ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಳಹಸ್ತಿ ದೇಗುಲ ಸ್ವಾಮಿಗೆ ನಾಮ ಹಾಕಿದ ನಕಲಿ ಆರ್‌ಎಸ್ಎಸ್ ಲೀಡರ್!

|
Google Oneindia Kannada News

ಬೆಂಗಳೂರು, ಜನವರಿ 29: ವರ ಕೇಳಿಕೊಂಡು ಎಲ್ಲರೂ ಆಂಧ್ರ ಪ್ರದೇಶದಲ್ಲಿರುವ ಶ್ರೀ ಕಾಳಹಸ್ತಿಗೆ ಹೋಗಿ ದಕ್ಷಿಣೆ ಹಾಕಿ ಬರುತ್ತಾರೆ. ವಂಚಕ ಸ್ವಾಮಿ ಅಲಿಯಾಸ್ ನಕಲಿ ಆರ್ ಎಸ್ ಎಸ್ ಲೀಡರ್ ಯುವರಾಜ್ ಕಾಳಹಸ್ತಿ ಸ್ವಾಮಿಗಳನ್ನೇ ಬೆಂಗಳೂರಿಗೆ ಕರೆಸಿ ಬರೋಬ್ಬರಿ 1.5 ಕೋಟಿ ರೂಪಾಯಿ ದಕ್ಷಣೆ ಪಡೆದು ಉಂಡೆ ನಾಮ ತಿಕ್ಕಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೇವರ ದರ್ಶನಕ್ಕೆಂದು ಆಂಧ್ರ ಪ್ರದೇಶದ ಕಾಳಹಸ್ತಿಗೆ ಹೋಗಿದ್ದ ಸ್ವಾಮಿ ಅಲ್ಲಿಯೂ ತನ್ನ ಕೈಚಳಕ ತೋರಿದ್ದ. ಸ್ವಾಮಿಯ ಗಾಳಕ್ಕೆ ಕಾಳಹಸ್ತಿಯ ಆನಂದಕಾಳ ಸ್ವಾಮಿ ಕೂಡ ಬಿದ್ದಿದ್ದ. ಸ್ವಾಮಿ ನೀವು ಯಾಕೆ ಇಷ್ಟು ವರ್ಷ ಕಷ್ಟಪಟ್ಟು ಇನ್ನೂ ಕಷ್ಟ ಪಡ್ತೀರಾ. ಒಮ್ಮೆ ಕರ್ನಾಟಕಕ್ಕೆ ಬನ್ನಿ ಒಳ್ಳೆಯ ಬೋರ್ಡ್ ಗೆ ಅಧ್ಯಕ್ಷರನ್ನಾಗಿ ಮಾಡಿಸುತ್ತೇನೆ ಎಂದು ನಂಬಿಸಿದ್ದರು. ಇದನ್ನು ಕಾಳಹಸ್ತಿ ದೇಗುಲ ಆನಂದ ಕಾಳ ನಂಬಿದ್ದರು.

ಚೀಟರ್ ಯುವರಾಜ್ 80 ಕೋಟಿ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಅಸ್ತು !ಚೀಟರ್ ಯುವರಾಜ್ 80 ಕೋಟಿ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಅಸ್ತು !

ಸ್ವಾಮಿಯ ಮಾತು ಮೊದಲು ನಂಬಿರಲಿಲ್ಲ. ಆದರೆ ಸ್ವಾಮಿಯ ಮೊಬೈಲ್ ನಲ್ಲಿದ್ದ ನಾಯಕರ ಜತೆಗಿನ ಪೋಟೋ ನೋಡಿ ನಂಬಿದ್ದ. ಇದ್ದಕ್ಕಿದ್ದಂತೆ ಆನಂದ ಕಾಳ ಸ್ವಾಮಿಗೆ ಕರೆ ಮಾಡಿದ್ದ ಸ್ವಾಮಿ, ಬೆಂಗಳೂರಿಗೆ ಬಂದು ಬಿಡಿ, ಇಲ್ಲಿ ಮೇಜರ್ ಡೆವಲಪ್ ಮೆಂಟ್ ಆಗಿದೆ. ನೀವು ಬಂದ್ರೆ ಇನ್ನೆರಡು ವಾರದಲ್ಲಿ ಚೇರ್ಮೆನ್ ಆಗೋಗ್ತೀರಾ ಎಂದು ಹೇಳಿದ್ದಾನೆ .

 Fake RSS Leader Yuvaraj Accused of Cheating Rs 1.5 Crore to Kalahasti Swami

ನಕಲಿ ಸ್ವಾಮಿಯ ಮಾತು ನಂಬಿದ ಕಾಳಹಸ್ತಿ ಆನಂದಕಾಳ ನಿಗಧಿಯಂತೆ ಬೆಂಗಳೂರಿನ ಸ್ಟಾರ್ ಹೋಟೆಲ್ ಗೆ ಬಂದಿದ್ದರು. ಹಣ ತಲುಪಿಸಿಬಿಟ್ಟರೆ ಮೂರು ದಿನದಲ್ಲಿ ಆದೇಶ ಬಂದು ಬಿಡುತ್ತದೆ. ಆಮೇಲೆ ಇದರ ನೂರು ಪಟ್ಟು ಹಣ ಮಾಡಬಹುದು ಎಂದು ನಿಗಮದ ಆಸೆ ತೋರಿಸಿ ಒಂದೂವರೆ ಕೋಟಿ ಹಣ ಪೀಕಿದ್ದಾನೆ. ಸ್ವಾಮಿಯನ್ನು ನಂಬಿ ಒಂದೂವರೆ ಕೋಟಿ ರೂಪಾಯಿ ಹಣ ಆನಂದ ಕಾಳ ಅವರು ನೀಡಿದ್ದಾರೆ.

 Fake RSS Leader Yuvaraj Accused of Cheating Rs 1.5 Crore to Kalahasti Swami

ಎಷ್ಟು ದಿನ ಕಳೆದರೂ ನಿಗಮವೂ ಅಧ್ಯಕ್ಷ ಪಟ್ಟವೂ ಸಿಕ್ಕಿಲ್ಲ. ಬೋರ್ಡ್ ಚೇರ್ಮನ್ ಆಗಲಿಲ್ಲ. ಹಣ ವಾಪಸು ಕೇಳಿದ್ದಕ್ಕೆ ಸ್ವಾಮಿ ಅವಾಜ್ ಬಿಟ್ಟಿದ್ದರು. ಜಾಸ್ತಿ ಕೇಳಿದರೆ, ಐಟಿ ಇಡಿಯವರಿಗೆ ಹಿಡಿದು ಕೊಡುತ್ತೇನೆ. ನೀನು ಇಷ್ಟು ದುಡ್ಡು ನಗದು ಎಲ್ಲಿಂದ ಸಂಪಾದನೆ ಮಾಡಿದ್ದು ಎಂದು ಹೆದರಿಸಿದ್ದರನಂತೆ. ಇದಕ್ಕೆ ಹೆದರಿ ಸುಮ್ಮನಾಗಿದ್ದ ಆನಂದ ಕಾಳ ಅವರು ಸ್ವಾಮಿ ಬಂಧನ ಬಳಿಕ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ನಕಲಿ ಆರ್‌ಎಸ್‌ ಎಸ್ ನಾಯಕರನ್ನು ಸಿಸಿಬಿ ಪೊಲೀಸರು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಫೆಬ್ರವರಿ 2 ರ ವರೆಗೂ ವಿಚಾರಣೆ ನಡೆಯಲಿದೆ

English summary
Fake RSS leader yuvaraj accused of cheating rs 1.5 crore to kalahasti swamiji. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X