ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೆಮ್‌ಡೆಸಿವಿರ್ ಖಾಲಿ ಇಂಜಕ್ಷನ್ ನಲ್ಲಿ ಗ್ಲೂಕೋಸ್ ನೀರು ತುಂಬಿಸಿ ಮಾರಾಟ

|
Google Oneindia Kannada News

ಬೆಂಗಳೂರು, ಮೇ. 14: ಕೊರೊನಾ ಸೋಂಕಿತರನ್ನು ಸುಲಿಗೆ ಮಾಡಲು ನಾನಾ ದಾರಿ ಹುಟ್ಟಿಕೊಂಡಿವೆ. ಖಾಲಿ ರೆಮ್‌ಡೆಸಿವಿರ್ ವಯಲ್ ನಲ್ಲಿ ಎಸ್‌. ಎನ್ ಗ್ಲೂಕೋಸ್ ಬಾಟ್ಲಿ ನೀರು ತುಂಬಿಸಿ ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಐವತ್ತೈದು ಸಾವಿರ ರೂಪಾಯಿ ನಗದು ಮತ್ತು 9 ಬಾಟಲಿ ನಕಲಿ ರೆಮ್‌ಡೆಸಿವಿರ್( ಗ್ಲೂಕೋಸ್ ದ್ರಾವಣ) ವಶಪಡಿಸಿಕೊಂಡಿದ್ದಾರೆ. ಈ ಕಿರಾತಕರು ಹಲವರಿಗೆ ಗ್ಲೋಕೋಸ್ ನೀರನ್ನೇ ರೆಮ್‌ಡೆಸಿವಿರ್ ಅಂತ ನಂಬಿಸಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಮೈಸೂರು ರಸ್ತೆಯ ನಿವಾಸಿ ರವಿಕುಮಾರ್, ನಾಗವಾರದ ಮನಿರಾಜ್, ಕಾಮಾಕ್ಷಿಪಾಳ್ಯದ ನಿವಾಸಿ ಕೃಷ್ಣ ಬಂಧಿತ ಆರೋಪಿಗಳು.

ಬಂಧಿತ ಕೃಷ್ಣ ಹೊಸೂರು ರಸ್ತೆಯಲ್ಲಿರುವ ಹೊಸೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ರೆಮ್‌ಡೆಸಿವಿರ್ ಇಂಜೆಕ್ಷನ್ ಬೇಡಿಕೆ ಕುರಿತು ಅರಿತಿದ್ದ ಈತ ಡಿಎನ್ ಗ್ಲೂಕೋಸ್ ಬಾಟಲಿಯ ನೀರನ್ನು ಖಾಲಿ ರೆಮ್‌ಡೆಸಿವಿರ್ ವಯಲ್ ಗೆ ತುಂಬಿಸಿ ಅದನ್ನು ಫೆವಿ ಕ್ವಿಕ್ ನಿಂದ ಗಮ್ ಹಾಕಿಸಿ ಮನಿರಾಜ್ ಮತ್ತು ರವಿಕುಮಾರ್ ಗೆ ನೀಡುತ್ತಿದ್ದ. ಇವರು ಖಾಸಗಿ ಆಸ್ಪತ್ರೆಗಳ ಬಳಿ ಹೋಗಿ ರೆಮ್‌ಡೆಸಿವಿರ್ ಇಂಜೆಕ್ಷನ್ ಗಳನ್ನು ಕೊರೊನಾ ಸೋಂಕಿತರಿಗೆ ಮಾರಾಟ ಮಾಡುತ್ತಿದ್ದರು.

Fake Remdesivir sales : Three persons arrested in Bengaluru

Recommended Video

Amit Shah ವಿರುದ್ದ ದೂರು ದಾಖಲು | Oneindia Kannada

ಈ ಮೂಲಕ ಅಕ್ರಮವಾಗಿ ರೋಗಿಗಳಿಗೆ ನಕಲಿ ರೆಮ್‌ಡೆಸಿವಿರ್ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ರವಿ ಕುಮಾರ್ ಈ ಹಿಂದೆ ವಿಕ್ಟೋರಿಯಾ ಆಸ್ಪತ್ರೆ, ಅಪೊಲೋ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಹಲವು ಆಸ್ಪತ್ರೆಗಳ ಸಂಪರ್ಕ ಸಾಧಿಸಿದ್ದ. ಹೀಗಾಗಿ ಸಂಪರ್ಕ ಸಾಧಿಸಿ ಕೊರೊನಾ ಸೋಂಕಿತರಿಗೆ ನಕಲಿ ರೆಮ್‌ಡೆಸಿವಿರ್ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮಾಹಿತಿ ಆಧರಿಸಿ ಆರೋಪಿಗಳನ್ನು ವಶಪಡಿಸಿ ವಿಚಾರಣೆ ನಡೆಸಿದಾಗ ನಕಲಿ ರೆಮ್‌ಡೆಸಿವಿರ್ ಅಕ್ರಮ ಬಯಲಿಗೆ ಬಂದಿದೆ. ಸಂಜಯ ನಗರ ಪೊಲೀಸರ ಕಾರ್ಯವನ್ನು ಉತ್ತರ ವಿಭಾಗದ ಡಿಸಿಪಿ ಶ್ಲಾಘಿಸಿದ್ದಾರೆ.

English summary
Sanjaya nagara police have been arrested 3 Persons who selling Fake remdesivir injections to patents know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X