ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕೂಟರ್, ಬೈಕ್ ಇರುವ ದಕ್ಷಿಣ ಭಾರತದ ಅತಿ ದೊಡ್ಡ ಇವಿ ಎಕ್ಸ್ ಪೋ ಶುರು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ದಕ್ಷಿಣ ಭಾರತದ ತಿ ದೊಡ್ಡ ಪರಿಸರಸ್ನೇಹಿ ಎಲೆಕ್ಟ್ರಿಕಲ್ ವಾಹನ ತಂತ್ರಜ್ಞಾನ ಎಕ್ಸ್ ಪೋ 'EV EXPO South 2018'ಕ್ಕೆ ಗುರುವಾರದಂದು ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ/ಶಾಲಿನಿ ಆಟದ ಮೈದಾನದಲ್ಲಿ ಚಾಲನೆ ದೊರೆಯಿತು.

ಮೂರು ದಿನಗಳ ಈ ಎಕ್ಸ್ ಪೋ ಅನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಉದ್ಘಾಟಿಸಿದರು. ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಕಾರಣಕ್ಕೆ ಬೆಂಗಳೂರಿಗರು ತುರ್ತಾಗಿ ಇ ವಾಹನಗಳ ಬಳಕೆ ಆರಂಭಿಸಬೇಕಿದೆ. ಕೇಂದ್ರಸಚಿವರಾದ ಅನಂತ್ ಕುಮಾರ್ ಅವರು ಅಳವಡಿಸಿದ ಹಾಗೂ ಆರಂಭಿಸಿದ್ದನ್ನು ಮೆಚ್ಚಿಕೊಂಡರು. ಈಗಾಗಲೇ ಹಲವರು ಇ ವಾಹನಗಳ ಬಳಕೆ ಆರಂಭಿಸಿದ್ದಾರೆ ಎಂದರು.

EV EXPO South 2018 kick-started in Bengaluru

ವೋಲ್ವೊ ಗುಂಪಿನ ಅಧ್ಯಕ್ಷ ಕಮಲ್ ಬಾಲಿ, ಇ ವಾಹನಗಳ ಅಭಿವೃದ್ಧಿಯ ಅಗತ್ಯವನ್ನು ಭಾರತವು ತಿಳಿಸಿಕೊಟ್ಟಿದೆ. ಈ ವಲಯದ ಉತ್ಪಾದಕರು ಹಾಗೂ ಗ್ರಾಹಕರಿಗೆ ಪೂರಕ ವಾತಾವರಣ ನಿರ್ಮಿಸಿರುವ ನರೇಂದ್ರ ಮೋದಿ ಸರಕಾರವನ್ನು ಶ್ಲಾಘಿಸಿದರು.

ಮೂರು ದಿನಗಳ ಈ ಎಕ್ಸ್ ಪೋನಲ್ಲಿ ಹೊಸ ಹಾಗೂ ಅತ್ಯಾಧುನಿಕ ಇ ವಾಹನಗಳಾದ ಇ ರಿಕ್ಷಾ, ಇ ಕಾರ್ಟ್ಸ್, ಇ ಬೈಕ್, ಇ ಸ್ಕೂಟರ್, ಇ ಬೈಸಿಕಲ್ಸ್, ಇ ಲೋಡರ್ಸ್ ಗಳನ್ನು ಪ್ರದರ್ಶಿಸಲಾಗಿದ್ದು, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ನಲವತ್ತು ಕಂಪೆನಿಗಳು ಭಾಗವಹಿಸಿವೆ. ಹೊಸ ಲಿಥಿಯಂ ಬ್ಯಾಟರಿ ಹಾಗೂ ಚಾರ್ಜಿಂಗ್ ಸ್ಟೇಷನ್ ಗಳನ್ನೂ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾಗಿದೆ.

EV EXPO South 2018 kick-started in Bengaluru

ಶಾಸಕಿ ಸೌಮ್ಯಾರೆಡ್ಡಿ, ಶಾಸಕ ರವಿಸುಬ್ರಹ್ಮಣ್ಯ, ತಾರಾ, ಉದಯ್ ಗರುಡಾಚಾರ್, ಎ.ದೇವೇಗೌಡ, ಮಾಲತಿ ಬಿ.ಸೋಮಶೇಖರ್, ಗೀತೇಶ್ ಅಗರ್ವಾಲ್, ಅನುಜ್ ಶರ್ಮಾ, ರವಿ ಅರೋರಾ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

English summary
Southern India's biggest eco-friendly Electric Vehicle Technology Expo 'EV EXPO South 2018' kick-started on Thursday at Chandragupta Maurya Playground/ Shalini Ground , Jayanagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X