' ಮತ್ತೆ ಆರಂಭ ಕೊರೊನಾ ಸೃಷ್ಠಿಸಿದ ಚೀನಾದ 'ಡೆಡ್ಲಿ ಮಾರ್ಕೆಟ್' ಮತ್ತೆ ಆರಂಭ

"ಎಲ್ಲಾ ಮುಂಜಾಗ್ರತಾ ಕ್ರಮಗಳನ್ನಯ ಕೈಗೊಂಡು ಮಾರುಕಟ್ಟೆಯನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಬೇಕು. ಮಾರುಕಟ್ಟೆ ಮುಚ್ಚಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ರೈತರಿಗೆ ಅಪಾರವಾದ ನಷ್ಟ ಉಂಟಾಗುತ್ತಿದೆ" ಎಂದರು.

ಬಿಬಿಎಂಪಿಯ ವಿಶೇಷ ಆಯುಕ್ತ ಜಿ. ಮಂಜುನಾಥ್ ಅವರು ಸ್ಥಳಕ್ಕೆ ಆಗಮಿಸಿದ ರೈತರ ಅಹವಾಲುಗಳನ್ನು ಆಲಿಸಿದರು. ಮಾರುಕಟ್ಟೆ ತೆರೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

English summary
Farmers staged a protest demanding the reopening of KR Market and Kalasipalyam Market in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X