• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನುಮದ ಜೋಡಿ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ

|
Google Oneindia Kannada News

ಬೆಂಗಳೂರು ಜುಲೈ 12: ವಯಸ್ಸಾದವರಿಗೆ ವಜ್ರ, ಯುವಕರಿಗೆ ಯುವರಾಜ, ಹುಡುಗಿಯರಿಗೆ ಮನ ಮೆಚ್ಚಿದ ಹುಡುಗ, ಸಹೋದರಿಯರಿಗೆ ಮುತ್ತಣ್ಣ, ಆಳುವವರಿಗೆ ಸಿಂಹದ ಮರಿ, ರೌಡಿಗಳಿಗೆ ಟಗರು ನಮ್ಮ ಜನುಮದ ಜೋಡಿ ಶಿವಣ್ಣ. ಇಂದು ದೊಡ್ಮನೆ ಮಗ ಡಾ. ಶಿವರಾಜ್‌ಕುಮಾರ್ ಅವರಿಗೆ 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಅಭಿಮಾನಿಗಳಿಂದ ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ದಿವಂಗತ ಡಾ. ರಾಜಕುಮಾರ್ ಅವರ ನೆಚ್ಚಿನ ಪುತ್ರ ಶಿವರಾಜ್‌ಕುಮಾರ್ ಅವರು ಚಿಕ್ಕ ವಯಸ್ಸಿನಿಂದಲೂ ಕನ್ನಡ ಸಿನಿಮಾ ರಂಗದಲ್ಲಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದವರು. ಕೌಟುಂಬಿಕ ಪ್ರಧಾನ ಚಿತ್ರಗಳಲ್ಲಿ ಮನೆಮಾತಾದ ಶಿವಣ್ಣ ಅಂದಿಗೂ ಇಂದಿಗೂ ಎಂದಿಗೂ ಭಾರಿ ಫೇಮಸ್. ಲಕ್ಷಾಂತರ ಕನ್ನಡ ಅಭಿಮಾನಿಗಳ ಬಳಗವನ್ನು ಹೊಂದಿದ ಶಿವಣ್ಣ ಈವರೆಗೆ ಹಲವಾರು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿದ ಶಿವಣ್ಣನ ಹುಟ್ಟುಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಅವರ ಆಪ್ತರು ಶುಭ ಕೋರಿದ್ದಾರೆ.

ನಮ್ಮೆಲ್ಲರ ಹೆಮ್ಮೆಯ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಕಲಾ ಸೇವೆ ಸದಾ ಸ್ಫೂರ್ತಿ. ನಿಮ್ಮ ನಿರಂತರ ಕಲಾಸೇವೆಗಾಗಿ ಹೊಂಬಾಳೆ ಫಿಲಂಸ್ ತಂಡದಿಂದ ಶುಭ ಹಾರೈಕೆಗಳು.

ಇನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಿವರಾಜ್‌ಕುಮಾರ್ ಅವರಿಗೆ ಹಟ್ಟುಹಬ್ಬದ ಶುಭಕೋರಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ, ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ, ತಮ್ಮ ನೇತೃತ್ವದಲ್ಲಿ ಕನ್ನಡ ಚಿತ್ರೋದ್ಯಮ ಇನ್ನೂ ಹೆಚ್ಚು ಯಶಸ್ಸು ಕೀರ್ತಿ ಗಳಿಸಲಿ ಎಂದು ಹಾರೈಸುತ್ತೇನೆ.

ಜೊತೆಗೆ ಸಚಿವ ಕೆ ಗೋಪಾಲಯ್ಯ ಅವರು ನಟನಿಗೆ ಶುಭ ಹಾರೈಸಿದ್ದಾರೆ. 'ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಕೃಪೆ ಸದಾ ತಮ್ಮ ಮೇಲಿರಲಿ, ತಮ್ಮಿಂದ ಕನ್ನಡ ಚಿತ್ರರಂಗದ ಕೀರ್ತಿ ಮತ್ತಷ್ಟು ಹೆಚ್ಚಲಿ ಎಂದು ಹಾರೈಸುತ್ತೇನೆ' ಎಂದು ಕೂ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಸುಪ್ರಸಿದ್ಧ ತಾರೆ, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಕಲಾ ಕ್ಷೇತ್ರದಲ್ಲಿ ತಮ್ಮ ಅಭಿನಯ, ಸೇವೆ ನಿರಂತರವಾಗಿರಲಿ, ಉತ್ತಮ ಆರೋಗ್ಯ, ದೀರ್ಘಾಯುಷ್ಯ ತಮ್ಮದಾಗಲಿ ಎಂದು ಹಾರೈಸುತ್ತೇನೆ.

ನಟಸಾರ್ವಭೌಮನ ಪುತ್ರ, ಕರುನಾಡ ಚಕ್ರವರ್ತಿ, ಸಿನಿರಂಗದಲ್ಲಿ 35 ವರ್ಷ ಪೂರೈಸಿ, 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಇಂದಿಗೂ ನಮ್ಮೆಲ್ಲರ ನೆಚ್ಚಿನ ನಟನಾಗಿ 60ರ ವಸಂತಕ್ಕೆ ಕಾಲಿಡುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಶುಭಾಶಯ ತಿಳಿಸಿದ್ದಾರೆ.

English summary
Fans and Celebs Wish Century Star Shiva Rajkumar on His 60th Birthday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X