ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆ ವೇಳೆ 3.25 ಲಕ್ಷ ಪ್ರಯಾಣಿಕರಿಂದ ಮೆಟ್ರೋ ಬಳಕೆ

|
Google Oneindia Kannada News

ಬೆಂಗಳೂರು, ಜನವರಿ 1 : ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತೊಯ್ಯುವ ನಮ್ಮ ಮೆಟ್ರೋ 2017 ರ ಕೊನೆಯ ದಿನವಾದ ಭಾನುವಾರ ನಮ್ಮ ಮೆಟ್ರೋದಲ್ಲಿ 3.25 ಲಕ್ಷ ಪ್ರಯಾಣಿಕರು ಮಧ್ಯರಾತ್ರಿ 2 ಗಂಟೆಯವರೆಗೆ ಪ್ರಯಾಣಿಸಿದ್ದಾರೆ.

ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ನೇರಳೆ ಮಾರ್ಗದಲ್ಲಿ 1,69, 216 ಪ್ರಯಾಣಿಕರು ಮತ್ತು ನಾಗಸಂದ್ರದಿಂದ ಎಲಚೇನಹಳ್ಳಿಯ ಹಸಿರು ಮಾರ್ಗದಲ್ಲಿ 1,56, 653ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಡಿಸೆಂಬರ್ 31ರ ರಾತ್ರಿ ಮೆಟ್ರೋ ಪ್ರಯಾಣ ದುಬಾರಿಡಿಸೆಂಬರ್ 31ರ ರಾತ್ರಿ ಮೆಟ್ರೋ ಪ್ರಯಾಣ ದುಬಾರಿ

ಸರಾಸರಿ ಭಾನುವಾರದಂದು ರಾತ್ರಿ 9 ಗಂಟೆಯಿಂದ 11 ಗಂಟೆಯವರೆಗೆ ಸುಮಾರು ೩ ಲಕ್ಷ ಜನ ಪ್ರಯಾಣಿಸಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ಪ್ರಕಾರ ಎರಡೂ ಮಾರ್ಗಗಳಲ್ಲಿ ರಾತ್ರಿ 11 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ 20,886 ಹಾಗೂ ಹಸಿರು ಮಾರ್ಗದಲ್ಲಿ 10,230 ಜನ ಪ್ರಯಾಣಿಸಿದ್ದಾರೆ.

Eve of new year 3.25 lakh commuters used Namma metro

ಈ ೪ ಗಂಟೆ ವಿಸ್ತರಣಾ ಅವಧಿಯಲ್ಲಿ ಎಂಜಿ ರಸ್ತೆ, ಟ್ರಿನಿಟಿ ವೃತ್ತ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ಹೋಗಬೇಕಿದ್ದರೂ 50 ರೂ. ಟಿಕೆಟ್ ದರ ವಿಧಿಸಲಾಗಿತ್ತು. . ಟ್ರಿನಿಟಿ-ನಾಗಸಂದ್ರ ನಡುವೆ ಹೊರತುಪಡಿಸಿ ಈ ಮೂರು ನಿಲ್ದಾಣದಿಂದ ನಾಲ್ಕೂ ದಿಕ್ಕಿನ ಕೊನೆಯ ನಿಲ್ದಾಣಕ್ಕೆ ಪ್ರಯಾಣಿಸಿದರೂ 50 ರೂ. ಆಗುವುದಿಲ್ಲ. ಆದರೆ ಡಿ.31ರ ರಾತ್ರಿ ಒಂದು ನಿಲ್ದಾಣಕ್ಕೆ ಹೋಗಬೇಕೆಂದರೆ ಅಷ್ಟು ಹಣ ನೀಡಿಯೇ ತೆರಳಬೇಕಾಯಿತು. ಈ ನಿಲ್ದಾಣಗಳಲ್ಲಿ ನಾಲ್ಕು ಗಂಟೆ ಸಮಯದಲ್ಲಿ ಐವತ್ತಕ್ಕೆ ಟಿಕೆಟ್ ದರ ನಿಗದಿ ಮಾಡಿ ಬಿಎಂಆರ್ ಸಿಎಲ್ ಎಷ್ಟು ಹಣಗಳಿಸಿರಬಹುದು ಎಂದು ಪ್ರಯಾಣಿಕರು ಗೊಣಗಿದ್ದಾರೆ.

ಇನ್ನು ಕೆಲವರು ಮೆಟ್ರೋಗಳಲ್ಲಿ ಮಹಿಳೆಯರಿಗೆ, ಗರ್ಭಿಣಿಯರಿಗೆ, ವಯಸ್ಕರಿಗೆ ಪುರುಷರು ಮಾತ್ರ ಸೀಟು ಬಿಟ್ಟು ಕೊಡಬೇಕೆ, ಯುವತಿಯರು ಮಾತ್ರ ಆರಾಮಾಗಿ ಕೂರಬಹುದೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೆಟ್ರೋದಲ್ಲಿ ಪ್ರಯಾಣಿಕರು ಹೆಚ್ಚಾದಾಗ ಪುರುಷರು ಮಾತ್ರ ಸೀಟು ಬಿಟ್ಟು ಎದ್ದು ನಿಲ್ಲುತ್ತಾರೆ. ಆದರೆ ಅದು ಹುಡುಗಿಯರಿಗೆ ಯಾಕೆ ಅನ್ವಯಿಸುವುದಿಲ್ಲ ಎಂದು ಫೇಸ್ ಬುಕ್ ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮೆಟ್ರೋ ಬೋಗಿಗಳನ್ನು ಹೆಚ್ಚಿಸುವ ಕುರಿತು ಬಿಎಂಆರ್ ಸಿ ಎಲ್ ಆಲೋಚಿಸಿದೆ.

English summary
Namma metro has served around 19 hours on Sunday to provide transportation to commuters on the eve of new year and 3.25 commuters were used the same. The services was extended in purple and Green lane up to 2am for the convince of public who were in central Bengaluru for celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X