ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬಾರಿ ದಂಡ ಭೀತಿ: ಆಗಸ್ಟ್‌ನಲ್ಲಿ ಎಲ್‌ಎಲ್‌ಆರ್ ಪಡೆದವರೇ ಹೆಚ್ಚು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ದುಬಾರಿ ದಂಡ ಬೀಳುವ ಭೀತಿಯಿಂದ ವಾಹನ ಸವಾರರು ಹಲವು ಸರ್ಕಸ್‌ಗಳನ್ನು ಮಾಡುತ್ತಿದ್ದಾರೆ.

ಸೆಪ್ಟೆಂಬರ್‌ನಿಂದ ದುಬಾರಿ ದಂಡ ನಿಯಮ ಜಾರಿಯಾಗುತ್ತದೆ ಎಂದು ಅರಿತ 34ಸಾವಿರಕ್ಕೂ ಹೆಚ್ಚು ವಾಹನ ಸವಾರರು ಆಗಸ್ಟ್ ತಿಂಗಳಲ್ಲಿ ಎಲ್‌ಎಲ್‌ಆರ್ ( ವಾಹನ ಕಲಿಕಾ ಚಾಲನ ಪತ್ರ) ಮಾಡಿಸಿದ್ದಾರೆ.

8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?

ದುಬಾರಿ ದಂಡ ಜಾರಿಯಾಗುವ ಭೀತಿಯಲ್ಲಿ ಆಗಸ್ಟ್ ತಿಂಗಳೊಂದರಲ್ಲೇ ರಾಜ್ಯದ 65 ಆರ್‌ಟಿಓ ಕಚೇರಿಗಳಲ್ಲಿ 2.16 ಲಕ್ಷ ಮಂದಿ ವಾಹನ ಕಲಿಕಾ ಚಾಲನಾ ಪತ್ರ ಪಡೆದಿದ್ದಾರೆ.

Expensive Fines Most LLRs Done In August

ಆಗಸ್ಟ್‌ ತಿಂಗಳ ನಂತರವೂ ರಾಜ್ಯದಲ್ಲಿ ಎಲ್‌ಎಲ್‌ಆರ್ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸೆಪ್ಟೆಂಬರ್ ಮಾಸದ ಮೊದಲ 15 ದಿನಗಳಲ್ಲಿ ಎಲ್‌ಎಲ್‌ಆರ್ ಪಡೆದವರ ಸಂಖ್ಯೆ 85,874 ಮಂದಿ ಆಗಿದ್ದಾರೆ.

ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರಿನ ರಾಜಾಜಿನಗರದ ಆರ್‌ಟಿಓದಲ್ಲಿ ಜುಲೈನಲ್ಲಿ 5582 ಮಂದಿ ಎಲ್‌ಎಲ್‌ಆರ್ ಪಡೆದಿದ್ದಾರೆ.ಆಗಸ್ಟ್‌ನಲ್ಲಿ 8076 ಮಂದಿ ಪಡೆದಿದ್ದಾರೆ. ಮೈಸೂರು ಪಶ್ಚಿಮ ಆರ್‌ಟಿಓದಲ್ಲಿ ಇದೇ ಅವಧಿಯಲ್ಲಿ ಕ್ರಮವಾಗಿ 3187 ಮತ್ತು 5540, ಹಾಸನದಲ್ಲಿ 3009 ಮತ್ತು 4955, ಬೆಳಗಾವಿಯಲ್ಲಿ 2997 ಮತ್ತು 5168 ಮಂದಿ ಎಲ್‌ಎಲ್‌ಆರ್ ಪಡೆದಿದ್ದಾರೆ.

English summary
Motorists are doing many circuses for fear of falling expensive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X