ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 'ಫೇಸ್ ರೆಕಗ್ನಿಶನ್' ತಂತ್ರಜ್ಞಾನ

|
Google Oneindia Kannada News

ಬೆಂಗಳೂರು, ಜನವರಿ 11: ವಿದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಫೇಸ್ ರೆಕಗ್ನಿಶನ್ (ಮುಖ ಗುರುತಿಸುವ) ತಂತ್ರಜ್ಞಾನ ಐಟಿ ನಗರ ಬೆಂಗಳೂರಿಗೆ ಕಾಲಿಟ್ಟಿದೆ.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಈ ಫೇಶಿಯಲ್ ರೆಕಗ್ನಿಶನ್ ತಂತ್ರಜ್ಞಾನವುಳ್ಳ ಯಂತ್ರ ಸ್ಥಾಪನೆ ಮಾಡಲಾಗುತ್ತಿದ್ದು, ಅಪರಾಧ ನಿಯಂತ್ರಣದ ಉದ್ದೇಶದಿಂದ ಈ ಯಂತ್ರ ಅಳವಡಿಸಲಾಗುತ್ತಿದೆ.

ನಿರ್ಭಯಾ ನಿಧಿ ಅಡಿಯಲ್ಲಿ ರೈಲ್ವೆ ಇಲಾಖೆಗೆ 250 ಕೋಟಿ ದೊರೆತಿದ್ದು, ಅದನ್ನು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅಪರಾಧಗಳ್ನು ತಡೆಗಟ್ಟಲು ಬಳಸಲಾಗುತ್ತಿದೆ. ಅದರ ಅಂಗವಾಗಿಯೇ ರೈಲ್ವೆ ನಿಲ್ದಾಣಕ್ಕೆ ಬರುವ ಅಪರಾಧಿಗಳನ್ನು, ಪುಂಡರನ್ನು, ಆರೋಪಿಗಳನ್ನು ಗುರುತಿಸಲೆಂದು ಫೇಸ್ ರೆಕಗ್ನಿಶನ್ ತಂತ್ರಜ್ಞಾನಯುಕ್ತ ಯಂತ್ರವನ್ನು ಅಳವಡಿಸಲಾಗುತ್ತಿದೆ.

ಫೇಸ್‌ ರೆಕಗ್ನಿಶನ್ ಯಂತ್ರವನ್ನು ರೈಲ್ವೆ ನಿಲ್ದಾಣದ ಪ್ರವೇಶ, ನಿರ್ಗಮ ದ್ವಾರ ಸೇರಿ ಹಲವು ಕಡೆಗಳಲ್ಲಿ ಇಡಲಾಗುತ್ತದೆ. ಯಾವುದೇ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ರೈಲ್ವೆ ನಿಲ್ದಾಣಕ್ಕೆ ಬಂದರೆ ಈ ಯಂತ್ರಗಳು ಗುರುತಿಸಿ ಸಿಬ್ಬಂದಿಗೆ ಮಾಹಿತಿ ನೀಡುತ್ತದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ದತ್ತಾಂಶವನ್ನು ಮೊದಲೇ ಫೇಸ್‌ ರೆಕಗ್ನಿಶನ್ ಯಂತ್ರಕ್ಕೆ ಊಡಿಸಲಾಗಿರುತ್ತದೆ.

ಫೆಬ್ರವರಿ ಇಂದ ಕಾರ್ಯನಿರ್ವಹಿಸಲಿದೆ

ಫೆಬ್ರವರಿ ಇಂದ ಕಾರ್ಯನಿರ್ವಹಿಸಲಿದೆ

ಫೇಸ್ ರೆಕಗ್ನಿಶನ್ ಯಂತ್ರವನ್ನು ಕೆಲ ರಾಜ್ಯಗಳು ಈಗಾಗಲೇ ಬಳಸುತ್ತಿವೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಫೆಬ್ರವರಿ ಇಂದ ಫೇಸ್ ರೆಕಗ್ನಿಶನ್ ಯಂತ್ರ ಕಾರ್ಯನಿರ್ವಹಿಸಲಿದ್ದು, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಾರ್ಚ್‌ನಿಂದ ಕಾರ್ಯನಿರ್ವಹಿಸಲಿದೆ.

ಎಪ್ಪತ್ತು ಯಂತ್ರಗಳಿಗೆ ಬೇಡಿಕೆ ಇಟ್ಟಿರುವ ಬೆಂಗಳೂರು

ಎಪ್ಪತ್ತು ಯಂತ್ರಗಳಿಗೆ ಬೇಡಿಕೆ ಇಟ್ಟಿರುವ ಬೆಂಗಳೂರು

ಬೆಂಗಳೂರು ಒಂದಕ್ಕೆ ಎಪ್ಪತ್ತು ಫೇಸ್ ರೆಕಗ್ನಿಶನ್ ಯಂತ್ರಗಳ ಬೇಡಿಕೆಯನ್ನು ಇಡಲಾಗಿದ್ದು, ವಿವಿಧ ರೈಲ್ವೆ ಸ್ಟೇಶನ್‌ಗಳಲ್ಲಿ ಇದನ್ನು ಹಂತ-ಹಂತವಾಗಿ ಅಳವಡಿಸಲಾಗುತ್ತದೆ. ಇದರ 200 ಸಿಸಿಟಿವಿ ಕ್ಯಾಮೆರಾಗಳಿಗೂ ಬೇಡಿಕೆ ಇಡಲಾಗಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯೋಗ

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯೋಗ

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಫೇಸ್ ರೆಕಗ್ನಿಶನ್ ತಂತ್ರಜ್ಞಾನದ ಪ್ರಯೋಗ ಕಳೆದ ತಿಂಗಳು ಮಾಡಲಾಗಿದೆ. ಜನರಿಗೆ ಓಡಾಡಲು ಸಮಸ್ಯೆ ಆಗದಂತೆ ಫೇಸ್ ರೆಕಗ್ನಿಶನ್ ಯಂತ್ರ ಕಾರ್ಯನಿರ್ವಹಿಸಲಿದೆಯೇ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿಬ್ಬಂದಿ ಮಾಡಿಕೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಪ್ರಯೋಗ ನಡೆದಿದ್ದು, ಫೇಸ್‌ ರೆಕಗ್ನಿಶನ್ ಯಂತ್ರ ನಿರ್ವಹಿಸಲು ಕಂಟ್ರೋಲ್ ರೂಂ ಸಹ ತೆರೆಯಲಾಗಿದೆ.

ಫೇಸ್‌ ರೆಕಗ್ನಿಶನ್ ಸಿಸ್ಟಂ ನ ಅನುಕೂಲತೆಗಳೇನು?

ಫೇಸ್‌ ರೆಕಗ್ನಿಶನ್ ಸಿಸ್ಟಂ ನ ಅನುಕೂಲತೆಗಳೇನು?

ಫೇಸ್ ರೆಕಗ್ನಿಶನ್ ಸಿಸ್ಟಂ ಅಳವಡಿಸುವುದರಿಂದ ಬೇರೆ ರಾಜ್ಯಗಳಿಂದ ಅಪರಾಧಿಗಳು ನಗರ ಪ್ರವೇಶಿಸುವುದು ತಡೆಯಬಹುದಾಗಿದೆ. ಮಾನವ ಕಳ್ಳ ಸಾಗಣೆ ತಡೆಯಲು, ಮಹಿಳೆಯರ ಮೇಲೆ ದೌರ್ಜನ್ಯ ತಡೆಯಲು, ರೈಲ್ವೆ ನಿಲ್ದಾಣಗಳಲ್ಲಿ ನಡೆಯುವ ಕಳ್ಳತನಗಳನ್ನು ತಡೆಯಲು ಇದು ಸಹಕಾರಿ ಆಗಲಿದೆ.

English summary
Face Recognition system to be implemented in Bengaluru's KSR railway station in February. This will help to prevent criminal activity and crimes against women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X