ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರಪ್ಪ ಅವರ ಹೆಸರನ್ನು ಹೀಗಾ ಅನುವಾದ ಮಾಡೋದು? ಫೇಸ್‌ಬುಕ್ ಅವಾಂತರ

|
Google Oneindia Kannada News

ಬೆಂಗಳೂರು, ನವೆಂಬರ್ 7: ವಿರೋಧಪಕ್ಷಗಳ ವಿರುದ್ಧ ನಡೆಸುವ ಪತ್ರಿಕಾಗೋಷ್ಠಿಗಳಲ್ಲಿ ತಮ್ಮ ಉಗ್ರ ಪ್ರತಾಪವನ್ನು ತೋರಿಸುವ ವಿ.ಎಸ್. ಉಗ್ರಪ್ಪ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ.

ಹೆಸರಿಗೆ ಅನ್ವರ್ಥದಂತೆ ಅವರು ಮಾತಿನಲ್ಲಿ ತಮ್ಮ ಉಗ್ರಸ್ವರೂಪವನ್ನು ಪ್ರದರ್ಶಿಸುತ್ತಿರುತ್ತಾರೆ. ಬಳ್ಳಾರಿ ಉಪ ಚುನಾವಣೆ ಕದನವನ್ನು ಅನೇಕರು ನಿಜವಾದ ಪೈಪೋಟಿ ಎಂದು ಅನೇಕರು ಕರೆದಿದ್ದರು. ಏಕೆಂದರೆ ಕಣದಲ್ಲಿ ಇದ್ದವರ ಹೆಸರಿನಲ್ಲಿಯೇ ಉಗ್ರ ಮತ್ತು ಶಾಂತ ಎರಡೂ ಇತ್ತು. ಕೊನೆಗೆ ಗೆಲುವು 'ಉಗ್ರ'ಪ್ಪ ಅವರ ಪಾಲಾಯಿತು.

ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು?ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು?

ಉಗ್ರಪ್ಪ ಅವರ ಹೆಸರೇ ಸೂಚಿಸುವಂತೆ ಅವರೊಬ್ಬ ಉಗ್ರ. ಅವರಿಗೆ ಬಳ್ಳಾರಿ ಜಿಲ್ಲೆ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಶ್ರೀರಾಮುಲು ಲೇವಡಿ ಮಾಡಿದ್ದರು.

Facebook auto translation vs ugrappa as terrorists in mb patil tweet

ಉಗ್ರಪ್ಪ ನಿಜಕ್ಕೂ ಉಗ್ರರೇ? ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ತಮ್ಮ ವಾಗ್ ಉಗ್ರತನವನ್ನು ಪ್ರದರ್ಶಿಸಬಲ್ಲರು. ಆದರೆ, ಅಂತರ್ಜಾಲ ಅನುವಾದದ ಯಡವಟ್ಟು ಕೂಡ ಉಗ್ರಪ್ಪ ಅವರನ್ನು 'ಉಗ್ರ' ಎಂದೇ ಪರಿಗಣಿಸಿದೆ.

ಉಗ್ರಪ್ಪ ಅವರನ್ನು ಅಭಿನಂದಿಸಿ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಅವರು ಮಾಡಿರುವ ಫೇಸ್‌ಬುಕ್ ಪೋಸ್ಟ್ ಈಗ ಎಲ್ಲಡೆ ಹರಿದಾಡುತ್ತಿದೆ.

ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ

ಎಂಬಿ ಪಾಟೀಲ್ ಅವರು ಬಳ್ಳಾರಿಯಲ್ಲಿ ಜಯಭೇರಿ ಭಾರಿಸಿದ ಉಗ್ರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿ ಕನ್ನಡದಲ್ಲಿ ಪೋಸ್ಟ್ ಮಾಡಿದ್ದರು.

ಆದರೆ, ಅದನ್ನು ಕೆಲವರು ಫೇಸ್‌ಬುಕ್ ಕಾಮೆಂಟ್ ಕೆಳಗೆ ಇರುವ ಟ್ರಾನ್ಸ್‌ಲೇಷನ್ ಆಯ್ಕೆ ಕ್ಲಿಕ್ ಮಾಡಿದ್ದಾಗ ಕಾಣಿಸಿದ್ದೇ ಬೇರೆ. ಕನ್ನಡದಿಂದ ಇಂಗ್ಲಿಷ್‌ಗೆ ಇಡೀ ಪೋಸ್ಟ್‌ಅನ್ನು ಅನುವಾದ ಮಾಡಿದ್ದ ಟ್ರಾನ್ಸ್‌ಲೇಷನ್ ಆಯ್ಕೆಯು, ಉಗ್ರಪ್ಪ ಅವರ ಹೆಸರನ್ನೂ ಅನುವಾದ ಮಾಡಿ ಅವಾಂತರ ಸೃಷ್ಟಿಸಿದೆ.

Facebook auto translation vs ugrappa as terrorists in mb patil tweet

ಶ್ರೀ ಉಗ್ರಪ್ಪ ಅವರಿಗೆ ಅಭಿನಂದನೆಗಳು ಎಂಬುದು ಇಂಗ್ಲಿಷ್‌ನಲ್ಲಿ ಕಂಗ್ರಾಜುಲೇಷನ್ಸ್ ಟು ಶ್ರೀ ಟೆರರಿಸ್ಟ್ಸ್ ಎಂದು ಅನುವಾದಗೊಂಡಿದೆ. ಇದು ಎಲ್ಲೆಡೆ ತಮಾಷೆಯ ವಸ್ತುವಾಗಿದೆ. ಗೂಗಲ್ ಮತ್ತು ಈ ರೀತಿ ಆಪ್ ಅನುವಾದಗಳನ್ನು ನಂಬಿಕೊಂಡರೆ ಇಂತಹ ಯಡವಟ್ಟುಗಳಾಗುತ್ತವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ನನ್ನ ಗೆಲುವಲ್ಲ, ಮತದಾರರ, ಸಿದ್ಧಾಂತದ ಗೆಲುವು: ಉಗ್ರಪ್ಪಇದು ನನ್ನ ಗೆಲುವಲ್ಲ, ಮತದಾರರ, ಸಿದ್ಧಾಂತದ ಗೆಲುವು: ಉಗ್ರಪ್ಪ

ಉಗ್ರಪ್ಪ ಅವರ ಹೆಸರು ಮಾತ್ರವಲ್ಲದೆ, ಸ್ವಯಂಚಾಲಿತ ಅನುವಾದದಲ್ಲಿ ವಾಕ್ಯಗಳೂ ತಪ್ಪಾಗಿ ಮೂಡಿಬಂದಿವೆ.

English summary
Facebook Auto translation system showed newly elected MP from Ballari VS Ugrappa as terrorists in MB Patil's facebook post. This translated version's screen shot goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X