ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಂತೆ ಬರುವ ಕಳ್ಳರು ಹೇಗೆಲ್ಲಾ ನಿಮ್ಮನ್ನು ಯಾಮಾರಿಸ್ತಾರೆ ನೋಡಿ..

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಪೊಲೀಸರ ಸೋಗಿನಲ್ಲಿ ಬಂದು ಕಳ್ಳತನ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ. ಇವರಿಗೆ ಮಹಿಳೆಯರೇ ಟಾರ್ಗೆಟ್, ನೀವು ಎಚ್ಚರದಿಂದಿರಿ.

ಕಳೆದ ನಾಲ್ಕು ತಿಂಗಳ ಹಿಂದೆ ಪೊಲೀಸರ ಸೋಗಿನಲ್ಲಿ ಬಂದ ಗ್ಯಾಂಗ್‌ ಒಂದು ಬಸವೇಶ್ವರನಗರ ಹಾಗೂ ಗಿರಿನಗರದಲ್ಲಿ ಇಬ್ಬರು ಮಹಿಳೆಯರನ್ನು ದೋಚಿ ಪರಾರಿಯಾಗಿದ್ದರು. ಅವರನ್ನು ಹಿಡಿಯಲು ನಿಜವಾದ ಪೊಲೀಸರು ಹಿಂದೆ ಬಿದ್ದಿದ್ದರು.

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಇದೀಗ ಕೆಲವೇ ತಿಂಗಳ ಅಂತರದಲ್ಲಿ ಮತ್ತೆ ನಗರಕ್ಕೇ ಅಂಥದ್ದೇ ಗ್ಯಾಂಗ್ ಒಂದು ಎಂಟ್ರಿ ಕೊಟ್ಟಿದೆ. ಆಭರಣ ಧರಿಸಿರುವ ಮಹಿಳೆಯರೇ ಇವರ ಟಾರ್ಗೆಟ್, ಈ ಏರಿಯಾದಲ್ಲಿ ಕಳ್ಳರು ಬಂದಿದ್ದಾರೆ, ನಿಮ್ಮ ಬಳಿ ಇರುವ ಚಿನ್ನವನ್ನು ಕೊಡಿ ನಾವು ಸುರಕ್ಷಿತವಾಗಿ ನಿಮ್ಮ ಮನೆಗೆ ತಲುಪಿಸುತ್ತೇವೆ ಎಂದು ಹೇಳಿ ಸರ, ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಾರೆ.

Fake police gang that robs elderly women back in city

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್ ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ಸರ್ವೇಶ್ವರನಗರದಲ್ಲಿ ಇತ್ತೀಚೆಗೆ ಜಯಮ್ಮ(60) ಮಹಿಳೆಯಿಂದ ಚಿನ್ನದ ಸರ ಹಾಗೂ ಹಣವನ್ನು ದೋಚಿದ್ದರು. ಈ ಬೀದಿಯಲ್ಲಿ ಕಳ್ಳರ ಗುಂಪೊಂದು ಬಂದಿದೆ, ನೀವು ಚಿನ್ನವನ್ನು ನನಗೆ ನೀಡಿ, ಬಳಿಕ ನಾವು ನಿಮಗೆ ತಲುಪಿಸುತ್ತೇವೆ ಎಂದು ಸುಲಭವಾಗಿ ದರೋಡೆ ಮಾಡಿದ್ದರು. ಇದೀಗ ಬೆಂಗಳೂರಿನಾದ್ಯಂತ ಕಳ್ಳರ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

English summary
Two women from Basaveshwara nagar and girinagar were recently robbed by a gang, members of which posed as policemen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X