ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌1ಎನ್1, ಮಂಕಿಪಾಕ್ಸ್ ಪತ್ತೆಗೆ ತ್ಯಾಜ್ಯ ನೀರು ಕಣ್ಗಾವಲು ವಿಸ್ತರಣೆ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಕೋವಿಡ್ 19 ಅನ್ನು ಪತ್ತೆ ಮಾಡುತ್ತಿದ್ದ ತ್ಯಾಜ್ಯ ನೀರಿನ ಕಣ್ಗಾವಲು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಇನ್ನು ಮುಂದೆ ಎಚ್‌1ಎನ್1, ಮಂಕಿಪಾಕ್ಸ್ ಅನ್ನು ಪತ್ತೆ ಹಚ್ಚಲಿದೆ.

ತ್ಯಾಜ್ಯನೀರಿನ ಕಣ್ಗಾವಲು ಪಡೆ ತ್ಯಾಜ್ಯ ನೀರಿನಲ್ಲಿನ ವೈರಸ್‌, ವೈರಸ್ ಪ್ರಬೇಧ ಬಗ್ಗೆ ಪತ್ತೆ ಹೆಚ್ಚು ಕಾರ್ಯ ಮಾಡುತ್ತಿತ್ತು. ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಅದು ತನ್ನ ಕಾರ್ಯ ವ್ಯಾಪ್ತಿಯನ್ನು ಎಚ್‌1ಎನ್1, ಮಂಕಿಪಾಕ್ಸ್‌ವರೆಗೆ ವಿಸ್ತರಿಸಿದೆ.

ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಸಂಜೆ ಮಳೆ ಎಚ್ಚರಿಕೆಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಸಂಜೆ ಮಳೆ ಎಚ್ಚರಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜ್ವರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಕಾರಣದಿಂದ ನಿಖರವಾದ ಕಾರಣ ತಿಳಿಯಲು ತ್ಯಾಜ್ಯನೀರಿನ ಕಣ್ಗಾವಲು ಪಡೆ ಪತ್ತೆ ಹಚ್ಚುವಿಕೆ ಕಾರ್ಯ ಪೂರಕವಾಗಿ ಕೆಲಸ ಮಾಡುತ್ತದೆ.

Extend of waste water surveillance for detection H1N1, monkeypox

ಸುಮಾರು ಒಂದು ವರ್ಷದ ಹಿಂದೆ ತ್ಯಾಜ್ಯನೀರಿನ ಕಣ್ಗಾವಲು ಪ್ರಾರಂಭವಾಗಿದ್ದು, ಅದು ಈವರೆಗೆ ಆರೋಗ್ಯ ಇಲಾಖೆ ಬಯಸುವ ನಿರೀಕ್ಷಿತ ಆರೋಗ್ಯ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಿತ್ತು. ಅಂದರೆ ನಗರದಲ್ಲಿನ ತ್ಯಾಜ್ಯನೀರಿನಿಂದ ಹರುತ್ತಿದೆ ಎನ್ನಲಾದ ಕೋವಿಡ್ -19 ವೈರಲ್ ಪತ್ತೆಹಚ್ಚುವಲ್ಲಿ ತನ್ನ ಗಮನ ಕೇಂದ್ರೀಕರಿಸಿತ್ತು.

ಬಿಬಿಎಂಪಿ ಚುನಾವಣೆ: ಪ್ರಕರಣ ಮತ್ತೆ ಹೈಕೋರ್ಟ್‌ಗೆ ವಾಪಸ್ಬಿಬಿಎಂಪಿ ಚುನಾವಣೆ: ಪ್ರಕರಣ ಮತ್ತೆ ಹೈಕೋರ್ಟ್‌ಗೆ ವಾಪಸ್

ನಿತ್ಯ ನಗರದಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳು ಕೇವಲ ಜ್ವರ, ಎಷ್ಟು ಕೋವಿಡ್ ಎಂದು ಪ್ರತ್ಯೇಕಿಸಲು ವ್ಯವಸ್ಥೆ ಮಾಡುವುದು, ಅದರ ಮೇಲ್ವಿಚಾರಣೆಯ ಅವಶ್ಯಕತೆಯಿದೆ. ಸಾಂಕ್ರಾಮಿಕ ರೋಗಗಳ ಕಣ್ಗಾವಲು ವೈದ್ಯಕೀಯ ಕ್ಷೇತ್ರದಲ್ಲಿ ಏಕಾಎಕಿ ಬಂದೊದಗುವ ಆರೋಗ್ಯ ಸವಾಲು ಎದುರಿಸಲು ನೆರವಾಗಲಿದೆ ಎಂದು ಈ ಕಣ್ಗಾವಲನ್ನು ನಿರಂತರವಾಗಿ ನಡೆಸು್ತಿರುವ ಡಾ. ಏಂಜೆಲಾ ಚೌಧುರಿ ತಿಳಿಸಿದರು.

ಆಗಸ್ಟ್ 15ರಿಂದ ಕಣ್ಗಾವಲು ಕೆಲಸ ಆರಂಭ; ಕೋವಿಡ್ ಹೊರತುಪಡಿಸಿ ಇತರ ಸಾಂಕ್ರಾಮಿಕ ರೋಗಗಳ ಪತ್ತೆ ಮಾಡುವ ಕಣ್ಗಾವಲು ಇದೇ ಆಗಸ್ಟ್ 15ರಿಂದ ಆರಂಭವಾಗಿದೆ. ಇತರ ಹೊಸ ಸಾಂಕ್ರಾಮಿಕಗಳ ಪರೀಕ್ಷಾ ಪತ್ತೆಗೆ, ಅದರ ಸ್ಪಷ್ಟ ಚಿತ್ರಣವನ್ನು ಪಡೆಯಲು ಕನಿಷ್ಠ ಒಂದು ತಿಂಗಳು ಹಿಡಿಯಬಹುದು ಎಂದು ತಜ್ಞರು ಹೇಳಿದ್ದಾರೆ.

Extend of waste water surveillance for detection H1N1, monkeypox

ನಾವು ಈಗಷ್ಟೇ ಈ ಕಣ್ಗಾವಲು ಆರಂಬಿಸಿದ್ದೇವೆ. ಪ್ರತಿ ವಾರ ನಾವು ಒಂದು ಪ್ರದೇಶದಿಂದ ಕನಿಷ್ಠ ಎರಡು ಮಾದರಿಗಳನ್ನು ಸಂಗ್ರಹಿಸುತ್ತೇವೆ. ಅದರಂತೆ ಮಾಸಿಕವಾಗಿ ನಾವು ಪ್ರತಿ ಪ್ರದೇಶದಿಂದ ಕನಿಷ್ಠ ನಾಲ್ಕು ಮಾದರಿಗಳನ್ನು ಸಂಗ್ರಹಿಸುತ್ತೇವೆ. ಪರೀಕ್ಷೆ ನಂತರ ಸಾಂಕ್ರಾಮಿಕ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದರು

ಈಗಾಗಲೇ ತೆಗೆದುಕೊಂಡ ಕೆಲವು ಮಾದರಿಗಳು ಸೋಂಕಿನ ಇರುವಿಕೆಯನ್ನು ಬಹಿರಂಗಪಡಿಸಿದ್ದವು. ಒಂದು ಸೋಂಕು ವ್ಯಕ್ತಿಗೆ ತಗುಲಿದಾಗ ಆತನ ಲಕ್ಷಣಗಳು, ಆ ಬಗ್ಗೆ ಆರೋಗ್ಯ ಇಲಾಖೆ ಕೈಗೊಳ್ಳಬೇಕಾದ ನಿರ್ಧಾರಗಳು ಮತ್ತು ಸೂಕ್ತ ವರದಿಯನ್ನು ಇಲಾಖೆಗೆ ರವಾನಿಸಲು ಕಣ್ಗಾವಲು ಹೆಚ್ಚು ಪ್ರಯೋಜನವಾಗುತ್ತದೆ ಎಂದರು.

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಕೆ. ವಿ. ಮಾತನಾಡಿ, "ಪ್ರಸ್ತುತ ಸಂದರ್ಭದಲ್ಲಿ ಸಮುದಾಯ ಮಟ್ಟದಲ್ಲಿ ವಿವಿಧ ರೋಗಗಳು ಹರಡುವಿಕೆ ಅರ್ಥಮಾಡಿಕೊಳ್ಳಲು, ಅದರ ನಿಯಂತ್ರಣಕ್ಕೆ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಲು ತ್ಯಾಜ್ಯ ನೀರಿನ ಕಣ್ಗಾವಲು ಮುಖ್ಯವಾಗಿರುತ್ತದೆ" ಎಂದು ಹೇಳಿದರು.

English summary
Extend of waste water surveillance for detection H1N1, monkeypox.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X