ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ, ವರದಿ ಸಲ್ಲಿಕೆಗೆ 2 ತಿಂಗಳ ಗಡುವು

|
Google Oneindia Kannada News

ಬೆಂಗಳೂರು, ಮಾರ್ಚ್ 11: ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ ನಡೆಸಲಾಗಿದೆ.

ಈ ಕುರಿತು ವರದಿ ಸಲ್ಲಿಕೆಗೆ 2 ತಿಂಗಳ ಗಡುವು ನೀಡಲಾಗಿದೆ. ಎಲಿವೇಟೆಡ್ ಕಾರಿಡಾರ್‌ನ ಉತ್ತರ-ದಕ್ಷಿಣ ಮಾರ್ಗದ ಮೊದಲ ಹಂತದ ಅನುಷ್ಠಾನಕ್ಕೆ ಟೆಂಡರ್ ಆಹ್ವಾನಿಸಿದ ಬೆನ್ನಲ್ಲೇ ಸರ್ಕಾರ ಈ ನಿಲುವು ಕೈಗೊಂಡಿದೆ.

ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು? ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?

ಎಸ್ಟೀಮ್ ಮಾಲ್ ನಿಂದ ಆರಂಭವಾಗಬೇಕಿದ್ದ ಮೊದಲ ಹಂತ ಎಲಿವೇಟೆಡ್ ಕಾರಿಡಾರ್ ಮಾರ್ಗಕ್ಕೆ ಟ್ರಾಫಿಕ್ ದಟ್ಟಣೆ ಹಾಗೂ ಇತರೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಬೇಕಿರುವ ಕಾರಣ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿಗೆ ಸ್ಥಳಾಂತರಗೊಂಡಿದೆ.

experts committee constituted to find out solution for Hebbala traffic

ಹೆಬ್ಬಾಳ ಜಂಕ್ಷನ್‌ನಲ್ಲಿ ಮೇಲು ರಸ್ತೆಯ ಹೆಚ್ಚುವರಿ ಪಥ ನಿರ್ಮಾಣದ ಕಾಮಗಾರಿ ನೆನಗುದಿದೆ ಬಿದ್ದದೆ. ವರ್ತುಲ ರಸ್ತೆಯ ಸಿಗ್ನಲ್‌ನಲ್ಲಿ ಕೆಳ ರಸ್ತೆ ನಿರ್ಮಿಸುವ ಪ್ರಸ್ತಾಪವೂ ಇದೆ. ಜೊತೆಗೆ ಇಲ್ಲಿನ ರೈಲ್ವೆ ಹಳಿ ಬಳಿ ಪಾದಚಾರಿಗಳ ಅನುಕೂಲಕ್ಕೆ ಸುರಂಗ ಮಾರ್ಗ ನಿರ್ಮಿಸುವ ಉದ್ದೇಶ ಇದೆ.

ಇತ್ತೀಚೆಗಷ್ಟೇ ಏರ್‌ಪೋರ್ಟ್‌ಗೆ ಮೆಟ್ರೋ ಸೌಲಭ್ಯ ಕಲ್ಪಿಸುವ ಭಾಗವಾಗಿ ನಾಗೌಆರ-ಥಣಿಸಂದ್ರ ಮಾರ್ಗದ ಬದಲು ಹೆಬ್ಬಾಳದ ಮೂಲಕ ಮಾರ್ಗ ಅಂತಿಮಗೊಳಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಯೋಜನೆಗಳು ಓವರ್ ಲ್ಯಾಪ್ ಆಗುವುದರಿಂದ ಹಣದ ವೆಚ್ಚ ದುಪ್ಪಟ್ಟಾಗುತ್ತಿದೆ.

ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ ಎಲಿವೇಟೆಡ್ ಕಾರಿಡಾರ್ ಸುತ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ

ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಬರಲು ಹೆಬ್ಬಾಳ ಜಂಕ್ಷನ್ ದಾಟಿಯೇ ತೆರಳಬೇಕಿದೆ. ಇಲ್ಲಿನ ಟ್ರಾಫಿಕ್ ಚಕ್ರವ್ಯೂಹದಲ್ಲಿ ಸಿಲುಕಿ ಪ್ರಯಾಣ ಮಾಡುವುದು ಕಷ್ಟವಾಗಿದೆ.

ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ

ಹಾಗಾಗಿ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲೇ ಬೇಕಿದೆ. ಈ ಯೋಜನೆ ವಿಳಂಬವಾಗದಿರಲು ಸ್ಥಳ ಬದಲಾವಣೆ ಮಾಡಿದ್ದು, ಎಸ್ಟೀಮ್ ಮಾಲ್-ಹೆಬ್ಬಾಳ ಜಂಕ್ಷನ್ ವ್ಯಾಪ್ತಿಯಲ್ಲಿ ಯಾವ ರೀತಿಯ ಸಂಚಾರ ಸೌಲಭ್ಯವನ್ನು ಕಲ್ಪಿಸಬೇಕು ಎನ್ನುವ ಗೊಂದಲವನ್ನು ಕೆಆರ್‌ಡಿಸಿಎಲ್ ವ್ಯಕ್ತಪಡಿಸಿದೆ.

English summary
State government have constituted a expert committee to find out solution for Hebbala traffic. Government is expecting the report within two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X