• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತರ - ಪ್ರಕೃತಿಯ ಮಡಲಲ್ಲಿ ಐಷಾರಾಮಿ ವಿಲ್ಲಾ

By Prasad
|

ನಮ್ಮದೊಂದು ಸ್ವಂತ ಸೂರಿರಬೇಕು ಎಂಬುದು ಪ್ರತಿ ಬೆಂಗಳೂರಿನ ನಾಗರಿಕರ ಕನಸು. ಫ್ಲಾಟ್ ಗಳು, ನಿವೇಶನಗಳು ಗಗನಕುಸುಮವಾಗಿರುವಾಗ ಸ್ವಂತ ಮನೆಯ ಕಲ್ಪನೆ ಹಲವರಿಗೆ ಕಲ್ಪನೆಯಾಗಿಯೇ ಉಳಿದಿರುತ್ತದೆ. ಆದರೆ, ಅಂಥ ಕನಸು ಕಾಣುತ್ತಿರುವವರಿಗೆ ಒಂದು ಅತ್ಯದ್ಭುತ ಅವಕಾಶ ಕೂಡಿ ಬಂದಿದೆ. 'ನಂತರ' ನೋಡೋಣ ಎಂದು ಉದಾಸೀನ ಮಾಡಬೇಡಿ.

ಏಕೆಂದರೆ, ನಂದಿನಿ ಗ್ರೂಪ್ ಆಫ್ ಹೋಟೆಲ್ಸ್ ಭಾಗವಾಗಿರುವ ನಂದಿನಿ ಡೆವಲಪರ್ಸ್ ಅವರು ಮಧ್ಯಮ ವರ್ಗದವರ ಕೈಗೆಟಕುವ ದರದಲ್ಲಿ, ವಿಶಿಷ್ಟ ಬಗೆಯ ಬಾಲಿನೀಸ್ ವಿನ್ಯಾಸದಲ್ಲಿರುವ 'ಅನಂತರ' ಎಂಬ ಐಷಾರಾಮಿ ಸ್ವತಂತ್ರ ವಿಲ್ಲಾಗಳನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದಾರೆ.

ಬೆಂಗಳೂರಿನ ವಾಯವ್ಯ ಭಾಗದಲ್ಲಿ, ತುಮಕೂರು ರಸ್ತೆಯಲ್ಲಿ ನಂದಿನಿಯವರ 'ಅನಂತರ' ಸ್ವತಂತ್ರ ವಿಲ್ಲಾ ವಸತಿ ಸಂಕಿರ್ಣ ತಲೆಯೆತ್ತಿ ನಿಂತಿದೆ. ವಾಯು, ಶಬ್ಧ ಮಾಲಿನ್ಯದಿಂದ ಕಂಗೆಟ್ಟವರಿಗೆ ನಗರದಿಂದ ಸ್ವಲ್ಪ ದೂರದಲ್ಲಿರುವ, ಪ್ರಕೃತಿ ಮಡಿಲಲ್ಲಿರುವ 'ಅನಂತರ' ವಿಲ್ಲಾ ಅಪ್ಯಾಯಮಾನವಾಗಿ ಕಾಣುತ್ತದೆ. ಯಾವಾಗಲೂ ಸುತ್ತಲೂ ಹಸಿರು, ಹಕ್ಕಿಗಳ ಚಿಲಿಪಿಲಿ ಶಬ್ದಗಳು ಕೇಳುತ್ತಿದ್ದರೆ ಹೇಗಿರುತ್ತದೆ?

ಆಕರ್ಷಕ ಲ್ಯಾಂಡ್‌ಸ್ಕೇಪ್‌ಗಳು, ನೀರಿನ ಕೊಳಗಳು ಬಾಲಿ ರೆಸಾರ್ಟ್ ವಿನ್ಯಾಸದಲ್ಲಿರುವ ಈ ವಸತಿ ಸಂಕೀರ್ಣದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಐಷಾರಾಮಿ ಜೀವನಕ್ಕೆ ಕೊರತೆ ಇಲ್ಲದ ಹಾಗೆ ಎಲ್ಲ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಸುಮಾರು 86 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ, ಸಾಟಿಯಿಲ್ಲದ ಸೌಂದರ್ಯದ 'ಅನಂತರ'ದಲ್ಲಿ ಅನೇಕ ವಿಶಿಷ್ಟಬಗೆಯ ಹಣ್ಣಿನ ಗಿಡಗಳನ್ನು ಕೂಡ ನೆಡಲಾಗಿದೆ.

1,200 ಚದರಡಿಯಿಂದ ಹಿಡಿದು, 2,550, 5,100 ಚದರಡಿಯ ನಿವೇಶನಗಳಲ್ಲಿ, 1,300 ಚದರಡಿಯಿಂದ ಹಿಡಿದು 2,600 ಚದರಡಿಯ, 2ರಿಂದ 4 ಬೆಡ್ ರೂಮಿನ ಫ್ಲಾಟ್‌ಗಳನ್ನು ನಿರ್ಮಿಸಲಾಗಿದೆ. ಬೆಲೆ 43 ಲಕ್ಷ ರು.ನಿಂದ ಆರಂಭವಾಗಿದ್ದು, ಇತರ ಪ್ರದೇಶಗಳಲ್ಲಿರುವ ದರಗಳಿಗೆ ಹೋಲಿಸಿದರೆ ಕೈಗೆಟಕುವ ದರವೆಂದೇ ಹೇಳಬೇಕು.

ಇಲ್ಲಿ ಸುಮಾರು 400 ಸ್ವತಂತ್ರ ವಿಲ್ಲಾಗಳಿದ್ದು, ಪ್ರತಿ ಮನೆಗೂ ಖಾಸಗಿ ಕೈತೋಟ, ಹುಲ್ಲಿನಂಕಣ ಇರಲಿವೆ. ಜೊತೆಗೆ, ಬಾಲಿ ವಿನ್ಯಾಸದ ಮನೆಗಳಂತೆ, ಲೀವಿಂಗ್ ರೂಮ್ ಮುಕ್ತವಾಗಿ ತೆರೆದುಕೊಂಡಿರುತ್ತವೆ. ಬಾಲಿನೀಸ್ ವಿನ್ಯಾಸಗಳನ್ನು ಇಷ್ಟಪಡುವವರು ಮತ್ತು ಇಂಥ ಸೌಂದರ್ಯವನ್ನು ಆಸ್ವಾದಿಸುವವರಿಗಾಗಿ ಮನೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಅತ್ಯಾಧುನಿಕ ಸೌಲಭ್ಯಗಳಿರುವ ಕ್ಲಬ್ ಹೌಸ್, ಹಿರಿಯರಿಗಾಗಿ ಮತ್ತು ಮಕ್ಕಳಿಗಾಗಿ ಈಜುಗೊಳ, ಜಾಗಿಂಗ್ ಟ್ರಾಕ್, ಉತ್ತಮ ಸೌಕರ್ಯಗಳಿರುವ ಫಿಟ್ನೆಸ್ ಸೆಂಟರ್, ಆಧ್ಯಾತ್ಮಿಕ ಕೇಂದ್ರ, ಬ್ಯಾಡ್ಮಿಂಟನ್ ಕೋರ್ಟ್, ಗೋಲ್ಫ್ ಕೋರ್ಸ್, ಟೆನ್ನಿಸ್ ಕೋರ್ಟ್, ಸುಂದರ ಕೊಳ, ಸೂಪರ್ ಮಾರ್ಕೆಟ್... ಇನ್ನೇನು ಬೇಕು ಐಷಾರಾಮಿ ಜೀವನಶೈಲಿಗೆ?

'ಅನಂತರ' ವಿಲ್ಲಾ ಪ್ರಾಜೆಕ್ಟಿಗೆ ಕಾರ್ಪೋರೇಷನ್ ಬ್ಯಾಂಕ್ ಮನೆ ಸಾಲವನ್ನು ನೀಡುತ್ತಿದೆ. ಕನಸಿನ ಮನೆಯ ಮಾಲಿಕರಿಗೆ ಎಲೆಕ್ಟ್ರಾನಿಕ್ ಖಾತಾ ಕೂಡ ನೀಡಲಾಗುತ್ತದೆ.

ಅನಂತರದ ಸುತ್ತಮುತ್ತ ಅಭಿವೃದ್ಧಿ

* ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆ ಘೋಷಣೆಯಾಗಿದ್ದರಿಂದ ಮತ್ತು ಹಳೆ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆಯೊಂದಿಗೆ ಸಂಪರ್ಕಿಸುವ ಪೆರಿಫೆರಲ್ ರಿಂಗ್ ರಸ್ತೆ ಬರುತ್ತಿರುವುದರಿಂದ ತುಮಕೂರು ರಸ್ತೆಗೆ ಈಗ ಭಾರೀ ಬೇಡಿಕೆ ಬಂದಿದೆ.

* ನೈಸ್ ರಸ್ತೆಗೆ ಸಂಪರ್ಕ ಈಗಾಗಲೆ ಹೊಂದಿದ್ದರಿಂದ ಅಭಿವೃದ್ಧಿ ಭರದಿಂದ ಸಾಗುತ್ತಿದೆ. ತುಮಕೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾರ್ಷಿಕ ಶೇ.20ರಿಂದ 25ರಷ್ಟು ಹೆಚ್ಚಿನ ಅಭಿವೃದ್ಧಿಯಾಗುತ್ತಿದೆ ಎಂಬ ಅಂದಾಜಿದೆ.

* ಪೀಣ್ಯದಲ್ಲಿ ಈಗಾಗಲೆ ನಮ್ಮ ಮೆಟ್ರೋ ರೈಲು ಸೌಲಭ್ಯ ಆರಂಭವಾಗಿದ್ದು, ಮುಂದಿನ ಮೆಟ್ರೋ ಕಾಮಗಾರಿ ಮುಗಿದನಂತರ ಈ ಪ್ರದೇಶಕ್ಕೆ ಮತ್ತಷ್ಟು ರೈಲು ಸಂಪರ್ಕ ಸಿಗಲಿದೆ.

* ತುಮಕೂರು ಬಳಿ ಎಲೆಕ್ಟ್ರಾನಿಕ್ ಸಿಟಿಗಿಂತ 42 ಪಟ್ಟು ದೊಡ್ಡದಿರುವ ಸ್ಮಾರ್ಟ್ ಸಿಟಿ, ಡಾಬಸ್ ಪೇಟೆ ಬಳಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ, ನ್ಯಾನೋ ಪಾರ್ಕ್, ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ 'ಅನಂತರ'ದ ತೀರ ಹತ್ತಿರದಲ್ಲಿದೆವೆ ಕಳೆದ 4-5 ವರ್ಷಗಳಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಮೈಕ್ರೋ ಮಾರ್ಕೆಟ್ ಎಂಬ ಹೆಗ್ಗಳಿಕೆಗೆ ಈ ಪ್ರದೇಶ ಪಾತ್ರವಾಗಿದೆ. ಜೊತೆಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಹೊಂದಿದೆ.

'ಅನಂತರ'ದ ಅಧಿಕೃತ ವೆಬ್ ತಾಣ ಈ ವಿಲ್ಲಾ ಪ್ರಾಜೆಕ್ಟ್ ಕುರಿತ ಎಲ್ಲ ವಿವರಗಳನ್ನು ನೀಡುತ್ತದೆ. ಇಂತರ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ, ಸ್ವಂತ ಮನೆ ಹೊಂದುವ ನಿಮ್ಮ ಕನಸಿಗೆ ನೀರೆರೆಯಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ananthara - affordable luxurious Balinese styled independent villas has been launched in Bangalore by Nandhini Developers, an initiative of Nandhini Group of Hotels. Nandhini's "Ananthara" independent villa complex is located in the most upcoming location of Bangalore North-west on Tumkur Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more