ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ರೈಲು ರಾತ್ರಿ 10ರ ತನಕ ಸಂಚರಿಸಲಿ ಶಾಸಕರ ಒತ್ತಾಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16; ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿರುವಾಗ ಜನರು ಸಾರ್ವಜನಿಕ ಸಾರಿಗೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ನಮ್ಮ ಮೆಟ್ರೋ ರೈಲು ಸೇವೆಯ ಸಮಯವನ್ನು ವಿಸ್ತರಣೆ ಮಾಡಬೇಕು ಎಂದು ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ, ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವಾರು ಶಾಸಕರು ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

 ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಬೆಂಗಳೂರಿನ ಮೊದಲ ನಿಯೋ ಮೆಟ್ರೋ ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಬೆಂಗಳೂರಿನ ಮೊದಲ ನಿಯೋ ಮೆಟ್ರೋ

"ಮೆಟ್ರೋ ರೈಲು ರಾತ್ರಿ 10 ಗಂಟೆಯ ತನಕವಾದರೂ ಸಂಚಾರ ನಡೆಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವಾಗ ಮೆಟ್ರೋ ರೈಲು ಸಂಚಾರದ ಅವಧಿ ಕಡಿತಗೊಳಿಸುವುದು ಸರಿಯಲ್ಲ. ಅಧಿಕಾರಿಗಳು 20 ಅಥವ 30 ನಿಮಿಷಗಳ ಅಂತರದಲ್ಲಿ ರೈಲನ್ನು ಓಡಿಸುವ ಮೂಲಕ ಹೆಚ್ಚು ಕಾಲ ಸಂಚಾರ ನಡೆಸಲು ಅವಕಾಶ ನೀಡಬೇಕು" ಎಂದು ಸೌಮ್ಯಾ ರೆಡ್ಡಿ ಹೇಳಿದ್ದಾರೆ.

ನಮ್ಮ ಮೆಟ್ರೋ ಕಾರ್ಯಕ್ರಮದಲ್ಲಿ ಕನ್ನಡ ಏಕಿಲ್ಲ?; ಸ್ಪಷ್ಟನೆ ನಮ್ಮ ಮೆಟ್ರೋ ಕಾರ್ಯಕ್ರಮದಲ್ಲಿ ಕನ್ನಡ ಏಕಿಲ್ಲ?; ಸ್ಪಷ್ಟನೆ

Extend Namma Metro Operations Till 10 PM MLAs Urge The Govt

"ಆಗ ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಮೆಟ್ರೋ ರೈಲಿನ ಸಂಚಾರದ ಅವಧಿ ಕಡಿತಗೊಳಿಸಲಾಗಿತ್ತು. ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ರೈಲು ಸಂಚಾರದ ಅವಧಿಯನ್ನು ಕನಿಷ್ಠ 2 ಗಂಟೆ ವಿಸ್ತರಣೆ ಮಾಡಬೇಕು" ಎಂದು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಒತ್ತಾಯಿಸಿದರು.

ಹೊಸಕೋಟೆಗೆ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಿ ಹೊಸಕೋಟೆಗೆ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಿ

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, "ಬಸ್, ರೈಲು, ಮೆಟ್ರೋ ರೈಲುಗಳ ಪ್ರಯಾಣಿಕರು ಬೇರೆ ಬೇರೆ. ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಮೆಟ್ರೋ ರೈಲು ಕನಿಷ್ಠ ರಾತ್ರಿ 10.30ರ ತನಕ ಸಂಚಾರ ನಡೆಸಬೇಕು" ಎಂದು ಆಗ್ರಹಿಸಿದರು.

ಹೆಬ್ಬಾಳ ಶಾಸಕ ಬೈರತಿ ಸುರೇಶ್, ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಸಹ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಿದರೆ ಕಾರ್ಮಿಕ ವಲಯಕ್ಕೆ ಅನುಕೂಲವಾಗಲಿದೆ ಎಂದು ಶಾಸಕರುಗಳ ಮಾತಿಗೆ ಬೆಂಬವನ್ನು ಸೂಚಿಸಿದರು.

ಲಾಕ್‌ಡೌನ್ ಘೋಷಣೆ ಮಾಡಿದಾಗ ನಮ್ಮ ಮೆಟ್ರೋ ರೈಲು ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅನ್‌ಲಾಕ್ ಘೋಷಣೆ ಬಳಿಕ ನಮ್ಮ ಮೆಟ್ರೋ ಸಂಚಾರ ಪುನಃ ಆರಂಭವಾಗಿದೆ. ಆದರೆ ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ರಾತ್ರಿ 9 ಗಂಟೆ ತನಕ ಮಾತ್ರ ರೈಲು ಸಂಚಾರ ನಡೆಸುತ್ತಿದೆ.

ಕೋವಿಡ್ ಪರಿಸ್ಥಿತಿಗೂ ಮೊದಲು ಬೆಳಗ್ಗೆ 5 ರಿಂದ ರಾತ್ರಿ 11ರ ತನಕ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿದ್ದವು. ಪ್ರತಿದಿನ ಸುಮಾರು 3 ಲಕ್ಷಕ್ಕೂ ಅಧಿಕ ಜನರು ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದರು. ಈಗ ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ಮಾತ್ರ ರೈಲು ಸಂಚಾರ ನಡೆಸುತ್ತಿವೆ.

ಪ್ರಸ್ತುತ ನಮ್ಮ ಮೆಟ್ರೋದ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ನೇರಳೆ ಮಾರ್ಗದಲ್ಲಿ ರೈಲು ಇಷ್ಟು ದಿನ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ತನಕ ಸಂಚಾರ ನಡೆಸುತ್ತಿತ್ತು. ಈಗ ಅದನ್ನು ಕೆಂಗೇರಿ ಬಸ್ ನಿಲ್ದಾಣದ ತನಕ ವಿಸ್ತರಣೆ ಮಾಡಲಾಗಿದೆ.

ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಯಲಚೇನಹಳ್ಳಿ ತನಕ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಜನದಟ್ಟಣೆ ಸಂದರ್ಭದಲ್ಲಿ 5 ನಿಮಿಷಕ್ಕೊಂದು ರೈಲು, ಸಾಮಾನ್ಯ ಅವಧಿಯಲ್ಲಿ 10 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತದೆ.

ಬೆಂಗಳೂರು ನಗರದಲ್ಲಿ ಬಿಎಂಟಿಸಿ ಹೊರತುಪಡಿಸಿದರೆ ಅನೇಕ ಜನರು ಸಂಚಾರಕ್ಕಾಗಿ ನಮ್ಮ ಮೆಟ್ರೋ ಅವಲಂಬಿಸಿದ್ದಾರೆ. ಈಗ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯೂ ಮುಗಿದಿದ್ದು, ಜನರು ಕಚೇರಿಗಳಿಗೆ ತೆರಳುತ್ತಿದ್ದಾರೆ. ಆದರೆ ಮೆಟ್ರೋ ರೈಲಿನ ಅವಧಿ ಕಡಿಗೊಂಡಿರುವುದರಿಂದ ರಾತ್ರಿ ವೇಳೆ ಹೆಚ್ಚಿನ ದರ ನೀಡಿ ಕ್ಯಾಬ್ ಹತ್ತುವುದು ಅನಿವಾರ್ಯವಾಗಿದೆ.

Recommended Video

ಪೆಟ್ರೋಲ್ ಡೀಸೆಲ್ GST ವ್ಯಾಪ್ತಿಗೆ ಬಂದ್ರೆ ಪೆಟ್ರೋಲ್ ಬೆಲೆ ಇಷ್ಟೊಂದು ಕಮ್ಮಿಯಾಗುತ್ತಾ? | Oneindia Kannada

English summary
Extend Namma Metro operations in Bengaluru. Train should run till 10 pm various MLA's demand the Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X