ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಪ್ರಚಂಡ ನಕಲಿ ಸಿಬಿಐ ಅಧಿಕಾರಿ ಬಂಧನ!

|
Google Oneindia Kannada News

ಬೆಂಗಳೂರು, ಜ.25 : ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ಲಕ್ಷಾಂತರ ರೂ. ವಂಚಿಸಿದ್ದ ಮಹಾಪ್ರಚಂಡನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಬೇರೆ-ಬೇರೆ ಹೆಸರುಗಳ ಮೂಲಕ ಜನರಿಂದ ಲಕ್ಷಾಂತರ ರೂ. ಪಡೆದ ಈತ ಅವರಿಗೆ ವಂಚಿಸಿದ್ದ ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ನಕಲಿ ಸಿಬಿಐ ಅಧಿಕಾರಿಯ ಹೆಸರು ರಂಗನಾಥ. ಚಿಕ್ಕನಾಯಕನಹಳ್ಳಿ ತಾಲೂಕಿನ ಹೊನ್ನೆಭಾಗಿ ಕಾಲೋನಿಯ ನಿವಾಸಿಯಾದ ಈತ ಇಂಗ್ಲಿಷ್ ಎಂ.ಎ ಮಾಡಿದ್ದಾನೆ. ಆದರೆ, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಯ್ಯನ ಪಾಳ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಐದು ಲಕ್ಷರೂ.ಗಳಿಗೆ ನಾಮ ಹಾಕಿದ ಈತ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

CBI

ತಾನು ಸಿಬಿಐ ಇನ್ಸ್ ಪೆಕ್ಟರ್ ಎಂದು ಹೇಳಿಕೊಳ್ಳುತ್ತಿದ್ದ ರಂಗನಾಥ, ಜನರನ್ನು ವಂಚಿಸಲು ರಘುನಾಥ್, ರಘು ಉತ್ತಮ್, ಅರ್ಜುನ್, ರಾಘವೇಂದ್ರ ಉತ್ತಮ್ ಎಂದು ನಾನಾ ಹೆಸರುಗಳನ್ನು ಇಟ್ಟುಕೊಂಡಿದ್ದ. ಎಲ್ಲಾ ಹೆಸರಿನಲ್ಲೂ ನಕಲಿ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡಿದ್ದ.

ನಂಜಯ್ಯನ ಪಾಳ್ಯದಲ್ಲಿ ಚೂಡಾಮಣಿ ಎಂಬುವವರಿಂದ 2013ರ ಏಪ್ರಿಲ್ ನಲ್ಲಿ ಗ್ಯಾಸ್ ಏಜನ್ಸಿಕೊಡಿಸುತ್ತೇನೆ ಎಂದು ರಂಗನಾಥ 5 ಲಕ್ಷ ರೂ ಪಡೆದಿದ್ದ. ಆದರೆ, ಡಿಸೆಂಬರ್ ಆದರೂ ಏಜನ್ಸಿ ದೊರೆಯದ ಕಾರಣ ಅವರು ನೆಲಮಂಗಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ರಂಗನಾಥನನ್ನು ಬಂಧಿಸಿದ್ದಾರೆ.

ಇಂಗ್ಲಿಷ್ ಎಂ.ಎ.ಮಾಡಿರುವ ಈತನ ವಿರುದ್ಧ ತುಮಕೂರು ನಗರ, ಗ್ರಾಮಾಂತರ, ತಿಪಟೂರು, ತುರುವೆಕರೆ ಪೊಲೀಸ್ ಠಾಣೆಗಳಲ್ಲಿ ವಂಚನೆಯ ದೂರುಗಳು ದಾಖಲಾಗಿವೆ. ಕಳೆದ ವರ್ಷ ನಕಲಿ ಡಿಡಿ ಸೃಷ್ಟಿಸಿ ಅದನ್ನು ಬ್ಯಾಂಕಿಗೆ ನೀಡಿ ಒಂದು ವಾರಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದ.

ಜೈಲಿನಿಂದ ಹೊರಗೆ ಬಂದ ಬಳಿಕ ಕೆಎಸ್ಆರ್ ಟಿಸಿ ಕಂಡಕ್ಟರ್, ರೇಷ್ಮೆ ಇಲಾಖೆ ಅಧಿಕಾರಿ ಮುಂತಾದ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಂಡು ಹಲವಾರು ಜನರಿಗೆ ನಾಮಹಾಕಿದ ಪ್ರಕರಣಗಳು ಈಗ ಬೆಳಕಿಗೆ ಬಂದಿವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

English summary
Around 3 lack cash seized from a Ranganath who arrested by Nelamangala police for cheating several people by posing as CBI officer. Ranganath belongs to Chikkanayakanahalli taluk. He created fake identity card in different names to cheat people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X