ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Exclusive: ಮೀರಾ ಕುಮಾರ್ ಜತೆ ಒನ್ ಇಂಡಿಯಾ ಸಂದರ್ಶನ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜುಲೈ 2: "ಇದೊಂದು ಸೈದ್ಧಾಂತಿಕ ಸ್ಪರ್ಧೆ" ಹೀಗಂದವರು ವಿಪಕ್ಷಗಳ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಮೀರಾ ಕುಮಾರ್.

ರಾಷ್ಟ್ರಪತಿ ಚುನಾವಣೆಯ ಪ್ರಚಾರಾರ್ಥ ಬೆಂಗಳೂರಿಗೆ ಬಂದಿದ್ದ ಮೀರಾ ಕುಮಾರ್ ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ 'ಒನ್ಇಂಡಿಯಾ' ಜತೆ ಮಾತನಾಡಿದರು. ಈ ಎಕ್ಸ್ ಕ್ಲೂಸಿವ್ ಸಂದರ್ಶನದ ಆಯ್ದ ಭಾಗಗಳು ಇಲ್ಲಿದೆ.

ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ನಾಮಪತ್ರ ಸಲ್ಲಿಕೆವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಚುನಾವಣೆ ಜಾತಿ ಮೇಲೆ ನಡೆಯುವುದಲ್ಲ. ಇದೊಂದು ಸೈದ್ಧಾಂತಿಕ ಚುನಾವಣೆ ಎಂದಿದ್ರಿ ನೀವು?

ಹೌದು. ಇದು ಸೈದ್ಧಾಂತಿಕ ಸಂಘರ್ಷ. ಮತ್ತು ಇದು ಹೀಗೆಯೇ ನಡೆಯಬೇಕು ಕೂಡ. ಒಂದು ದೇಶವಾಗಿ ನಾವು ಜವಾಬ್ದಾರಿಯಿಂದ ಇದನ್ನು ನಿರ್ವಹಿಸಬೇಕು.

ನೀವೀಗ ದೇಶದ ಪ್ರಥಮ ಪ್ರಜೆಯ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದೀರಿ. ದೇಶಕ್ಕಾಗಿ ನಿಮ್ಮ ದೂರದೃಷ್ಟಿಗಳೇನು?

ನನ್ನ ಜೀವಮಾನವಿಡೀ ನಾನು ಜಾತಿ, ಧರ್ಮಗಳನ್ನು ಮೀರಿ ತುಳಿತಕೊಳ್ಳಗಾದವರ ಹಕ್ಕುಗಳಿಗಾಗಿ, ಅವರ ಜೀವನಮಟ್ಟ ಸುಧಾರಣೆಗಾಗಿ, ಗೌರವಯುತ ಜೀವನಕ್ಕಾಗಿ ಕೆಲಸ ಮಾಡಿದ್ದೇನೆ. ನನಗೆ ಅವರಿಗೆ ಸೇವೆ ಮಾಡುವುದು ಇಷ್ಟ. ಇದು ನನ್ನ ದೂರದೃಷ್ಠಿ.

ದಲಿತ ಬಣ್ಣ ಸರಿಯಲ್ಲ

ದಲಿತ ಬಣ್ಣ ಸರಿಯಲ್ಲ

ಇದೇ ಸಂದರ್ಭದಲ್ಲಿ ಮಾತನಾಡಿದ ಮೀರಾ ಕುಮಾರ್ ರಾಷ್ಟ್ರಪತಿ ಚುಣಾವಣೆಗೆ ದಲಿತ ಬಣ್ಣ ನೀಡಿದ್ದು ಅವಮಾನಕರ ಎಂದು ಹೇಳಿದರು.

"ಎಲ್ಲರೂ ಕೇಳುತ್ತಾರೆ ಯಾಕೆ ಇಬ್ಬರೂ ದಲಿತರನ್ನು ಅಭ್ಯರ್ಥಿ ಮಾಡಿದ್ದಾರೆ. ಅದೂ ದಲಿತರಿಗೆ ಮೀಸಲಾತಿ ಇಲ್ಲದೆಯೂ ಅಂತ. ದಲಿತರು ಮೀಸಲಾತಿಗೆ ಮಾತ್ರ ಸೀಮಿತ ಅಂತ ಎಲ್ಲಾದರೂ ಇದೆಯಾ? ಹೀಗಿದ್ದೂ ಈ ರೀತಿಯ ಪ್ರಶ್ನೆಗಳನ್ನು ಕೇಳುವಾಗ ಅಚ್ಚರಿಯಾಗುತ್ತದೆ. ಇದು ಸಮಾಜದ ಜನರು ಮತ್ತು ಸಮಾಜದ ಆಲೋಚನೆ ಕ್ರಮವನ್ನು ಹೇಳುತ್ತದೆ," ಎಂದರು ಮೀರಾ ಕುಮಾರ್.

2017ರಲ್ಲೂ ಜನರು ಜಾತಿಗಳ ಬಗ್ಗೆ ಮಾತನಾಡುತ್ತಾರೆ!!

2017ರಲ್ಲೂ ಜನರು ಜಾತಿಗಳ ಬಗ್ಗೆ ಮಾತನಾಡುತ್ತಾರೆ!!

"2017ರಲ್ಲೂ ಜನರು ಜಾತಿಗಳ ಬಗ್ಗೆ ಮಾತನಾಡುತ್ತಾರೆ ಎಂದು ನನಗೆ ಈಗ ಅರಿವಾಗುತ್ತಿದೆ. ಈ ಹಿಂದೆಯೂ ರಾಷ್ಟ್ರಪತಿ ಚುನಾವಣೆಗಳು ನಡೆದಿವೆ. ಮೇಲ್ವರ್ಗದವರು ಪರಸ್ಪರ ಸ್ಪರ್ಧಿಸಿದ್ದರು. ಆಗ ನಾವು ಯಾರೂ ಜಾತಿಗಳ ಬಗ್ಗೆ ಮಾತನಾಡಲೇ ಇಲ್ಲ. ಅವರು ಧರ್ಮ, ಜಾತಿ ಯಾವುದು ಎಂದು ನಾವು ಕೇಳಲೇ ಇಲ್ಲ. ಬದಲಿಗೆ ಅವರ ಅರ್ಹತೆ, ಬದ್ಧತೆ, ಕೆಲಸ, ಅನುಭ, ಸಾಧನೆಗಳ ಬಗ್ಗೆ ಮಾತನಾಡಿದೆವು," ಎಂದರು ಮೀರಾ ಕುಮಾರ್.

ಜಾತೀಯತೆಯನ್ನು ಮೂಟೆಕಟ್ಟಿ ಪಾತಾಳದಲ್ಲಿ ಹೂತುಹಾಕಬೇಕು: ಮೀರಾ ಕುಮಾರ್ಜಾತೀಯತೆಯನ್ನು ಮೂಟೆಕಟ್ಟಿ ಪಾತಾಳದಲ್ಲಿ ಹೂತುಹಾಕಬೇಕು: ಮೀರಾ ಕುಮಾರ್

ಉತ್ತಮ ಆಲೋಚನೆಯ ಕಥೆ ಏನು?

ಉತ್ತಮ ಆಲೋಚನೆಯ ಕಥೆ ಏನು?

"ಈಗಾ ನಾನು ಮಾತ್ತು ಕೋವಿಂದ್ ಜೀ ಸ್ಪರ್ಧೆ ಮಾಡುತ್ತಿದ್ದಂತೆ ಜನರು ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಬಿಟ್ಟು ಬೇರೆ ಚರ್ಚೆಗಳೇ ನಡೆಯುತ್ತಿಲ್ಲ. ಈ ಮನಸ್ಥಿತಿಗಳನ್ನು ಇಟ್ಟುಕೊಂಡು ನಾವು ಇವತ್ತು ಎಲ್ಲಿ ನಿಲ್ಲುತ್ತೇವೆ. ಎಲ್ಲರೂ ಉತ್ತಮ ಮೂಲಸೌಕರ್ಯ, ಉತ್ತಮ ಉದ್ಯೋಗ ಮತ್ತು ಉತ್ತಮ ಅಭಿವೃದ್ಧಿಯನ್ನು ಬಯಸುತ್ತಾರೆ. ಆದರೆ ಉತ್ತಮ ಆಲೋಚನೆಯ ಕಥೆ ಏನು?," ಎಂದು ಪ್ರಶ್ನಿಸುತ್ತಾರೆ ಮೀರಾ ಕುಮಾರ್.

ದಲಿತ ವರ್ಸಸ್ ದಲಿತ ಬಣ್ಣ

ದಲಿತ ವರ್ಸಸ್ ದಲಿತ ಬಣ್ಣ

ಪವಿತ್ರ ರಾಷ್ಟ್ರಪತಿ ಚುನಾವಣೆಗೂ ದಲಿತ ವರ್ಸಸ್ ದಲಿತ ಬಣ್ಣ ನೀಡುತ್ತಿರುವುದಕ್ಕೆ ಅವಮಾನವಾಗುತ್ತಿದೆ ಎಂದ ಮೀರಾ ಕುಮಾರ್, ಈ ಮನಸ್ಥಿತಿಯಿಂದ ಮೇಲೇಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮೀರಾ ಕುಮಾರ್ ಗಿರುವ ಬೆಂಬಲದ ಬಗ್ಗೆ ಕೇಳಿದಾಗ, ನಾನು ನನ್ನ ಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು. ಎಲ್ಲಾ ಸದಸ್ಯರನ್ನುಮನವೊಲಿಸಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.

"ಎಲ್ಲಾ ಶಾಸಕರು ಮತ್ತು ಸಂಸದರಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದೇನೆ. ಕೆಲವರನ್ನು ವೈಯಕ್ತಿಕವಾಗಿ ಭೇಟಿಯೂ ಆಗುತ್ತಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಅವರ ಪಕ್ಷ ನಮಗೆ ಬೆಂಬಲಿಸಿದ್ದಕ್ಕೆ ಸಂತಸವಾಗುತ್ತದೆ," ಎಂದು ಹೇಳಿದರು.

ರಾಷ್ಟ್ರಪತಿ ಅಭ್ಯರ್ಥಿ ಮೀರಾ ವಿರುದ್ದ ಸುಷ್ಮಾ ಟೀಕೆ: ಕಾಂಗ್ರೆಸ್ ತಿರುಗೇಟುರಾಷ್ಟ್ರಪತಿ ಅಭ್ಯರ್ಥಿ ಮೀರಾ ವಿರುದ್ದ ಸುಷ್ಮಾ ಟೀಕೆ: ಕಾಂಗ್ರೆಸ್ ತಿರುಗೇಟು

ನಾನು ಬಲಿಪಶುವಲ್ಲ

ನಾನು ಬಲಿಪಶುವಲ್ಲ

ಇನ್ನು ಗೆಲ್ಲುವ ಅವಕಾಶವೇ ಇಲ್ಲದೆ ಚುನಾವಣೆಗೆ ನಿಂತು ಬಲಿಪಶು ಆಗಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಮೀರಾ ಕುಮಾರ್ ತಾವೊಬ್ಬ ಹೋರಾಟಗಾರ್ತಿ ಎಂದು ಪ್ರತಿಪಾದಿಸಿದರು. "ನಾನು ಬಲಿಪಶುವಲ್ಲ. ನಾನೊಬ್ಬಳು ಹೋರಾಟಗಾರ್ತಿ. ನಾನು ಹೋರಾಟ ಮಾಡುತ್ತೇನೆ. ಮತ್ತು ಈ ಸೈದ್ಧಾಂತಿಕ ಹೋರಾಟದಲ್ಲಿ ಹಲವಾರು ಜನ ನನ್ನ ಜತೆ ಕೂಡಿಕೊಳ್ಳುತ್ತಾರೆ," ಎಂದು ಮಾತು ಮುಗಿಸಿದರು ಮೀರಾ ಕುಮಾರ್.

English summary
The 'Dalit' and 'numbers' questions follow her wherever she goes but Meira Kumar is unfazed. With a clear plan in place and a vision for the country, the UPA's Presidential election nominee spoke to OneIndia amid her busy schedule when she visited Bengaluru on Saturday. Here are the excerpts of the exclusive interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X