ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಕಡೆ ಹೊಯ್ಸಳ, ಕದಂಬ, ಟಿಪ್ಪು ಕಾಲದ ನಾಣ್ಯಗಳು!

By Madhusoodhan
|
Google Oneindia Kannada News

ಬೆ೦ಗಳೂರು, ಜುಲೈ, 11: ನಿಮ್ಮ ಹವ್ಯಾಸಗಳು ಯಾವವು? ಎಂದು ಪ್ರಶ್ನೆ ಎದುರಾದಾಗ ಹಳೆಯ ನೋಟು ಮತ್ತು ನಾಣ್ಯ ಸಂಗ್ರಹ ಎಂದು ಹಲವರು ಉತ್ತರಿಸಿದ್ದನ್ನು ಕೇಳಿದ್ದೇವೆ.

ಹೌದು.. ನಿಮಗೂ ಇಂಥ ಆಸಕ್ತಿ ಒಂದೆಲ್ಲಾ ಒಂದು ಸಾರಿ ಬಂದಿರುತ್ತದೆ. ಕೆಲವರು ಅದನ್ನೇ ಮುಂದುವರಿಸಿಕೊಂಡು ಬಂದಿರುತ್ತಾರೆ. ಪುರಾತನ ಕಾಲದ ನಾಣ್ಯ ಮತ್ತು ನೋಟುಗಳ ಸ೦ಗ್ರಹಪ್ರಿಯರಿಗಾಗಿ ಕನ್ನಡ ನಾಡು ನಾಣ್ಯ ಸ೦ಘವು ಜುಲೈ 15ರಿ೦ದ 17ರವರೆಗೆ "ನಾಣ್ಯ ದರ್ಶಿನಿ -2016' ಎ೦ಬ ಕಾರ್ಯಕ್ರಮವನ್ನು ಆಯೋಜಿಸಿದೆ.[ಮೈಸೂರ್ ಪಾಕ್ ಜನ್ಮ ತಾಳಿದ ಸವಿಯಾದ ಕಥೆ]

coin

ಬೆಂಗಳೂರು ಕೆ೦ಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಹೊಯ್ಸಳರು, ಕದ೦ಬ, ಚಾಲುಕ್ಯ, ಮ್ಯೆಸೂರು ಒಡೆಯರು, ಹೈದರಾಲಿ ಮತ್ತು ಟಿಪ್ಪು ಕಾಲದ ನಾಣ್ಯಗಳನ್ನು ನೋಡಬಹುದು ಎಂದು ಸ೦ಘದ ಅಧ್ಯಕ್ಷ ಕೀರ್ತಿ ಎ೦. ಪರೇಖ್ ಹೇಳಿದ್ದಾರೆ.[ಅಪ್ರತಿಮ ದೇಶಭಕ್ತ ಹುತಾತ್ಮ ಹಜರತ್ ಟಿಪ್ಪು ಸುಲ್ತಾನ್]

ಪ್ರತಿಯೊಬ್ಬರಿಗೂ ದೇಶದ ನಾಣ್ಯಗಳ ಇತಿಹಾಸ ಹಾಗೂ ಮಹತ್ವ ತಿಳಿಸುವ ಉದ್ದೇಶದಿ೦ದ ಈ ಪ್ರದರ್ಶನ ಹಮ್ಮಿಕೊ೦ಡಿದ್ದೇವೆ. ವಿಶೇಷ ಕಾರ್ಯಾಗಾರ ಸಹ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮ ವಿವರ
ದಿನಾಂಕ: 15, 16 ಮತ್ತು 17 ಜುಲೈ
ಸ್ಥಳ: ಶಿಕ್ಷಕರ ಸದನ, ಕೆಜಿ ರಸ್ತೆ ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ 6, ಪ್ರವೇಶ ಉಚಿತ

English summary
The Karnataka Numismatic Society will conduct a three-day All India exhibition of rare coins and currencies - Nanyadarshini-2016 from July 15. The exhibition will be held between 10 a.m. and 6 p.m. at Shikshakara Sadana on K.G. Road. Entry is free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X