ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಕ್‌ ಹಾಕದೇ ದಂಡ ಕಟ್ಟುವಾಗ ಸಿಕ್ಕಿಬಿದ್ದ ಖೋಟಾ ನೋಟು ಜಾಲ

|
Google Oneindia Kannada News

ಬೆಂಗಳೂರು: ನ. 14: ಮಾಸ್ಕ್‌ ಧರಿಸದ ಮೂವರಿಗೆ ದಂಡ ವಿಧಿಸುವಾಗ ನಕಲಿ ನೋಟು ಮಾರಾಟ ಮಾಡುವ ಜಾಲವನ್ನು ಮೈಕೋ ಲೇಔಟ್‌ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಎರಡು ಸಾವಿರ ಮುಖ ಬೆಲೆಯ 7.75 ಲಕ್ಷ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಮನ್‌, ದೇವರಾಜನ್‌, ಮುನಿಶೇಖರ್‌ ಬಂಧಿತ ಆರೋಪಿಗಳು. ಮೂಲತಃ ತಮಿಳುನಾಡಿನವರಾದ ಇವರು ಕಾರಿನಲ್ಲಿ ಬರುತ್ತಿದ್ದರು. ಮೈಕೋ ಲೇಔಟ್‌ ಸಮೀಪ ಬಂದಾಗ ಪೊಲೀಸರು ಮಾಸ್ಕ್‌ ಹಾಕದವರಿಗೆ ದಂಡ ವಿಧಿಸುತ್ತಿದ್ದರು. ಪೊಲೀಸರನ್ನು ನೋಡಿ ಸಂಶಯ ರೀತಿಯಲ್ಲಿ ನಡೆದುಕೊಂಡಿದ್ದಾರೆ.

Fake Currency Dealing Gang Arrested By Police

Recommended Video

ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada

ಮಾಸ್ಕ್‌ ಹಾಕದ ಬಗ್ಗೆ ಪೊಲೀಸರು ವಿಚಾರಣೆ ನಡೆಸುವಾಗ ಎರಡು ಸಾವಿರ ಮುಖ ಬೆಲೆಯ ಖೋಟಾ ನೋಟುಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ಜೆರಾಕ್ಸ್ ಮಾಡಿದ್ದು, ಅವನ್ನು ಚಲಾವಣೆ ಮಾಡಲು ಮುಂದಾಗಿರುವುದು ಗೊತ್ತಾಗಿದೆ. ಮೂವರು ಆರೋಪಿಗಳನ್ನು ಮೈಕೋ ಲೇಔಟ್‌ ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಳಿಯಿದ್ದ ಏಳು ಲಕ್ಷ, ಎಪ್ಪತ್ತೈದು ಸಾವಿರ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಕೋ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Fake currency dealing gang arrested and seized 7 lakes fake currency notes by Mico Layout police .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X