ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಟಿ ವಿವಾದ, ಸಿದ್ದರಾಮಯ್ಯ ದುಪ್ಪಟ ಎಳೆದಿದ್ದು ಏನಾಯ್ತು?: ಕಟ್ಟಾ ಪ್ರಶ್ನೆ

|
Google Oneindia Kannada News

ಬೆಂಗಳೂರು, ಮಾರ್ಚ್ 6: ತಮ್ಮ ವಿರುದ್ಧ ಅವಹೇಳನಾಕಾರಿ ಮತ್ತು ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಆರು ಸಚಿವರು ಕೋರ್ಟ್ ಮೆಟ್ಟಿಲೇರಿರುವ ನಡೆಯನ್ನು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಸಚಿವರಿಗೆ ಅವರ ಭಯ ಅವರಿಗೆ ಇರುತ್ತದೆ. ಯಾರು ಯಾವ ರೀತಿ ಸಿಡಿಗಳಲ್ಲಿ ಎಲ್ಲಿ ಇಟ್ಟಿರುತ್ತಾರೋ ಯಾರಿಗೆ ಗೊತ್ತು? ನಕಲಿ ಸಿ.ಡಿ, ಒರಿಜಿನಲ್ ಯಾವುದು ಎಂದು ನಮಗೆ ಗೊತ್ತಿಲ್ಲವಲ್ಲ. ಅದಕ್ಕೋಸ್ಕರ ಕೋರ್ಟ್‌ಗೆ ಹೋಗಿದ್ದಾರೆ ಎಂದು ಹೇಳಿದರು.

ಕೋರ್ಟ್ ಮೊರೆ ಹೋಗುತ್ತಿರುವ ಸಚಿವರಿಗೆ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ!ಕೋರ್ಟ್ ಮೊರೆ ಹೋಗುತ್ತಿರುವ ಸಚಿವರಿಗೆ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ!

ರಮೇಶ್ ಜಾರಕಿಹೊಳಿ ಅವರದು ಒರಿಜಿನಲ್ ಅಲ್ಲ, ನಕಲಿ ಸಿಡಿ ಎಂದು ಈಗ ಗೊತ್ತಾಗಿದೆಯಲ್ಲ. ಹೀಗಾಗಿ ತಮ್ಮ ಮೇಲೂ ಈ ರೀತಿಯ ನಕಲಿ ಸಿಡಿ ಮಾಡಿಸಿರಬಹುದು ಎಂದು ಆರು ಮಂದಿ ಕೋರ್ಟಿಗೆ ಹೋಗಿದ್ದಾರೆ. ಅವರ ರಾಜಕೀಯ ವಿರೋಧಿಗಳು, ಅವರ ಮೇಲೆ ಷಡ್ಯಂತ್ರ ಮಾಡುವವರು ಈ ಕೃತ್ಯ ಮಾಡಿರಬಹುದು' ಎಂದು ಕಟ್ಟಾ ಅಭಿಪ್ರಾಯಪಟ್ಟರು.

ಯಾರು ಹೆದರಿಸಿರುತ್ತಾರೋ..

'ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಸಂಕಷ್ಟ ಬರುತ್ತದೆ. ಅವರನ್ನು ಯಾರು, ಯಾವ ರೀತಿ ಹೆದರಿಸಿರುತ್ತಾರೋ, ಬ್ಲಾಕ್‌ಮೈಲ್ ಮಾಡಿರುತ್ತಾರೋ ಯಾರಿಗೆ ಗೊತ್ತು? ಅದಕ್ಕಾಗಿಯೇ ನ್ಯಾಯಾಲಯಕ್ಕೆ ಹೋಗಿದ್ದಾರೆ' ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

ರಾಜೀನಾಮೆ ವಾಪಸ್ ಆಗಲಿದೆ

ರಾಜೀನಾಮೆ ವಾಪಸ್ ಆಗಲಿದೆ

'ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದ್ದು ಸರಿಯಾಗಿದೆ. ಅದರ ನಂತರದ ಕ್ರಮದ ಬಗ್ಗೆ ಯಡಿಯೂರಪ್ಪ, ಕೇಂದ್ರದ ನಾಯಕರು ಯೋಚನೆ ಮಾಡುತ್ತಾರೆ. ಮುಂದೆ ಆ ರಾಜೀನಾಮೆಯನ್ನು ವಾಪಸ್ ತೆಗೆದುಕೊಳ್ಳುತ್ತಾರೆ' ಎಂದು ಭರವಸೆ ವ್ಯಕ್ತಪಡಿಸಿದರು.

ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್

ಸಿದ್ದರಾಮಯ್ಯ ಮೇಲೂ ಆರೋಪ

ಸಿದ್ದರಾಮಯ್ಯ ಮೇಲೂ ಆರೋಪ

ಎಲ್ಲರ ಕಾಲದಲ್ಲೂ ಈ ರೀತಿ ಆರೋಪ ಬಂದಿವೆ ಮತ್ತು ಅವರು ದೋಷ ಮುಕ್ತರಾಗಿದ್ದಾರೆ. ಮೇಟಿ ಅವರ ಪ್ರಕರಣ ಸಿದ್ದರಾಮಯ್ಯ ಕಾಲದಲ್ಲಿ ಬಂದಿತ್ತು. ಸಿದ್ದರಾಮಯ್ಯ ದುಪ್ಪಟ ಎಳೆದರು ಏನಾಯ್ತು? ಸರ್ಕಾರಗಳಲ್ಲಿ ಈ ರೀತಿಯ ಆರೋಪಗಳು ಬಂದಿವೆ, ಎಲ್ಲರೂ ನಿರ್ದೋಷಿಗಳೆಂದು ಹೊರಬಂದಿದ್ದಾರೆ. ರಮೇಶ್ ಅವರೂ ನಿರ್ದೋಷಿಯೆಂದು ಹೊರಬರುತ್ತಾರೆ. ಇದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.

ಆತ್ಮರಕ್ಷಣೆ ಅವರೇ ಮಾಡಿಕೊಳ್ಳಬೇಕಿದೆ

ಆತ್ಮರಕ್ಷಣೆ ಅವರೇ ಮಾಡಿಕೊಳ್ಳಬೇಕಿದೆ

ನ್ಯಾಯಾಲಯಕ್ಕೆ ಹೋಗದೆ ಇನ್ನು ಏನು ಮಾಡೋಕೆ ಆಗುತ್ತದೆ? ಅವರವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳುವ ಕಾಲ ಬಂದಿದೆ. ಯಾರು ಬೇಕಾದರೂ ನಕಲಿ ಸಿಡಿ ಮಾಡುತ್ತಾರೆ. ಇಲ್ಲಿ ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಲು ಸಿದ್ದರಾಗಿದ್ದಾರೆ. ಹೀಗಾಗಿ ಅವರು ಕೂಡ ಮೊದಲೇ ಸಿದ್ಧರಾಗಿ ಕೋರ್ಟಿಗೆ ಹೋಗಿದ್ದಾರೆ. ಅವರ ಮೇಲೂ ಇಂತಹ ನಕಲಿ ಸಿಡಿ ಇವೆ ಎಂದು ಯಾರಾದರೂ ಹೇಳಿರುತ್ತಾರೆ. ಅದಕ್ಕಾಗಿ ಹೋಗಿರಬಹುದು ಎಂದು ಸಚಿವರನ್ನು ಸಮರ್ಥಿಸಿಕೊಂಡರು.

ಶಾಕಿಂಗ್ ಸುದ್ದಿ: ಸಿಡಿ ಬಗ್ಗೆ ಸಚಿವರಿಗೆ ಮೊದಲೇ ಸುಳಿವು ಸಿಕ್ಕಿತ್ತಾ?ಶಾಕಿಂಗ್ ಸುದ್ದಿ: ಸಿಡಿ ಬಗ್ಗೆ ಸಚಿವರಿಗೆ ಮೊದಲೇ ಸುಳಿವು ಸಿಕ್ಕಿತ್ತಾ?

English summary
Ramesh Jarkiholi CD Row: Former BJP Minster Katta Subramanya Naidu defended the 6 ministers move to file petition in court not to telecast any false news against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X