ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನಗಳ ಮುಖಾಮುಖಿ ಡಿಕ್ಕಿ

By Nayana
|
Google Oneindia Kannada News

ಬೆಂಗಳೂರು, ಜು.12: ಬೆಂಗಳೂರಿನ ರಸ್ತೆಯಲ್ಲಿ ಬಸ್‌, ಕಾರು, ಬೈಕ್‌ ಡಿಕ್ಕಿ ಹೊಡೆಯುವುದು ಸಾಮಾನ್ಯ ಆದರೆ ಆಕಾಶದಲ್ಲೂ ವಿಮಾನಗಳು ಡಿಕ್ಕಿ ಹೊಡೆಯುವ ಪ್ರಸಂಗ ಬಂದು ಸ್ವಲ್ಪದರಲ್ಲೇ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿದ್ದ ಮಂಗಳವಾರ ಜು.10 ರಂದು ಅಂದು ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಿಂದ ಕೊಚ್ಚಿನ್‌ಗೆ ಇಂಡಿಗೋ ವಿಮಾನವೊಂದು ಹೊರಟಿತ್ತು, ಅದೇ ವೇಳೆಗೆ ಹೈದರಾಬಾದ್‌ನಿಂದ ಕೊಯಿಮತ್ತೂರಿಗೆ ಮತ್ತೊಂದು ಇಂಡಿಗೋ ವಿಮಾನ ಹೊರಟಿತ್ತು.

ಇನ್ಮೇಲೆ ಎಮಿರೇಟ್ಸ್ ಎಕಾನಮಿ ಕ್ಲಾಸ್ ನಲ್ಲಿ ಹಿಂದು ಆಹಾರ ಲಭ್ಯವಿರೋಲ್ಲ!ಇನ್ಮೇಲೆ ಎಮಿರೇಟ್ಸ್ ಎಕಾನಮಿ ಕ್ಲಾಸ್ ನಲ್ಲಿ ಹಿಂದು ಆಹಾರ ಲಭ್ಯವಿರೋಲ್ಲ!

ಬೆಂಗಳೂರಿನ ವಾಯುಮಾರ್ಗ ಪ್ರದೇಶದ ವ್ಯಾಪ್ತಿಯಲ್ಲಿ ಎರಡು ವಿಮಾನಗಳು ಪರಸ್ಪರ ಎದುರಾಗಿ ಕೇವಲ 4 ಮೈಲಿ ಅಂತರದಲ್ಲಿದ್ದಾಗ ಮುಖಾಮುಖಿ ಡಿಕ್ಕಿ ಹೊಡೆಯುವ ಕುರಿತಂತೆ ಎಟಿಸಿ ಸಿಸ್ಟಂ ಅಪಾಯದ ಸಂದೇಶ ರವಾನೆಯಾಯಿತು.

Face to face air crash misses in Bengaluru airspace

ಹೀಗಾಗಿ ಎರಡು ವಿಮಾನಗಳನ್ನು ಅಂತರವನ್ನು ದೂರ ಮಾಡಿಕೊಂಡು ಸಂಭವಿಸಬಹುದಾಗಿದ್ದ ಭಾರಿ ಅಪಾಯ ತಪ್ಪಿತು. ವಾಸ್ತವವಾಗಿ ಹೈದರಾಬಾದ್‌ನಿಂದ ಹೊರಟಿದ್ದ ವಿಮಾನಕ್ಕೆ 36 ಸಾವಿರ ಅಡಿ ಎತ್ತರದಲ್ಲಿ ಬೆಂಗಳೂರಿನಿಂದ ಹೊರಟಿದ್ದ ವಿಮಾನಕ್ಕೆ 28 ಸಾವಿರ ಅಡಿ ಎತ್ತರದಲ್ಲಿ ಹಾರಾಡಲಿ ಎಟಿಸಿ ಅವಕಾಶ ನೀಡಿತ್ತು, ಆದರೆ ಎರಡೂ ವಿಮಾನಗಳು ಕ್ರಮೇಣ 27300 ಅಡಿ ಎತ್ತರಕ್ಕೆ ಇಳಿದಿದ್ದರಿಂದ, ಕೇವಲ 200 ಮೀಟರ್‌ ಅಂತರದಲ್ಲಿ ಹಾರಾಟ ನಡೆಸಿದ್ದರಿಂದ ಇಂತಹ ಅಪಾಯ ಎದುರಾಗಿತ್ತು.

ಈ ಕುರಿತು ಏರ್‌ ಟ್ರಾಫಿಕ್‌ ಕಂಟ್ರೋಲ್‌ ಸ್ಪಷ್ಟನೆ ನೀಡಿದ್ದು, ಕೊಯಮತ್ತೂರ್‌, ಹೈದರಾಬಾದ್‌ ಮತ್ತು ಕೊಚ್ಚಿನ ವಿಮಾನಗಳು ಪರಸ್ಪರ ಎದುರಾದಾಗ ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಸಂದೇಶ ರವಾನಿಸಲಾಗಿದೆ.

ಆದರೆ ಘಟನೆ ನಡೆದು ಎರಡು ದಿನವಾದರೂ ಏರ್‌ ಇಂಡಿಗೊ ಘಟನೆ ಕುರಿತಂತೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

English summary
Two Indigo air crafts were narrow escape from face to face crash due to timely alert by TCAS-Resolution Advisory system near Bangalore on July 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X