ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ ಬುಕ್ ಮೂಲಕ ಅರವಿಂದ ಲಿಂಬಾವಳಿ ಹೆಸರಲ್ಲಿ ಹಣಕ್ಕೆ ಬೇಡಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02 : ಮಾಜಿ ಸಚಿವ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ನಕಲಿ ಫೇಸ್ ಬುಕ್ ಖಾತೆ ಕಾಟ ಆರಂಭವಾಗಿದೆ. ನಕಲಿ ಖಾತೆ ತೆರೆದು ಹಣ ನೀಡುವಂತೆ ಖಾತೆಯಲ್ಲಿರುವ ಸ್ನೇಹಿತರಿಗೆ ಸಂದೇಶ ಕಳಿಸಲಾಗುತ್ತಿದೆ.

ಬೆಂಗಳೂರಿನ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ತಮ್ಮ ಅಧಿಕೃತ ಖಾತೆ ಮೂಲಕ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ನಕಲಿ ಖಾತೆ ಸೃಷ್ಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಿದ್ದಾರೆ.

ಹೊಸ ಕಚೇರಿ ಉದ್ಘಾಟನೆ; ಸಿಟಿ ರವಿ ಭಾವುಕ ಫೇಸ್ ಬುಕ್ ಪೋಸ್ಟ್ ಹೊಸ ಕಚೇರಿ ಉದ್ಘಾಟನೆ; ಸಿಟಿ ರವಿ ಭಾವುಕ ಫೇಸ್ ಬುಕ್ ಪೋಸ್ಟ್

'ನನ್ನ ಸ್ನೇಹಿತರೇ, ಕಾರ್ಯಕರ್ತರೇ. ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. ಈ ಖಾತೆಯನ್ನು ರಿಪೋರ್ಟ್ ಮಾಡಿ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಾನು ದೂರು ನೀಡಲಿದ್ದೇನೆ" ಎಂದು ಅರವಿಂದ ಲಿಂಬಾವಳಿ ತಮ್ಮ ಅಧಿಕೃತ ಖಾತೆ ಮೂಲಕ ಮನವಿ ಮಾಡಿದ್ದಾರೆ.

ಮದುವೆಗೆ ನಿರಾಕರಿಸಿದ ನಟಿಗೆ ಚಾಕುವಿನಿಂದ ಇರಿದ ಫೇಸ್‌ಬುಕ್ ಸ್ನೇಹಿತಮದುವೆಗೆ ನಿರಾಕರಿಸಿದ ನಟಿಗೆ ಚಾಕುವಿನಿಂದ ಇರಿದ ಫೇಸ್‌ಬುಕ್ ಸ್ನೇಹಿತ

 Fake Face Book Account In BJP MLA Arvind Limbavali Name

ತಮ್ಮ ಹೆಸರಿನಲ್ಲಿ ತೆರೆಯಲಾಗಿರುವ ನಕಲಿ ಖಾತೆಯ ಲಿಂಕ್ ಅನ್ನು ಸಹ ಅರವಿಂದ ಲಿಂಬಾವಳಿ ಅವರು ನೀಡಿದ್ದಾರೆ. ಶಾಸಕರ ಹೆಸರಿನಲ್ಲಿ ಸಂದೇಶ ಬಂದಿದೆ ಎಂದು ಹಣವನ್ನು ನೀಡುವ ಮುನ್ನ ಜನರು ಎಚ್ಚರ ವಹಿಸಬೇಕು.

ಫೇಸ್‌ಬುಕ್ ಕಾರ್ಯನಿರ್ವಾಹಕಿ ಅಂಖಿ ದಾಸ್ ವಿಚಾರಣೆ ನಡೆಸಿದ ಸಂಸದೀಯ ಸಮಿತಿಫೇಸ್‌ಬುಕ್ ಕಾರ್ಯನಿರ್ವಾಹಕಿ ಅಂಖಿ ದಾಸ್ ವಿಚಾರಣೆ ನಡೆಸಿದ ಸಂಸದೀಯ ಸಮಿತಿ

ಅರವಿಂದ ಲಿಂಬಾವಳಿ ಅವರ ಫೇಸ್ ಬುಕ್ ಪುಟದ ಅನೇಕ ಸ್ನೇಹಿತರಿಗೆ ಸಂದೇಶ ಕಳಿಸಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಈ ಕುರಿತು ಸ್ಕ್ರೀನ್ ಶಾಟ್‌ಗಳನ್ನು ಸಹ ಅವರು ಶೇರ್ ಮಾಡಿದ್ದಾರೆ. ಗೂಗಲ್ ಪೇ, ಫೋನ್ ಪೇ ಮೂಲಕ 12 ಸಾವಿರ ಹಣ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ.

English summary
Fake face book account created in the name of Mahadevapura BJP MLA Arvind Limbavali and demanding for money. Arvind Limbavali will file complaint to police soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X