• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

10 ಲಕ್ಷಕ್ಕೂ ಹೆಚ್ಚು ಅಗರಬತ್ತಿ ಉದ್ಯಮೆದಾರರಿಗೆ ಬಿಗ್ ರಿಲೀಫ್..!

|
Google Oneindia Kannada News

ಬೆಂಗಳೂರು, ಮೇ 27: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಖಿಲ ಭಾರತೀಯ ಅಗರಬತ್ತಿ ಉತ್ಪಾದಕರು ಕೃತಜ್ಞತೆ ಸಲ್ಲಿಸಿದ್ದಾರೆ. ಅಗರಬತ್ತಿ ಉದ್ಯಮಕ್ಕೆ ಬಳಸುತ್ತಿದ್ದ ಬಿದಿರು ಕಡ್ಡಿಗಳನ್ನ 'ಪ್ಲಾಂಟ್ ಕ್ವಾರಂಟೇನ್' ಪರೀಕ್ಷೆಗೆ ಒಳಪಡಿಸಬೇಕಾದ ಪರಿಣಾಮ, ಅಗರಬತ್ತಿ ಉದ್ಯಮಕ್ಕೆ ಅಗತ್ಯವಾದ ಬಿದಿರು ಕಡ್ಡಿಗಳು ತಕ್ಕ ಸಮಯಕ್ಕೆ ಸರಿಯಾಗಿ ಪೂರೈಕೆಯಾಗದೆ ಸಮಸ್ಯೆ ಅನುಭವಿಸುವಂತಾಗಿತ್ತು. ಈ ಸಮಸ್ಯೆಯಿಂದ 10 ಲಕ್ಷಕ್ಕೂ ಹೆಚ್ಚು ಅಗರಬತ್ತಿ ಉದ್ಯಮ ಜನರಿಗೆ ಪೆಟ್ಟುಬಿದ್ದಿದ್ದರಿಂದ ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿಯ್ತಿ ಕೋರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದು ಮನವಿ ಸಲ್ಲಿಸಲಾಗಿತ್ತು.

ಅಖಿಲ ಭಾರತೀಯ ಅಗರಬತ್ತಿ ಉತ್ಪಾದಕರ ಸಮಸ್ಯೆಗೆ ಸ್ಪಂದಿಸಿ ಅಗರಬತ್ತಿ ಉದ್ಯಮದ ಸಮಸ್ಯೆಯನ್ನು ಮನಗಂಡ ಕೇಂದ್ರ ಸಚಿವೆ ತಕ್ಷಣವೇ ಕೇಂದ್ರ ಕೃಷಿ ಇಲಾಖೆಯ ಪ್ಲಾಂಟ್ ಕ್ವಾರಂಟೈನ್ ವಿಭಾಗಕ್ಕೆ ಸೂಚನೆ ನೀಡಿ, ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿಯನ್ನು ನೀಡುವಂತೆ ಆದೇಶಿಸಿದರು. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರ ಸೂಚನೆಯಂತೆ ಕೇಂದ್ರ ಕೃಷಿ ಇಲಾಖೆಯು 6.00mm ಕೆಳಗಿನ ಬಿದಿರು ಕಡ್ಡಿಗಳಿಗೆ ಪ್ಲಾಂಟ್ ಕ್ವಾರಂಟೈನ್ ಪ್ರಕ್ರಿಯೆಯಿಂದ ವಿನಾಯ್ತಿ ನೀಡಿದ್ದರಿಂದ ಅಗರಬತ್ತಿ ಉದ್ದಿಮೆದಾರರು ಖುಷಿಯಾಗಿದ್ದಾರೆ.

ಕಾರ್ಮಿಕ ಆಧಾರಿತ ಉದ್ಯಮವಾದ ಅಗರಬತ್ತಿ ನಿರ್ಮಾಣಕ್ಕೆ ಅಗತ್ಯದ ಕಚ್ಚಾ ವಸ್ತುವಾದ ಬಿದಿರು ಕಡ್ಡಿ ಹೊರದೇಶದಿಂದ ಅಮದುಗೊಳ್ಳುತ್ತಿತ್ತು. ಆದರೆ ಕೇಂದ್ರ ಸರಕಾರದ ಆಮದು ನಿಯಮಗಳ ಪ್ರಕಾರ ಈ ಬಿದಿರು ಕಡ್ಡಿಗಳು 'ಪ್ಲಾಂಟ್ ಕ್ವಾರಂಟೇನ್' ಪರೀಕ್ಷೆಗೆ ಒಳ ಪಡಬೇಕಾದ ಅನಿವಾರ್ಯತೆಯಿಂದ ಸರಿಯಾದ ಸಮಯಕ್ಕೆ ಬಿದಿರು ಸಿಗದ ಕಾರಣ ಅಗರಬತ್ತಿ ಉದ್ಯಮದಲ್ಲಿ ಸಮಸ್ಯೆಗೆ ಉಂಟಾಗಿತ್ತು. ಈ ಸಮಸ್ಯೆಯಿಂದ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಜನರು ಅಗರಬತ್ತಿ ಉದ್ಯಮ ಕಚ್ಚಾವಸ್ತುವಿನ ಕೊರತೆಗೆ ತುತ್ತಾಗಿದ್ದರು.

Exemption given to Agarbatti industry after the instructions from Union Minister Shobha Karandlaje

ಸದ್ಯ ಕೇಂದ್ರ ಕೃಷಿ ಇಲಾಖೆಯಿಂದ ಅಗರಬತ್ತಿ ಉದ್ಯಮಕ್ಕೆ ವಿನಾಯ್ತಿ ಸಿಕ್ಕಿದ್ದರಿಂದ ಫುಲ್ ಖುಷಿಯಾಗಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಅಖಿಲ ಭಾರತೀಯ ಅಗರಬತ್ತಿ ಉತ್ಪಾದಕರ ಸಂಘ ಕೃತಜ್ಞತೆ ಸಲ್ಲಿಸಿದ್ದಾರೆ.

   ಸಂಸ್ಕೃತಿ ಇದ್ದಲ್ಲಿ ಧರ್ಮ ಇರುತ್ತದೆ | Oneindia Kannada
   English summary
   Exemption given to Agarbatti industry after the instructions from Union Minister Shobha Karandlaje, Thanks to All India Agarbatti Manufacturers Association,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X