ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕನಿಷ್ಠ ಮುಂದಿನ 2 ದಿನ ಭಾರೀ ಮಳೆ ಮುನ್ಸೂಚನೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬೆಂಗಳೂರು, ಅಕ್ಟೋಬರ್ 7: ಬೆಂಗಳೂರಿನಲ್ಲಿ ಭಾನುವಾರದಿಂದ ಬಿರುಸು ಪಡೆದಿರುವ ಮಳೆ ಇನ್ನಷ್ಟು ದಿನ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಭಾರೀ ಮಳೆಯಾಗಿ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ಮಂಗಳವಾರ ಸಂಜೆ ಬಿರುಸು ಪಡೆದು ಬುಧವಾರ ಬೆಳಗಿನ ಜಾವದವರೆಗೂ ನಿರಂತರವಾಗಿ ಮಳೆಯಾಗಿದೆ.

1997ರ ನಂತರ ಅಕ್ಟೋಬರ್‌ ತಿಂಗಳಿನ ಗರಿಷ್ಠ ಮಳೆ ದಾಖಲಿಸಿದ ಬೆಂಗಳೂರು1997ರ ನಂತರ ಅಕ್ಟೋಬರ್‌ ತಿಂಗಳಿನ ಗರಿಷ್ಠ ಮಳೆ ದಾಖಲಿಸಿದ ಬೆಂಗಳೂರು

ಇದೀಗ ನಗರದಲ್ಲಿ ಇನ್ನೂ ಕನಿಷ್ಠ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಈ ಅವಧಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.

 Extremely Heavy Rainfall To Lash Bengaluru Predics IMD

ಅಕ್ಟೋಬರ್ 5ರಿಂದ 6ರವರೆಗೆ ರಾಜಾಜಿನಗರದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಒಂದು ದಿನದಲ್ಲಿ 61 ಎಂಎಂ ಮಳೆ ದಾಖಲಾಗಿದೆ. ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಸಾಧಾರಣ ಪ್ರಮಾಣದ ಮಳೆ ದಾಖಲಾಗಿದೆ.

ಯಲಹಂಕ ವಲಯದ ಬಿಬಿಎಂಪಿ ವ್ಯಾಪ್ತಿಯ ಚೌಡೇಶ್ವರಿ ಲೇಔಟ್‌ನಲ್ಲಿ 49 ಎಂಎಂ ಮಳೆಯಾಗಿದೆ. ದೊಡ್ಡನೆಕ್ಕುಂದಿ, ಮಹದೇವಪುರ ವಲಯದಲ್ಲಿ 46.6 ಎಂಎಂ ಮಳೆಯಾಗಿದೆ. ಅಟ್ಟೂರು, ಯಲಹಂಕದಲ್ಲಿ ಕ್ರಮೇಣ 45.5 ಎಂಎಂ ಹಾಗೂ 42 ಎಂಎಂ ಮಳೆಯಾಗಿದೆ.

ಮಲೆನಾಡಾದ ಬೆಂಗಳೂರು; ರಾತ್ರಿಯಿಂದ ಸುರಿಯುತ್ತಿರುವ ಮಳೆಮಲೆನಾಡಾದ ಬೆಂಗಳೂರು; ರಾತ್ರಿಯಿಂದ ಸುರಿಯುತ್ತಿರುವ ಮಳೆ

ಮಂಗಳವಾರ ರಾತ್ರಿಯಿಡೀ ನಿರಂತರ ಮಳೆ ಸುರಿದ ಪರಿಣಾಮವಾಗಿ ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದವು. ಬುಧವಾರ ಬೆಳಿಗ್ಗೆ ಹಲವೆಡೆ ಟ್ರಾಫಿಕ್ ಜಾಂ ಉಂಟಾಗಿತ್ತು.

 Extremely Heavy Rainfall To Lash Bengaluru Predics IMD

ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮವಾಗಿ ಬೆಂಗಳೂರು ಹಾಗೂ ರಾಜ್ಯದ ಉತ್ತರ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ರಾಜ್ಯಗಳಲ್ಲಿಯೂ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ.

ಬೆಂಗಳೂರಿನಲ್ಲಿ ಅ.3ರಂದು ಗರಿಷ್ಠ ಮಳೆ ದಾಖಲು:
ಬೆಂಗಳೂರು ನಗರ ಭಾನುವಾರ, ಅಕ್ಟೋಬರ್ 3ರಂದು ಗರಿಷ್ಠ ಪ್ರಮಾಣದ ಮಳೆ ದಾಖಲಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ 1997ರ ನಂತರ ದಾಖಲಾದ ಗರಿಷ್ಠ ಮಳೆ ಪ್ರಮಾಣ ಇದಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ತಜ್ಞರು ಮಾಹಿತಿ ನೀಡಿದ್ದು, 'ಬೆಂಗಳೂರಿನಲ್ಲಿ ಭಾನುವಾರ ಒಟ್ಟಾರೆಯಾಗಿ 63.8 ಮಿ.ಮೀ. ಮಳೆಯಾಗಿದೆ. ನಾಗರಭಾವಿ ಪ್ರದೇಶದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ' ಎಂದು ತಿಳಿಸಿದ್ದಾರೆ. ನಾಗರಭಾವಿಯಲ್ಲಿ ಭಾನುವಾರ ಒಂದೇ ದಿನ 117 ಮಿ.ಮೀ. ಮಳೆಯಾಗಿದೆ. ಆರ್. ಆರ್‌. ನಗರ ವಲಯದಲ್ಲಿನ ಜ್ಞಾನಭಾರತಿ ವಾರ್ಡ್‌ನಲ್ಲಿ 115 ಮಿ. ಮೀ ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ಮಾಹಿತಿ ಒದಗಿಸಿದೆ.

ರಾಜರಾಜೇಶ್ವರಿ ನಗರ, ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿನ ಹಲವು ವಾರ್ಡ್‌ಗಳಲ್ಲಿ ಭಾನುವಾರ ತಡರಾತ್ರಿ 100 ಮಿ.ಮೀಗೂ ಹೆಚ್ಚಿನ ಮಳೆಯಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಹೆಬ್ಬಾಳ, ಕುರುಬರಹಳ್ಳಿ, ಪೈಪ್‌ಲೈನ್ ರಸ್ತೆ, ಸಂಪಂಗಿರಾಮನಗರ, ಹಳೆ ವಿಮಾನ ನಿಲ್ದಾಣ ರಸ್ತೆ, ರಿಚ್ಮಂಡ್ ಟೌನ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಗರಭಾವಿಯ ಬಿಡಿಎ ಲೇಔಟ್, ಮಲ್ಲತ್ತಹಳ್ಳಿ, ರಾಮಮೂರ್ತಿ ನಗರ ಮುಂತಾದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ.

ಭಾನುವಾರ, ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿದೆ. ಬಿಬಿಎಂಪಿ ಮಳೆಗಾಲದ ನಿರ್ವಹಣೆಗೆ 63 ಉಪ ವಿಭಾಗಗಳಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಅಕ್ಟೋಬರ್ ಅಂತ್ಯದವರೆಗೂ ಈ ನಿಯಂತ್ರಣ ಕೊಠಡಿಗಳು ಕಾರ್ಯ ನಿರ್ವಹಿಸಲಿವೆ.

ರಾಜ್ಯದಲ್ಲಿ ಅಕ್ಟೋಬರ್ 10ರವರೆಗೂ ಮಳೆ ಮುನ್ಸೂಚನೆ:
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಅಕ್ಟೋಬರ್ 10ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುರುವಾರದಿಂದ ರಾಜ್ಯದಲ್ಲಿ ಮಳೆ ಅಬ್ಬರ ತಗ್ಗಲಿದೆ. ಇದಾಗ್ಯೂ ಅಕ್ಟೋಬರ್ 10ರ ತನಕ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

Recommended Video

ಬುಮ್ರಾ ಶಮಿಯನ್ನು ಮೀರಿಸಿ ಕ್ರಿಕೆಟ್ ಲೋಕದಲ್ಲಿ ದಾಖಲೆ ಬರೆದ ಬೌಲರ್ | Oneindia Kannada

English summary
India Meteorological Department predicts that the bengaluru city will receive extremely heavy rainfall for at least two more days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X