• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ ಪ್ರಚಾರಕ ಬೆನ್ನಿ ಹಿನ್ ಬೆಂಗಳೂರು ಭೇಟಿ ಖಚಿತ

By Mahesh
|
ಬೆಂಗಳೂರು, ಜ.13: ಕ್ರೈಸ್ತ ಮತ ಪ್ರಚಾರಕ ಬೆನ್ನಿಹಿನ್ ಅವರ ಉದ್ದೇಶಿತ ಬೆಂಗಳೂರಿನ ಪ್ರಾರ್ಥನಾ ಸಭೆ ಕಾರ್ಯಕ್ರಮ ವೇಳಾಪಟ್ಟಿ ಮೊಟಕುಗೊಳಿಸಿರುವ ಸುದ್ದಿ ಖಾಸಗಿ ವಾಹಿನಿಗಳು ಪ್ರಸಾರ ಸೋಮವಾರ ಮಾಡಿವೆ. ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಹೆದರಿ ಬೆನ್ನಿಹಿನ್ ಅವರ ಕಾರ್ಯಕ್ರಮ ಮೂರು ದಿನಗಳ ಬದಲಿಗೆ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.

ಇದರ ಜತೆಗೆ, ಜ.15ರಂದು ನಿಗದಿ ಕಾರ್ಯಕ್ರಮ ಎಂದಿನಂತೆ ನಡೆಯಲಿದೆ. ಜ.15ರಿಂದ ಜ.17ರ ತನಕ ಇದ್ದ ಕಾರ್ಯಕ್ರಮದಲ್ಲಿ ಬದಲಾವಣೆ ನಿಶ್ಚಿತವಾಗಿದ್ದು, ಜ.15ರಂದು ಬೆಂಗಳೂರಿಗೆ ಬರಲಿರುವ ಬೆನ್ನಿಹಿನ್ ಅಂದೇ ರಾತ್ರಿ ವಿಮಾನ ಹತ್ತಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸೋಮವಾರ(ಜ.13) ಬೆನ್ನಿ ಹಿನ್ ಅವರ ಬೆಂಗಳೂರು ಭೇಟಿ ಬಗ್ಗೆ ಆಯೋಜಕರಿಂದ ಸುದ್ದಿಗೋಷ್ಠಿ ನಿಗದಿಯಾಗಿತ್ತು. ಆದರೆ, ಇಂದು ಸುದ್ದಿಗೋಷ್ಠಿ ರದ್ದಾದ ಕಾರಣ ಬೆನ್ನಿ ಹಿನ್ ಬರುವಿಕೆ ಬಗ್ಗೆ ನಾನಾ ಊಹಾಪೋಹಗಳು ಹರಿದಾಡಿತ್ತು.[ಬೆನ್ನಿಹಿನ್ ಭೇಟಿಗೆ ಬಿಜೆಪಿ ವಿರೋಧ]

ಈ ನಡುವೆ ಬೆಂಗಳೂರಿನ ಪ್ರಾರ್ಥನಾ ಸಭೆಯನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಧರಣಿ ನಡೆಸುತ್ತಿದ್ದ ಭಾರತ ಕ್ರಾಂತಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.[ಬೆನ್ನಿಹಿನ್ ಭೇಟಿಗೆ ಅವಕಾಶ ನೀಡಿದ ಹೈಕೋರ್ಟ್]

ಪವಾಡ ಪುರುಷ, ಕ್ರೈಸ್ತ ಪಾದ್ರಿ ಬೆನ್ನಿಹಿನ್ ಆಯೋಜಿಸಿರುವ ಸಾಮೂಹಿಕ ಚಿಕಿತ್ಸಾ ಪ್ರಾರ್ಥನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಶ್ರೀರಾಮ ಸೇವೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಭೇಟಿಗೆ ಅವಕಾಶ ನೀಡಿದೆ. ಇದರಿಂದ ಬೆನ್ನಿಹಿನ್ ಕಾರ್ಯಕ್ರಮಕ್ಕೆ ಕಾನೂನಿನ ಒಪ್ಪಿಗೆ ದೊರಕಿದ್ದು, ಜ.15ರಿಂದ ಬೆನ್ನಿಹಿನ್ ಬೆಂಗಳೂರಿನಲ್ಲಿ ಪ್ರಾರ್ಥನಾ ಸಭೆ ನಡೆಸಲಿದ್ದಾರೆ.

ಜನವರಿ 15ರಿಂದ ಜ.17ರವರೆಗೆ ಇಸ್ರೇಲ್ ಮೂಲದ ಬೈಬಲ್ ಶಿಕ್ಷಕ ಬೆನ್ನಿ ಹಿನ್ ಬೆಂಗಳೂರಿನ ಯಲಹಂಕದಲ್ಲಿರುವ ಸೂಪರ್ ನೋವಾ ಅರೀನಾ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಸಮ್ಮೇಳವನ್ನು ಹಮ್ಮಿಕೊಂಡಿದ್ದಾನೆ. ಪ್ರತಿದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ದರ ನಿಗದಿ ಪಡಿಸಲಾಗಿದ್ದು, ವಿವರಗಳಿಗೆ ಬೆನ್ನಿ ಹಿನ್ ವೆಬ್ ತಾಣ ನೋಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Evangelist Benny Hinn Visit to Bangalore Confirmed amid of protests from Saffron groups in parts of Karnataka over the his visit. Right-wing groups claim that the self-proclaimed miracle healer was using this as a tool to convert people to Christianity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more