ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Exclusive: ಕರ್ನಾಟಕ ಕೊರೊನಾ ಹಾಟ್‌ಸ್ಪಾಟ್‌ನ ಪ್ರತ್ಯಕ್ಷ ವರದಿ; ವಿವರಗಳು ಗಂಭೀರ

By ಒನ್‌ಇಂಡಿಯಾ ಕನ್ನಡ ತಂಡ
|
Google Oneindia Kannada News

ಆಸ್ಪತ್ರೆಗಳು ವೈರಸ್‌ಗಳ ಆವಾಸಸ್ಥಾನ ಎನ್ನುತ್ತಾರೆ. ಹೀಗಿರುವಾಗ, ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪರಿಸ್ಥಿತಿ ಹೇಗಿರಬೇಡ ಊಹಿಸಿ ನೋಡಿ.

2019 ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಚೀನಾದ ವುಹಾನ್‌ ನರದಲ್ಲಿ ಸ್ಫೋಟಗೊಂಡ ಕೊರೊನಾ ವೈರಸ್‌ ಈಗ ನಮ್ಮ ಮನೆಯ ಅಂಗಳದವರೆಗೂ ಬಂದು ನಿಂತಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಬುಧವಾರ(ಏಪ್ರಿಲ್ 8)ದ ವೇಳೆಗೆ 5500ರ ಗಡಿಗೆ ಬಂದು ನಿಂತಿದೆ. ಚಿಕಿತ್ಸೆ ಹೆಚ್ಚಿದಂತೆ ಪ್ರತಿ ದಿನ 100ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ದೇಶದಲ್ಲಿ ಕೊರೊನಾದಿಂದ ತತ್ತರಿಸಿರುವ ರಾಜ್ಯಗಳ ಪೈಕಿ ಕರ್ನಾಟಕ 10ನೇ ಸ್ಥಾನದಲ್ಲಿದೆ. ಈವರೆಗೆ 181 ಸೋಂಕಿತರಿದ್ದು, 148 ಶಂಕಿತ ಪ್ರಕರಣಗಳು ಈವರೆಗೆ ದಾಖಲಾಗಿವೆ. ಸರಕಾರ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮಾರ್ಚ್‌ 22 ರಂದು ಮೊಟ್ಟಮೊದಲಿಗೆ ಮೀಸಲಿಟ್ಟಿದ್ದು ಬೆಂಗಳೂರಿನ ಮಾರುಕಟ್ಟೆ ಪ್ರದೇಶದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ. 1700 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯ ಕಟ್ಟಡವೊಂದನ್ನು ಕೊರೊನಾ ವಿಶೇಷ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಯಿತು.

Exclusive Video: Karnatakas Coronavirus Hot Spot Victoria Hospital

ಎರಡು ವಾರಗಳು ಕಳೆದ, ರಾಜ್ಯದಲ್ಲಿ ಕೊರೊನಾ ಹಾಟ್‌ಸ್ಪಾಟ್‌ ಎಂದು ಗುರುತಿಸಬಹುದಾದ ಆಸ್ಪತ್ರೆಯ ಪರಿಸ್ಥಿತಿ ಹೇಗಿದೆ?
'ಒನ್‌ಇಂಡಿಯಾ ಕನ್ನಡ' ತಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು, ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದ ತಳಮಟ್ಟದ ವರದಿಯನ್ನು ನಿಮ್ಮ ಮುಂದಿಡುತ್ತಿದೆ.

Exclusive Video: Karnatakas Coronavirus Hot Spot Victoria Hospital

ಈ ಹೊತ್ತಿಗೆ ಒಟ್ಟು 30 ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡುತ್ತಿರುವ ಟ್ರಾಮ ಸೆಂಟರ್‌ ಕಟ್ಟಡದ ನಾಲ್ಕನೇ ಮಹಡಿಯ ಎದುರಿಗಿನ ಚಿತ್ರಣ ದಂಗು ಬಡಿಸುವಂತಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರುಗಳು, ಅವರ ಪ್ರವಾಸಗಳು, ಸಿಎಂ ಯಡಿಯೂರಪ್ಪ ಅವರೇ ಖುದ್ದಾಗಿ ಮೇಲ್ವಿಚಾರಣೆ ಕೈಗೊಂಡಿರುವ ಸಮಯದಲ್ಲಿ ದೀಪದ ಕೆಳಗಿನ ಕತ್ತಲೆ ಆತಂಕ ಮೂಡಿಸುವಂತಿವೆ.

ಈ ಎಲ್ಲಾ ವಿವರಗಳನ್ನು ಒಳಗೊಂಡ ತನಿಖಾ ವರದಿಯ ದೃಶ್ಯ ರೂಪ ಕೆಲವೇ ಹೊತ್ತಿನಲ್ಲಿ ನಿಮ್ಮ ಅವಗಾಹನೆಗೆ ಲಭ್ಯವಾಗುತ್ತಿದೆ.. ಆಘಾತಕಾರಿ ವಿಡಿಯೋ ಇಲ್ಲಿದೆ ನೋಡಿ:

English summary
Exclusive Video: Karnataka's Coronavirus Hot Spot Victoria Hospital which has 1700 bed facility to treat only Covid 19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X