ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಡೆಂಗ್ಯೂ ಹೆಚ್ಚಳ: ಎನ್‌ಎಸ್‌1 VS ಎಲಿಸಾ ಪರೀಕ್ಷೆ

|
Google Oneindia Kannada News

ಬೆಂಗಳೂರು, ಜುಲೈ 30: ಡೆಂಗ್ಯೂ ರೋಗದ ಲಕ್ಷಣಗಳು ಕಂಡುಬಂದರೆ ಮೊದಲು 'ಎಲಿಸಾ'(Enzyme-Linked Immunosorbent Assay) ಪರೀಕ್ಷೆ ಮಾಡಿಸಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಕೆಲವು ವೈದ್ಯರು ಎಲಿಸಾ ಟೆಸ್ಟ್ ನಿಧಾನ ಗತಿಯಲ್ಲಿ ಆಗುತ್ತದೆ, ಜೊತೆಗೆ ಹೆಚ್ಚು ಹಣವನ್ನೂ ಕೂಡ ತೆರಬೇಕಾಗುತ್ತದೆ. ಎನ್‌ಎಸ್‌1 ಟೆಸ್ಟ್ನಿಂದ ಸುಲಭವಾಗಿ ಪತ್ತೆಯಾಗಲಿದೆ ಎಂದು ಹೇಳುತ್ತಿದ್ದಾರೆ.

ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ

ಆರೋಗ್ಯ ಇಲಾಖೆಯು ಎಲಿಸಾ ಪರೀಕ್ಷೆಯಿಂದ ಮಾತ್ರ ಡೆಂಗ್ಯೂವನ್ನು ಪತ್ತೆ ಹಚ್ಚಬಹುದಾಗಿದೆ. ಆದರೆ ಎಲ್ಲಾ ಆಸ್ಪತ್ರೆಗಳಲ್ಲಿ ಎನ್‌ಎಸ್‌1 ಮೂಲಕ ಪತ್ತೆ ಹಚ್ಚುತ್ತಿದ್ದಾರೆ.

Experts Say Through ELISA Test Alone Could Be Misleading

ಅದು ಒಳ್ಳೆಯದೇ ಆದರೆ ತತ್ತಕ್ಷಣಕ್ಕೆ ರೋಗ ಪತ್ತೆಯಾಗುವುದಿಲ್ಲ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಎಲಿಸಾ ಟೆಸ್ಟ್‌ ಗೆ 700-1200 ರೂ ಬೇಕಾಗುತ್ತದೆ ಹೆಚ್ಚುವರಿ ಖರ್ಚು ಎಂದು ವೈದ್ಯರು ಹಾಗೂ ರೋಗಿಗಳು ಇಬ್ಬರೂ ಆಲೋಚಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಎನ್‌ಎಸ್‌1 ಪರೀಕ್ಷೆಯನ್ನೇ ಮಾಡುತ್ತಾರೆ.

ನಿತ್ಯ 80ಕ್ಕೂ ಹೆಚ್ಚಿನ ಬ್ಲಡ್ ಸ್ಯಾಂಪಲ್‌ಗಳನ್ನು ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಸದ್ಯಕ್ಕೆ ಮಣಿಪಾಲ್ ಆಸ್ಪತ್ರೆಯಲ್ಲಿ ಎಲಿಸಾ ಟೆಸ್ಟ್ ನಡೆಸಲಾಗುತ್ತಿದೆ. ರೋಗಿಗಳ ಪರಿಸ್ಥಿತಿಯನ್ನು ಅರಿತುಕೊಂಡು ಟೆಸ್ಟ್‌ಗಾಗಿ ಆಸ್ಪತ್ರೆಗೆ ಬ್ಲಡ್ ಸ್ಯಾಂಪಲ್‌ಗಳನ್ನು ಕಳುಹಿಸಿಕೊಡಲಾಗುತ್ತಿದೆ. ಆರೋಗ್ಯಾಧಿಕಾರಗಳ ಮಾಹಿತಿ ಪ್ರಕಾರ ಎಲ್ಲಾ ಆಸ್ಪತ್ರೆಗಳಲ್ಲೂ ಎಲಿಸಾ ಟೆಸ್ಟ್ ಕಡ್ಡಾಯವಾಗಿ ಮಾಡಲೇಬೇಕಾಗಿದೆ.

ಡೆಂಗ್ಯೂ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕಿದೆ- ಡಾ.ಡಿ.ವೀರೇಂದ್ರ ಹೆಗ್ಗಡೆ ಸಂದೇಶಡೆಂಗ್ಯೂ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕಿದೆ- ಡಾ.ಡಿ.ವೀರೇಂದ್ರ ಹೆಗ್ಗಡೆ ಸಂದೇಶ

ನಗರದಲ್ಲಿ ದಿನೇ ದಿನೇ ಹೋದಂತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಕರ್ನಾಟಕದಲ್ಲಿರುವ ಒಟ್ಟಾರೆ ಟೆಂಗ್ಯೂ ಪ್ರಕರಣಗಳ ಅರ್ಧದಷ್ಟು ಭಾಗ ಬೆಂಗಳೂರಲ್ಲೇ ಇರುವುದು ಆತಂಕದ ಸಂಗತಿಯೇ ಆಗಿದೆ. ಕರ್ನಾಟಕದಲ್ಲಿ ಜನವರಿಯಿಂದ ಇಲ್ಲಿಯವರೆಗೆ 6,014 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 3,822 ಪ್ರಕರಣಗಳು ಬೆಂಗಳೂರಲ್ಲೇ ಇದೆ ಎನ್ನುವುದು ಪತ್ತೆಯಾಗಿದೆ.

ಕಳೆದ ಹದಿನೈದು ದಿನಗಳಿಂದೀಚೆಗೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇರುವ ಡೆಂಗ್ಯೂ ಪ್ರಕರಣಗಳಿಗಿಂದ ದುಪ್ಪಟ್ಟು ರೋಗಿಗಳು ಹೆಚ್ಚಾಗಿದ್ದಾರೆ.

English summary
Experts Say Through ELISA Test Alone Could Be Misleading, The incidence of dengue in Karnataka is much higher than officially reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X