ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

40 ವರ್ಷದ ಬಳಿಕ ಮಹಿಳೆಯರಿಗೆ ಮ್ಯಾಮೊಗ್ರಾಮ್ ಟೆಸ್ಟ್‌ ಕಡ್ಡಾಯ: ಸಲಹೆ

|
Google Oneindia Kannada News

ಬೆಂಗಳೂರು,ಅಕ್ಟೋಬರ್ 15: ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿದ್ದು, 30 ವರ್ಷ ಮೀರಿದ ಮಹಿಳೆಯರು ತಿಂಗಳಿಗೊಮ್ಮೆ ಸ್ತನಗಳ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು, 40 ವರ್ಷ ಮೀರಿದ ಮಹಿಳೆಯರು ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್ ತಪಾಸಣೆ ಮಾಡಿಸಬೇಕು ಎಂದು ಸ್ತನ ಕ್ಯಾನ್ಸರ್ ತಜ್ಞೆ ಡಾ. ಜಯಂತಿ ಅಭಿಪ್ರಾಯ ಪಟ್ಟಿದ್ದಾರೆ.

ಜಗತ್ತಿನಲ್ಲೇ ಅತಿ ದೊಡ್ಡ ಕ್ಯಾನ್ಸರ್ ಗಡ್ಡೆ ಆಪರೇಷನ್, ತೂಕ ಗೊತ್ತಾ? ಜಗತ್ತಿನಲ್ಲೇ ಅತಿ ದೊಡ್ಡ ಕ್ಯಾನ್ಸರ್ ಗಡ್ಡೆ ಆಪರೇಷನ್, ತೂಕ ಗೊತ್ತಾ?

ಸ್ತನ ಕ್ಯಾನ್ಸರ್ ಕುರಿತು ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ, ತಪಾಸಣೆ ಮಾಡಿಸಿದಾಗ ಕ್ಯಾನ್ಸರ್ ಲಕ್ಷಣಗಳಿದ್ದರೆ ಪ್ರಾಥಮಿಕ ಹಂತದಲ್ಲಿಯೇ ಕಂಡು ಹಿಡಿಯಬಹುದು ಎಂದರು.

ಮೈಸೂರು ದಸರಾ - ವಿಶೇಷ ಪುರವಣಿ

ಇದರಲ್ಲಿ ಸ್ತನ ಕ್ಯಾನ್ಸರ್‌ನಿಂದ ಮುಕ್ತಿ ಹೊಂದದ ಕೆಲವರು ಭಾಗಿಯಾಗಿ, ಮಾರಣಾಂತಿಕ ಕಾಯಿಲೆಯನ್ನು ಎದುರಿಸಿದ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಸಭೆಯಲ್ಲಿ ಸ್ತನ ಕ್ಯಾನ್ಸರ್ ಕುರಿತ ಜಾಗೃತಿಯ ಅಗತ್ಯ, ವಾರ್ಷಿಕ ತಪಾಸಣೆ ಹಾಗೂ ಜೀವನ ಶೈಲಿಯ ಬದಲಾವಣೆ ಕುರಿತು ಕೂಡ ಚರ್ಚೆ ನಡೆಸಲಾಯಿತು.

Expert says mammogram after 40 years can prevent breast cancer

ಪುರುಷರು ಕೂಡ ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯಿದೆ. ಆದರೆ, ಅದು ಅಷ್ಟೊಂದು ಗಂಭೀರ ಪ್ರಮಾಣದಲ್ಲಿಲ್ಲ . ಆರಂಭಿಕ ಹಂತದಲ್ಲಿ ಈ ಕಾಯಿಲೆ ಪತ್ತೆಯಾದಲ್ಲಿ ಚಿಕಿತ್ಸೆ ಸುಲಭವಾಗುತ್ತದೆ ಹಾಗೂ, ಸಂಪೂರ್ಣ ಚೇತರಿಕೆಯ ಭರವಸೆ ನೀಡಬಹುದು ಎಂದರು.

ಕ್ಯಾನ್ಸರ್ ಸಂಶೋಧಕರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ ಕ್ಯಾನ್ಸರ್ ಸಂಶೋಧಕರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ

30 ವರ್ಷ ಮೀರಿದ ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯಿರುವುದರಿಂದ ಆಗಾಗ ಸ್ತನದಲ್ಲಿ ಗಂಟುಗಳು ಇಲ್ಲವೇ ಇತರ ಅಸಹಜ ಬೆಳವಣಿಗೆಯಿದೆಯೇ ಎಂಬುದರ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಋತುಚಕ್ರದ ಏಳನೇ ದಿನದ ನಂತರ ಈ ತಪಾಸಣೆ ನಡೆಸುವುದು ಸೂಕ್ತ ಎಂದು ಮಾಹಿತಿ ನೀಡಿದರು.

ಪತ್ನಿಯ ಚಿಕಿತ್ಸೆಗಾಗಿ ಕೂಲಿ ಕಾರ್ಮಿಕನಾದ: ಒಂದು ಅಪರೂಪದ ಪ್ರೇಮಕಥನ ಪತ್ನಿಯ ಚಿಕಿತ್ಸೆಗಾಗಿ ಕೂಲಿ ಕಾರ್ಮಿಕನಾದ: ಒಂದು ಅಪರೂಪದ ಪ್ರೇಮಕಥನ

ಎಲ್ಲ ವರ್ಗದ ಮಹಿಳೆಯರು ಈ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿತ್ತು, ಜಾಗೃತಿಯ ಕೊರತೆಯಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಜೊತೆಗೆ, ಸೂಕ್ತ ತಪಾಸಣೆಯ ಕೊರತೆ ಹಾಗೂ ಈ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಕೆಗಳು ಕೂಡ ಇದಕ್ಕೆ ಕಾರಣವಾಗಿವೆ.

ಇಂತಹವರಿಗೆ ನೆರವಾಗಲು ಸ್ಪರ್ಷ ಆಸ್ಪತ್ರೆ ಉಚಿತ ಸ್ತನ ಕ್ಯಾನ್ಸರ್ ತಪಾಸಣೆಯನ್ನು ಹಮ್ಮಿಕೊಂಡಿದೆ. ತಪಾಸಣಾ ಹಂತದ ನಂತರ ಅಗತ್ಯವಿದ್ದಲ್ಲಿ ಮ್ಯಾಮೋಗ್ರಾಮ್ ಅನ್ನು ಉಚಿತವಾಗಿ ನಡೆಸಲಾಗುವುದು ಎಂದರು.

English summary
Oncologist Dr.Jayanthi has suggested women that mammogram after 40 years could help find out breast cancer and prevent the same in the early stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X