ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಉಪ ಸಭಾಪತಿಗೆ ಪುಟ್ಟಣ್ಣಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಜುಲೈ 3: ಕರ್ನಾಟಕದ ಮಾಜಿ ವಿಧಾನ ಪರಿಷತ್ ಸದಸ್ಯ, ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಪುಟ್ಟಣ್ಣಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸ್ವತಃ ಪುಟ್ಟಣ್ಣ ಅವರೇ ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದ ಪುಟ್ಟಣ್ಣ ಅವರು ಮುಂಜಾಗ್ರತೆಯಿಂದ ಕ್ವಾರಂಟೈನ್‌ನಲ್ಲಿದ್ದರು. ಗುರುವಾರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಶುಕ್ರವಾರ ವರದಿ ಬಂದಿದ್ದು, ಪಾಸಿಟಿವ್ ಇರುವುದು ದಢೃವಾಗಿದೆ.

ಸಚಿವ ಡಾ.ಕೆ.ಸುಧಾಕರ್ ಪತ್ನಿ ಹಾಗೂ ಪುತ್ರಿಗೂ ಕೊರೊನಾವೈರಸ್ ಪಾಸಿಟಿವ್ಸಚಿವ ಡಾ.ಕೆ.ಸುಧಾಕರ್ ಪತ್ನಿ ಹಾಗೂ ಪುತ್ರಿಗೂ ಕೊರೊನಾವೈರಸ್ ಪಾಸಿಟಿವ್

ಈ ಕುರಿತು ಪುಟ್ಟಣ್ಣ ಫೇಸ್‌ಬುಕ್ನಲ್ಲಿ ಬರೆದುಕೊಂಡಿದ್ದು, ''ಕಳೆದ ನಾಲ್ಕು ದಿನಗಳಿಂದ ಜ್ವರ ಇದ್ದುದರಿಂದ, ಕ್ವಾರಂಟೈನ್ ನಲ್ಲಿ ಇದ್ದೆ. ಗುರುವಾರ ಕೊವೀಡ್ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆಯ ವರದಿ ಪಾಸಿಟಿವ್ ಬಂದಿರುವುದರಿಂದ ಶುಕ್ರವಾರ ಅಂದರೆ ನಿನ್ನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ.

''ದೇವರ ದಯೆ ಹಾಗೂ ನಿಮ್ಮ ಆಶೀರ್ವಾದದಿಂದ ಬೇಗ ಗುಣಮುಖನಾಗಿ ಬರುತ್ತೇನೆ ಎಂದು ನಂಬಿದ್ದೆನೆ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ನೀವು ಮತ್ತು ನಿಮ್ಮ ಕುಟುಂಬದವರು ಸುರಕ್ಷಿತವಾಗಿರಿ'' ಎಂದು ಪುಟ್ಟಣ್ಣ ಸಂದೇಶ ನೀಡಿದ್ದಾರೆ.

EX MLC Puttanna Tested Positive For Coronavirus

ಇದಕ್ಕೂ ಮುಂಚೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರ ತಂದೆ ಹಾಗೂ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು. ಮಾಗಡಿ ಮಾಜಿ ಶಾಸಕ ಎಚ್ ಸಿ ಬಾಲಕೃಷ್ಣ ಅವರ ಮಗಳಿಗೆ ಕೊರೊನಾ ದೃಢವಾಗಿತ್ತು.

English summary
Karnataka Ex MLC Puttanna Tested Positive for Coronavirus. His Result Come positive on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X