ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KSRTC:ಮಹಾವೀರ ಜಯಂತಿ, ಗುಡ್ ಫ್ರೈಡೇಯಂದು ಹೆಚ್ಚುವರಿ ಬಸ್

|
Google Oneindia Kannada News

ಬೆಂಗಳೂರು, ಮಾರ್ಚ್ 28: ಬೆಂಗಳೂರು: ಮಹಾವೀರ ಜಯಂತಿ ಹಾಗೂ ಗುಡ್ ಪ್ರೈಡೇ ಹಬ್ಬದ ಅಂಗವಾಗಿ ಕೆಎಸ್ ಆರ್‌ಟಿಸಿ 800ರಿಂದ 850 ಹೆಚ್ಚುವರಿ ಬಸ್‌ಗಳನ್ನು ರಾಜ್ಯಾದ್ಯಂತ ಓಡಿಸಲು ತೀರ್ಮಾನಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಚ್ 28 ರಿಂದ ಮಾರ್ಚ್ 31ರವರೆಗೆ ಬೆಂಗಳೂರಿನಿಂದ ರಾಜ್ಯದ ಇತರೆಡೆ ಹಾಗೂ ಹೊರರಾಜ್ಯಗಳಿಗೆ ಹೆಚ್ಚುವರಿ ಬಸ್‌ಗಳು ತೆರಳಲಿದ್ದು, ಏಪ್ರಿಲ್ 1 ರಿಂದ ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರರಾಜ್ಯದ ಪ್ರಮುಖ ನಗರಗಳಿಂದ ಬೆಂಗಳೂರಿಗೆ ವಾಪಸ್ ಸಂಚರಿಸಲಿವೆ.

726 ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ726 ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ

ವಿಶೇಷ ಬಸ್‌ಗಳು ಬೆಂಗಳೂರಿನ ಕೆಂಪೇಗೌಡ್ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ ಮತ್ತಿತರ ಪ್ರದೇಶಗಳಿಗೆ ತೆರಳಲಿವೆ.

Exstra KSRTC buses for Good Friday, Mahaveer Jayanti

ಇನ್ನು ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿಗೆ ವಿಶೇಷ ಬಸ್‌ಗಳು ಹೊರಡಲಿವೆ.

ಇನ್ನು ಪ್ರೀಮಿಯರ್ ವಿಶೇಷ ಬಸ್‌ಗಳು ಶಾಂತಿನಗರ ಡಿಪೋ ಬಸ್ ನಿಲ್ದಾಣದಿಂದ ಮಧುರೈ, ಕುಂಬಕೋಣಂ, ತಿರುಚ್ಚಿ, ಚೆನ್ನೈ, ಕೊಯಮತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್ ಹಾಗೂ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ವಿವಿಧೆಡೆ ತೆರಳಲಿವೆ.

ಇದಲ್ಲದೇ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ, ಜಯನಗರ ನಾಲ್ಕನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ, ಮಲ್ಲೇಶ್ವರ 18ನೇ ಕ್ರಾಸ್, ಬನಶಂಕರಿ, ಜೀವನಬಿಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಸೆಟ್‌ಲೈಟ್ ಬಸ್ ನಿಲ್ದಾಣದಿಂದ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತಿತರ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ.

ಏಕಕಾಲಕ್ಕೆ ನಾಲ್ಕು ಟಿಕೆಟ್ ಗಳನ್ನು ಕಾಯ್ದರಿಸಿದಲ್ಲಿ ಶೇ.5ರಷ್ಟು ಹಾಗೂ ಮರು ಪ್ರವಾಸದ ಟಿಕೆಟ್ (ರಿಟರ್ನ್ ಜರ್ನಿ) ಕಾಯ್ದಿರಿಸಿದರೆ ಶೇ.10ರಷ್ಟು ರಿಯಾಯಿತಿಯನ್ನು ಕೆಎಸ್ಆರ್ ಟಿಸಿ ಘೋಷಿಸಿದೆ.

English summary
In view of Mahaveer Jayanti anf Good Friday on Thursday and Friday respectively,the KSRTC has made elaborate arrangements for operating 800-850 extra buses in addition to the existing schedules to provide transport facility to travelling public from March 28 to Marxh 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X