ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಕ್ಸಿಜನ್ ಕೊರತೆಯಿಂದ ಸಾವುಗಳಾದರೆ ರಾಜ್ಯ ಸರ್ಕಾರವೇ ಹೊಣೆ: ಎಚ್‌ಕೆ ಪಾಟೀಲ್

|
Google Oneindia Kannada News

ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಸರ್ಕಾರದ ಅಸಮರ್ಪಕತೆ ಮುಂದುವರಿದಿದೆ. ಜನ ಇನ್ನೂ ಸಮಸ್ಯೆಗೆ ತುತ್ತಾಗುತ್ತಲೇ ಇದ್ದಾರೆ. ಬೆಡ್, ಸಿಬ್ಬಂದಿ, ಔಷಧಿಗಳ ಸಮಸ್ಯೆ ಮುಂದುವರಿದಿದೆ. ಆಕ್ಸಿಜನ್ ಕೊರತೆ ಇದೀಗ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಆರೋಪಿಸಿದರು.

Recommended Video

Vedkrishi-ರೈತರಿಗೆ ಉಪಯೋಗವಾಗುತ್ತೆ ಈ ಅಪ್ಲಿಕೇಶನ್ | Oneindia Kannada

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, 25,000 ಸಾವಿರ ರೋಗಿಗಳಿಗೆ ಆಮ್ಲಜನಕದ ಪೂರೈಕೆ ಆಗುತ್ತಿಲ್ಲ. ಸುಮಾರು ಒಂದು ಸಾವಿರ ಜನರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಕೊರತೆ ಮುಂದುವರಿದಿದೆ. ಗುಜರಾತ್ ಕಂಪನಿಯೊಂದಕ್ಕೆ ಟೆಂಡರ್ ಕೊಟ್ಟು ವಾಪಸ್ ಪಡೆದಿದ್ದಾರೆ. ಲಿಕ್ವಿಡ್ ಆಕ್ಸಿಜನ್ ಫೈಪ್ ಲೈನ್ ಹಾಕಿಲ್ಲ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದರೆ ಸರ್ಕಾರವೇ ಹೊಣೆ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.

ಮದ್ಯ ಮಾರಾಟ ಮಾಡಿದವರಿಗೆ ಹೊಸ ಸಂಕಷ್ಟ!ಮದ್ಯ ಮಾರಾಟ ಮಾಡಿದವರಿಗೆ ಹೊಸ ಸಂಕಷ್ಟ!

ಬಿಇಐಸಿಯಲ್ಲಿ ಕೋವಿಡ್ ಸೆಂಟರ್ ಮಾಡಿದ್ದಾರೆ. ಆದರೆ ಅಲ್ಲಿ ಕುಡಿಯುವ ನೀರಿಲ್ಲ. 15 ಕೊಠಡಿಗಳಿಗೆ ಒಂದು ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿತನ ಕಾರಣ. ಇದರ ಬಗ್ಗೆ ಮಾನವಹಕ್ಕುಗಳ ಆಯೋಗಕ್ಕೆ ವಿವರಿಸಿದ್ದೇನೆ ಎಂದರು. ಮುಂದೆ ಓದಿ.

ಟಾಸ್ಕ್ ಪೋರ್ಸ್ ರಚಿಸಲಿ

ಟಾಸ್ಕ್ ಪೋರ್ಸ್ ರಚಿಸಲಿ

ಸರ್ಕಾರ ಒಂದು ಟಾಸ್ಕ್ ಪೋರ್ಸ್ ಮಾಡಬೇಕು. ಆಕ್ಸಿಜನ್, ಹಾಸಿಗೆಗಳ ಪೂರೈಕೆ ಮತ್ತು ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ವಿಮಾನ ಅಥವಾ ಹೆಲಿಕಾಪ್ಟರ್‌ಗಳ ಮೂಲಕ ಇವುಗಳನ್ನು ಪೂರೈಕೆ ಮಾಡಿಕೊಳ್ಳಲಿ. ಈ ಎಲ್ಲ ಕೆಲಸಗಳನ್ನು ಟಾಸ್ಕ್ ಫೋರ್ಸ್ ಸಮಿತಿ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಉಳ್ಳವನಿಗೆ ಲಾಭ

ಉಳ್ಳವನಿಗೆ ಲಾಭ

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅನುಷ್ಟಾನವನ್ನು ಖಂಡಿಸಿದ ಅವರು, ಇಂದಿನಿಂದ ಸುಗ್ರೀವಾಜ್ಞೆಯ ಕಾನೂನು ಜಾರಿಗೆ ಬರುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರ ಭೂಮಿ ಮಾರುವ ಕಾನೂನಿಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದಿರುವುದು ರೈತರಿಕೆ ಮಾರಕವಾಗಿದೆ. ಉಳುವವನಿಂದ ಭೂಮಿ ಕಿತ್ತು ಉಳ್ಳವನಿಗೆ ನೀಡಿದೆ. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ನಮ್ಮ ಪಕ್ಷ ಇದನ್ನ ವಿರೋಧಿಸಿದೆ ಎಂದು ತಿಳಿಸಿದರು.

ಕಾನೂನು ಮೀರಿ ಕೃಷಿ ಭೂಮಿ ಖರೀದಿ

ಕಾನೂನು ಮೀರಿ ಕೃಷಿ ಭೂಮಿ ಖರೀದಿ

ಕಾನೂನು ಮೀರಿ ಕೃಷಿ ಭೂಮಿ ಖರೀದಿಸಿರುವ ಐದರಿಂದ ಎಂಟು ಸಾವಿರ ಪ್ರಕರಣಗಳಿವೆ. ಬೆಂಗಳೂರು ಸೇರಿದಂತೆ ಹಲವೆಡೆ ಈ ರೀತಿ ಉಳ್ಳವರು ಕೃಷಿ ಭೂಮಿ ಖರೀದಿಸಿದ್ದಾರೆ. ಅವನ್ನು ನಿಯಮಾನುಸಾರ ಎಂದು ಘೋಷಣೆ ಮಾಡಲು ಸರ್ಕಾರ ಈ ಸುಗ್ರೀವಾಜ್ಞೆ ಬಳಸುತ್ತಿದೆ. ರೈತರ ಹೊಲ ಮಾರುವ ಅವಕಾಶಕ್ಕೆ ಸುಗ್ರೀವಾಜ್ಞೆ ಹೊರಡಿಸುವುದು ಸರಿಯಲ್ಲ.

ರೈತರಿಗೆ ವಾಸ್ತವ ಬೆಲೆ ಸಿಗಬೇಕು

ರೈತರಿಗೆ ವಾಸ್ತವ ಬೆಲೆ ಸಿಗಬೇಕು

ಇಂತಹ ಕೆಲಸಕ್ಕೆ ಚಾಲನೆ ಕೊಡುವ ಇವರ ಉದ್ದೇಶ ಏನು..? ಭೂಮಿ ಖರೀದಿ ಮಾಡಿದಾಗ ರೈತರು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿದ್ದರೂ ಕೂಡ ಇಂದು ಕೋಟಿ ಕೋಟಿ ಬೆಲೆ ಇದೆ. ಹೀಗಾಗಿ ರೈತರ ಭೂಮಿ ಇಂದಿನ ಬೆಲೆಗೆ ಖರೀದಿ ಆಗಬೇಕು. ಇಂದಿನ ಭೂಮಿಯ ಬೆಲೆ ರೈತರಿಗೆ ಸಿಗಬೇಕು ಎಂದ ಅವರು, ಸದನದಲ್ಲಿ ಚರ್ಚೆಯಾಗುವವರೆಗೆ ಕಾಯ್ದೆ ಅನುಷ್ಠಾನ ಬೇಡ ಎಂದು ಒತ್ತಾಯಿಸಿದರು.

ತೆರಿಗೆ ಹಣ ಸಂಗ್ರಹದಲ್ಲಿ ಖೋತಾ ವಿಚಾರ ಪ್ರಸ್ತಾಪಿಸಿದ ಎಚ್‌ಕೆ ಪಾಟೀಲ, ಇದರ ಬಗ್ಗೆ ನಮ್ಮ‌ಲೆಕ್ಕಪತ್ರ ಸಮಿತಿಯಲ್ಲಿ ಚರ್ಚಿಸುತ್ತೇವೆ. ನಂತರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

English summary
Ex minister HK Patil has criticised the state BJP government on handling the issues of COVID cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X