ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಷಮೆಯಾಚನೆ ಸುದ್ದಿ ಅಲ್ಲಗೆಳೆದ ಸಂಸದ ತೇಜಸ್ವಿ ಸೂರ್ಯ

|
Google Oneindia Kannada News

ಬೆಂಗಳೂರು, ಮೇ 7: ಕೆಲ ಮಾಧ್ಯಮಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ (ಮೇ 5) ಸಂಜೆ 7 ಗಂಟೆಗೆ ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಂಗೆ ಭೇಟಿ ನೀಡಿ, ಅಲ್ಲಿ ಕೆಲಸ ಮಾಡುತ್ತಿದ್ದ 200 ಜನರ ಕ್ಷಮೆಯಾಚಿಸಿದ್ದಾರೆ ಎಂಬ ಸುದ್ದಿಯನ್ನು ಸಂಸದ ತೇಜಸ್ವಿ ಸೂರ್ಯ ಅವರ ಅಧಿಕೃತ ಕಚೇರಿ ಅಲ್ಲಗೆಳೆದಿದೆ.

Recommended Video

Tejasvi Surya ಯಾರ ಬಳಿಯೂ ಕ್ಷಮೆಯಾಚಿಸಿಲ್ಲ | Oneindia Kannada

ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಕೋವಿಡ್ ವಾರ್ ರೂಂ ಮೇಲೆ ದಾಳಿ ನಡೆಸಿ, ಅಲ್ಲಿ ಕೆಲಸ ಮಾಡುತ್ತಿದ್ದ 16 ಮುಸ್ಲಿಂ ಯುವಕರ ಹೆಸರನ್ನು ಓದಿದ್ದು, ಅವರು ಕೋವಿಡ್ ಬೆಡ್ ಬ್ಲಾಕಿಂಗ್ ಹಗರಣದ ಭಾಗವಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಕೋವಿಡ್ ವಾರ್ ರೂಂಗೆ ತೆರಳಿ ಕ್ಷಮೆ ಕೋರಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ, ಒಬ್ಬರಿಗೆ ಸುದ್ದಿ ಇಲ್ಲದಿದ್ದಾಗ, ಅವರು ನಕಲಿ ಸುದ್ದಿಗಳನ್ನು ಸೃಷ್ಠಿಸುತ್ತಾರೆ ಎಂದು ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

 Fact Check: Is Tejasvi Surya Apologises To Bengaluru War Room Staff

"ಕ್ಷಮಿಸಿ, ಇದು ನನ್ನ ಕಡೆಯಿಂದ ತಪ್ಪಾಗಿದೆ. ನನಗೆ ಒಂದು ಪಟ್ಟಿಯನ್ನು ನೀಡಲಾಯಿತು ಮತ್ತು ನಾನು ಅದನ್ನು ಓದಿದ್ದೇನೆ. ಕೋವಿಡ್ ವಾರ್ ರೂಂ ಮೇಲೆ ಪರಿಣಾಮ ಬೀರಿದೆ ಎಂದು ನನಗೆ ತಿಳಿದಿದೆ" ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

English summary
Fake News Buster: Is Tejasvi Surya Apologises to Bengaluru War Room Staff After Alleging They Were Running A Scam. Tejasvi Surya gives clarification in Twitter after news goes viral. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X