ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ರೂಪಾಯಿಗೆ ಸಿಟಿ ಸ್ಕ್ಯಾನ್, ವೈರಲ್ ವಿಡಿಯೋ ಸತ್ಯ ಬಹಿರಂಗ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ. ಕೊರೊನಾ ಸೋಂಕಿತನೊಬ್ಬ ಐದು ರೂಪಾಯಿಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡ್ತಾರೆ ಎಂಬ ಸಂಗತಿಯ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ ವಿಡಿಯೋ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ. ಈ ವಿಡಿಯೋ ವೈರಲ್ ಆದ ಪರಿಣಾಮ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಆಸ್ಪತ್ರೆಗೆ ಬರುತ್ತಿರುವ ಪೋನ್ ಕರೆ ಸ್ವೀಕರಿಸಲಾಗದೇ ಪೋನ್ ಆಪರೇಟರ್ಸ್ ಪಕ್ಕದಲ್ಲಿರುವ ನಿಮ್ಹಾನ್ಸ್‌ಗೆ ಸೇರುವಂತಾಗಿದೆ. ವಿಡಿಯೋ ಮಾಹಿತಿ ನಂಬಿ ಕೊರೊನಾ ಸೋಂಕಿತರು ಐದು ರೂಪಾಯಿ ಸಿಟಿ ಸ್ಕ್ಯಾನ್‌ಗಾಗಿ ಸಂಜಯ್ ಗಾಂಧಿ ಆಸ್ಪತ್ರೆ ಹಾದಿ ಹಿಡಿದಿದ್ದಾರೆ. ಕೊರೊನಾ ಸೋಂಕಿತರನ್ನು ಕಾಂಪೌಂಡ್ ಒಳಗೂ ಬಿಟ್ಟುಕೊಳ್ಳದೇ ಕಾಪಾಡಿಕೊಂಡು ಬಂದಿದ್ದ ಸಂಜಯ್ ಗಾಂಧಿ ಆಸ್ಪತ್ರೆ ಸಿಬ್ಬಂದಿ ಪೇಚಾಡುವಂತಾಗಿದೆ.

Recommended Video

ಕೊರೋನಾ ರೋಗಿಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಆದ CT ಸ್ಕ್ಯಾನ್ ಅನುಭವ!! | Oneindia Kannada

ಪೋನ್ ಬ್ಯುಸಿ : ನಿಮ್ಹಾನ್ಸ್ ಆಸ್ಪತ್ರೆಗೆ ಹೊಂದಿಕೊಂಡಿರುವ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಸಂಸ್ಥೆ ಗಂಭೀರ ಸ್ವರೂಪದ ಅಪಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡುವ ಸಂಸ್ಥೆ. ಇಲ್ಲಿ ಸಿಟಿ ಸ್ಕ್ಯಾನಿಂಗ್ ಇದೆ. ಆದರೆ, ಅದರ ಬೆಲೆ 2200 ರೂ. ಆಗುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರುವರಿಗೆ ಬೆಲೆಯಲ್ಲಿ ಕಡಿಮೆಯಾತ್ತದೆ. ಅಪಘಾತ ಪ್ರಕರಣಗಳಲ್ಲಿ ಅತಿದೊಡ್ಡ ಶಸ್ತ್ರ ಚಿಕಿತ್ಸೆ ಮಾಡುವ ಇಲ್ಲಿ ಕೊರೊನಾ ಸೋಂಕಿತರು ಪ್ರವೇಶ ಮಾಡುವಂತಿಲ್ಲ. ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಆಸ್ಪತ್ರೆಗೆ ಪ್ರತ್ಯೇಕ ಪೋನ್ ಸಂಪರ್ಕ ಜನರ ಅನುಕೂಲಕ್ಕಾಗಿ ಕಲ್ಪಿಸಲಾಗಿದೆ.

ಬೆಂಗಳೂರಿನ ಈ ಆಸ್ಪತ್ರೆಯಲ್ಲಿ ಅತಿ ಕಡಿಮೆ ಬೆಲೆಗೆ ಸಿಟಿ ಸ್ಕ್ಯಾನ್ ಪರೀಕ್ಷೆ !ಬೆಂಗಳೂರಿನ ಈ ಆಸ್ಪತ್ರೆಯಲ್ಲಿ ಅತಿ ಕಡಿಮೆ ಬೆಲೆಗೆ ಸಿಟಿ ಸ್ಕ್ಯಾನ್ ಪರೀಕ್ಷೆ !

ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಐದು ರೂಪಾಯಿಗೆ ಸಿಟಿ ಸ್ಕ್ಯಾನ್ ಮಾಡ್ತಿದ್ದಾರೆ. ಕೊರೊನಾ ಸೋಂಕಿತರು ಇಲ್ಲಿ ಅರ್ಧ ತಾಸಿನಲ್ಲಿ ರಿಪೋರ್ಟ್ ಪಡೆಯಬಹುದು ಎಂಬ ಕೊರೊನಾ ಸೋಂಕಿತ ವಿಡಿಯೋ ಮಾಡಿ ಫೇಸ್‌ಬುಕ್‌ಗೆ ಹಾಕಿದನೋ ಆ ಕ್ಷಣದಿಂದ ಸಂಜಯ್ ಗಾಂಧಿ ಆಸ್ಪತ್ರೆ ನಂಬರ್ ಬ್ಯುಸಿ. ಒನ್ಇಂಡಿಯಾ ಕನ್ನಡ ವತಿಯಿಂದ ನಲವತ್ತು ಸಲ ಕರೆ ಮಾಡಿದರೂ ನಂಬರ್ ಬ್ಯುಸಿ ಅಂತಲೇ ಬಂತು. ಆನಂತರ ಕರೆ ಸ್ವೀಕರಿಸಿದ ಟೆಲಿಪೋನ್ ಆಪರೇಟರ್.

Fact check: Real story of five rupees CT scan viral video post

ಹುಚ್ಚು ಹಿಡೀತಿದೆ ಎಂದ ಆಪರೇಟರ್ :

ಅದ್ಯಾವನೋ ಹುಚ್ಚು ಹಿಡಿದು ಆ ವಿಡಿಯೋ ಮಾಡಿದನೋ ಗೊತ್ತಿಲ್ಲ ಸಾರ್. ನಮಗೆ ಇಲ್ಲಿ ಪೋನ್ ಸ್ವೀಕರಿಸಲಾಗದೇ ಹುಚ್ಚು ಹಿಡಿತಿದೆ. ಪಕ್ಕದಲ್ಲಿಯೇ ನಿಮ್ಹಾನ್ಸ್‌ನಲ್ಲಿ ಹೋಗಿ ಸೇರುವುದು ಬಾಕಿ. ಜಯನಗರದಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ಬಡವರಿಗೆ ಕಡಿಮೆ ಬೆಲೆಗೆ ಸಿಟಿ ಸ್ಕ್ಯಾನ್ ಮಾಡ್ತಾರೆ. ಅವನು ಯಾವನೋ ಅಯೋಗ್ಯ ಸಂಜಯ್ ಗಾಂಧಿ ಆಸ್ಪತ್ರೆ ಎಂದು ನಮ್ಮ ಆಸ್ಪತ್ರೆ ಹೆಸರು ಹೇಳವ್ನೆ. ಆ ಕ್ಷಣದಿಂದ ಒಂದು ನಿಮಿಷ ಪೋನ್ ಇಡೋಕೆ ಪುರಸೊತ್ತು ಇಲ್ಲ. ನಾವು ಯಾವುದೋ ತುರ್ತು ಕರೆ ಎಂದು ಸ್ವೀಕರಿಸಿದರೆ, ಐದು ರೂಪಾಯಿಗೆ ಸಿಟಿ ಸ್ಕ್ಯಾನ್ ಮಾಡ್ತೀರಂತೆ ಹೌದಾ ಎಂದು ಕೇಳ್ತಾರೆ. ಎಷ್ಟು ಮಂದಿಗೆ ಅಂತ ಉತ್ತರಿಸಲಿ. ತೆಲೆ ಕೆಟ್ಟು ಗೊಬ್ಬರ ಆಗಿದೆ. ನಿಮ್ಹಾನ್ಸ್ ನಲ್ಲಿ ಬೆಡ್ ಕೊಟ್ಟೆ ಹೋಗಿ ಅಡ್ಮಿಟ್ ಆಗೋಣ ಅಂತಿದ್ದೀನಿ. ದಿನಕ್ಕೆ ಹತ್ತರಿಂದ ಇಪ್ಪತ್ತು ಕರೆಗಳು ಬರುತ್ತಿದ್ದವು. ವಿಡಿಯೋ ವೈರಲ್ ಆದ ಕ್ಷಣದಿಂದ ನೂರಾರು ಪೋನ್ ಕರೆ ಬರುತ್ತಿವೆ. ಸ್ವೀಕರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಯಾವನೋ ತರ್ಲೆ ಮಾಡಿದ ಎಡವಟ್ಟಿನಿಂದ ನಮ್ಮ ಜೀವ ಹೋಗುತ್ತಿದೆ, ದಯವಿಟ್ಟು ಜಯನಗರ ಜನರಲ್ ಆಸ್ಪತ್ರೆಗೆ ಹೋಗಿ. ಅಲ್ಲಿ ನಿಮಗೆ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡ್ತಾರೆ ಎಂದು ಪೋನ್ ಕರೆ ಕಡಿತಗೊಳಿಸಿದನು.

ಬಿಯು ನಂಬರ್ ಹೆಸರಿನಲ್ಲಿ ಬಡವರ ಸಮಾಧಿ ಮಾಡ್ತಿದೆಯಾ ಸರ್ಕಾರ ?ಬಿಯು ನಂಬರ್ ಹೆಸರಿನಲ್ಲಿ ಬಡವರ ಸಮಾಧಿ ಮಾಡ್ತಿದೆಯಾ ಸರ್ಕಾರ ?

Fact check: Real story of five rupees CT scan viral video post

ವಿಡಿಯೋ ವೈರಲ್ ಹುಡುಗ ಇವನೇ :

ಕೊರೊನಾ ಸೋಂಕಿತ ಅರವಿಂದ ಎಂಬಾತನೇ ವಿಡಿಯೋ ಪೋಸ್ಟ್ ಮಾಡಿದವ. ಆತ ಐದು ರೂಪಾಯಿಗೆ ಸಿಟಿಸ್ಕ್ಯಾನ್ ಮಾಡಿಸಿಕೊಂಡಿರುವುದು ಜಯನಗರ ಜನರಲ್ ಆಸ್ಪತ್ರೆಯಲ್ಲಿ. ಆದರೆ ಮಾತನಾಡುವ ಭರದಲ್ಲಿ ಸಂಜಯ್ ಗಾಂಧಿ ಆಸ್ಪತ್ರೆ ಎಂದು ಹೇಳಿದ್ದಾನೆ. ಮೊದಲು ಜಯನಗರ ಜನರಲ್ ಆಸ್ಪತ್ರೆಯನ್ನು ಸಂಜಯ್ ಗಾಂಧಿ ಆಸ್ಪತ್ರೆ ಎಂದೇ ಹೇಳಲಾಗುತ್ತಿತ್ತು. ಆತ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಸಿಟಿ ಸ್ಕ್ಯಾನ್ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದ. ನನ್ನ ಸ್ನೇಹಿತರೊಬ್ಬರು ನೀಡಿದ ಮಾಹಿತಿ ಮೇರೆಗೆ ಸಂಜಯ್ ಗಾಂಧಿ ಆಸ್ಪತ್ರೆ ಅಲ್ಲಿ ಕೇವಲ ಐದು ರೂಪಾಯಿ ನೀಡಿ ಹೊರ ರೋಗಿ ಚೀಟಿ ಪಡೆದೆ. ಆನಂತರ ಕೇವಲ 150 ರೂ. ಫಿಲ್ಮಿ ಚಾರ್ಜ್ ಎಂದು ಪಡೆದು ಕೇವಲ 155 ರೂ.ಗೆ ಸಿಟಿ ಸ್ಕ್ಯಾನ್ ವರದಿ ಪಡೆದುಕೊಂಡೆ. ಸಾರ್ವಜನಿಕರು ಸಾವಿರಾರು ರೂಪಾಯಿ ಖಾಸಗಿ ಲ್ಯಾಬ್ ಗಳಿಗೆ ಪಾವತಿ ಮಾಡುವ ಬದಲಿಗೆ ಇಲ್ಲಿಯೇ ಮಾಡಿಸಿಕೊಳ್ಳಬಹುದು ಎಂದು ಸಲಹೆ ಮಾಡಿದ್ದ. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಅದರ ಲಿಂಕ್ ಇಲ್ಲಿದೆ ನೋಡಿ.

English summary
Rs. 5 Rupees CT scan post viral at Sanjay Gandhi Hospital, Bengaluru Fact check by OneIndia Kannada know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X