ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರೇ ಎಚ್ಚರ, ಅಸಲಿ ನೋಟನ್ನೂ ನಾಚಿಸುವ ಖೋಟಾ ನೋಟು ಬಂದಿವೆ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 09: ಪಶ್ಚಿಮ ಬಂಗಾಳ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದ 4.34 ಲಕ್ಷ ಮೌಲ್ಯದ ಎರಡು ಸಾವಿರ ರೂಪಾಯಿ ಹೋಲುವ ಖೋಟಾ ನೋಟುಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ.

217 ಎರಡು ಸಾವಿರ ನೋಟುಗಳನ್ನು ಎನ್‌ಐಎ ವಶಪಡಿಸಿಕೊಂಡಿದ್ದು, ಈ ನೋಟುಗಳು ಬಹುತೇಕ ಹೊಸ ಎರಡು ಸಾವಿರ ನೋಟನ್ನು ಹೋಲುತ್ತಿವೆ. ಸಾಮಾನ್ಯ ವ್ಯಕ್ತಿಗಳಿಗೆ ಕಣ್‌ ಅಂದಾಜಿನಿಂದ ಗುರುತಿಸವುದು ಸಾಧ್ಯವೇ ಇಲ್ಲವಂತಿವೆ ಈ ನೋಟುಗಳು.

ಇನ್ನಷ್ಟು ಬಲವಾಗಲಿದೆ ಎನ್‌ಐಎ, ಎಫ್‌ಬಿಐನಷ್ಟು ಅಧಿಕಾರ!ಇನ್ನಷ್ಟು ಬಲವಾಗಲಿದೆ ಎನ್‌ಐಎ, ಎಫ್‌ಬಿಐನಷ್ಟು ಅಧಿಕಾರ!

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್‌ಐಎ ತಂಡ ನಗರದ ಬಿಡಿಎ ಬಡಾವಣೆಯ ಅಲೂರಿನಲ್ಲಿ ಖೋಟಾ ನೋಟಿನ ದಂಧೆಯಲ್ಲಿ ತೊಡಗಿದ್ದ ನಗರದ ರಾಜು, ಬಾಗಲಕೋಟೆಯ ಗಂಗಾಧರ ಕೊಲ್ಕರ್, ಪಶ್ಚಿಮ ಬಂಗಾಳದ ರಾಜು ಎಂಬುವರನ್ನು ಬಂಧಿಸಿದ್ದಾರೆ.

Fake note worth 6.84 lakh sized by NIA team in Bengaluru

ನಿನ್ನೆಯೇ ಎನ್‌ಐಎ ತಂಡ ಶ್ರೀರಾಮಪುರದ ಮನೆಯೊಂದರ ಮೇಲೆ ದಾಳಿ ಮಾಡಿ 2.5 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳೂ ಸಹ ಪಶ್ಚಿಮ ಬಂಗಾಳದಿಂದಲೇ ಬಂದವು ಎನ್ನಲಾಗಿದೆ.

English summary
Fake notes which look same as original notes sized by NIA team in Bengaluru's BDA layout and Srirampura. Fake notes were came smuggled from West Bengal. 4 persons arrested in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X