ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ ಕುರಿತು ಸುಳ್ಳು ಪ್ರಕಟಣೆ

|
Google Oneindia Kannada News

ಬೆಂಗಳೂರು, ಮೇ 29: ಬೆಂಗಳೂರು ವಿಶ್ವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ ಎಂಬ ಸುಳ್ಳು ಪ್ರಕಟಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳಲ್ಲಿಗೊಂದಲ ಸೃಷ್ಟಿಸಿದೆ.

ರಾಜರಾಜೇಶ್ವರಿ ನಗರ ಚುನಾವಣೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಮೇ 28 ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಜೂನ್ 13 ಕ್ಕೆ ಮುಂದೂಡಲಾಗಿದೆ. ಆದರೆ ಮೇ 30ರಂದು ನಡೆಯುವ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂಬ ಸುಳ್ಳು ಪ್ರಕಟಣೆಯನ್ನು ಕೆಲ ಕಿಡಿಗೇಡಿಗಳು ಹೊರಡಿಸಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿತ್ತು.

ಮೇ 28, ಜೂನ್‌ 11ರಂದು ನಿಗದಿಯಾಗಿದ್ದ ಬೆಂ.ವಿವಿ ಪರೀಕ್ಷೆಗಳು ಮುಂದಕ್ಕೆಮೇ 28, ಜೂನ್‌ 11ರಂದು ನಿಗದಿಯಾಗಿದ್ದ ಬೆಂ.ವಿವಿ ಪರೀಕ್ಷೆಗಳು ಮುಂದಕ್ಕೆ

ಗೊಂದಲಕ್ಕೀಡಾಡ ವಿದ್ಯಾರ್ಥಿಗಳು ಈ ಕುರಿತು ಕಾಲೇಜಿಗೆ ನಿರಂತರವಾಗಿ ಫೋನ್ ಮಾಡಿ ವಿಚಾರಿಸುತ್ತಿದ್ದರಿಂದ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ, ತಕ್ಷಣವೇ ಪ್ರಕಟಣೆಯೊಂದನ್ನು ಹೊರಡಿಸಿ ಈ ಸುದ್ದಿ ಸುಳ್ಳು, ಮೇ 30 ರಂದು ಪರೀಕ್ಷೆಗಳು ನಡೆಯಲಿವೆ ಎಂದು ಖಚಿತಪಡಿಸಿದೆ.

Fake circular of exam postponement: Bangalore University students confused

ಸುಳ್ಳು ಪ್ರಕಟಣೆಯಲ್ಲಿ ವಿವಿಯ ರಿಜಿಸ್ಟ್ರಾರ್ ಶಿವರಾಜು ಅವರ ಸಹಿಯನ್ನೂ ಫೋರ್ಜರಿ ಮಾಡಲಾಗಿದ್ದು, ಈ ಕುರಿತು ಗಂಭೀರ ಕ್ರಮ ಕೈಗೊಳ್ಳುವುದಾಗಿ ವಿವಿ ಆಡಳಿತ ಮಂಡಳಿ ತಿಳಿಸಿದೆ.

ಮೇ 28ರಂದು ನಿಗದಿಯಾಗಿದ್ದ ಎರಡನೇ ಸೆಮಿಸ್ಟರ್ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಎಚ್‌ಎಂ, ಬಿಎಸ್‌ಡಬ್ಲ್ಯೂ, ಬಿಸಿಎ, ಬಿಎಸ್ಸಿ(ಫ್ಯಾಡ್) ಬಿಎಸ್ಸಿ (ಐಡಿಡಿ) ಬಿವಿಎ, ಬಿಕಾಂ(ವಿಕೇಷನಲ್), ಬಿ ವೋಕ್ (ಆರ್ಎಂ) ಬಿವೋಕ್‌(ಫುಡ್ ಪ್ರೊಸೆಸಿಂಗ್ ಆಂಡ್ ನ್ಯೂಟ್ರಾಸ್ಯೂಟಿಕಲ್ಸ್‌) 4ನೇ ಸೆಮಿಸ್ಟರ್ ಬಿವೋಕ್(ಎಂಎಲ್‌ಟಿ) ಪರೀಕ್ಷೆಗಳನ್ನು ಜೂನ್‌ 13ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಸಲಾಗುತ್ತಿದೆ.

English summary
A fake circular created confusion among Bengaluru(Bangalore) University students on Monday. The fake circular created by miscreants and circulated on social media about the ongoing degree exams of Bangalore University being postponed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X