ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Fact Check: ಲಾಕ್‌ಡೌನ್‌ನಿಂದ ಅಡುಗೆ ಅನಿಲ ಪೂರೈಕೆ ನಿಲ್ಲುತ್ತಾ?

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೊರೊನಾದಿಂದ ದೇಶದಲ್ಲಿ ಲಾಕ್‌ಡೌನ್‌ ಕಾರ್ಮೋಡ ಕವಿದಿದೆ. ಲಾಕ್‌ಡೌನ್ ಬಗ್ಗೆ ಸುಳ್ಳು ಸುದ್ದಿಗಳಿಗೂ ಬರವಿಲ್ಲದಾಗಿದೆ.

ದೇಶದಲ್ಲಿ ಮುಂದಿನ ಮೂರು ತಿಂಗಳು ಅಥವಾ ಲಾಕ್‌ಡೌನ್ ಮುಗಿಯುವವರೆಗೂ ಇಂಡಿಯನ್ ಆಯಿಲ್ ಕಡೆಯಿಂದ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಸಿಗುವುದಿಲ್ಲ ಎಂಬ ಸುದ್ದಿ ಕಳೆದು ಮೂರು ದಿನಗಳಿಂದ ವೈರಲ್ ಆಗಿದೆ.

Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ?Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಆಯಿಲ್ ಸಂಸ್ಥೆ, 'ದೇಶದಲ್ಲಿ ನಾಗರಿಕರು ಪೆಟ್ರೋಲ್ ಡಿಸೇಲ್ ಹಾಗೂ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ' ಎಂದು ಭರವಸೆ ನೀಡಿದೆ.

Fact Check: Indian Oil Stopping The Supply Of Cooking Gas

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಆಯಿಲ್ ಸಂಸ್ಥೆಯ ಚೇರಮನ್ ಸಂಜೀವ್ ಸಿಂಗ್, 'ನಮ್ಮ ಗ್ರಾಹಕರಿಗೆ ಬೇಕಾಗುವಷ್ಟು ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲದ ಲಭ್ಯತೆ ನಮ್ಮ ಬಳಿ ಇದೆ. ಈ ಬಗ್ಗೆ ಗ್ರಾಹಕರು ನಿಶ್ಚಿಂತೆಯಿಂದ ಇರಿ' ಎಂದು ಅಭಯ ನೀಡಿದ್ದಾರೆ. ಅಲ್ಲದೇ ಡೀಲರ್‌ ಶಾಪ್‌ಗಳಲ್ಲಿ, ಬಂಕ್‌ಗಳಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. 15 ದಿನ ಮೊದಲೇ ಬುಕ್ಕಿಂಗ್ ಮಾಡಿ' ಎಂದು ತಿಳಿಸಿದ್ದಾರೆ.

ಪ್ರಸ್ತುತ ಸುಮಾರು 11 ಕೋಟಿ ಗ್ರಾಹಕರಿಗೆ ಇಂಡಿಯನ್ ಆಯಿಲ್ ಸಂಸ್ಥೆ ಅಡುಗೆ ಅನಿಲ ಸಿಲಿಂಡರ್‌ ಪೂರೈಸುತ್ತದೆ.

English summary
Fact Check: Indian Oil Stopping The Supply Of Cooking Gas and petroleum. Indian oils rejected this news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X