ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುರೋಪಿಯನ್ ತಂಡಕ್ಕೆ ಅದಮ್ಯ ಚೇತನ ಪರಿಚಯಿಸಿದ ತೇಜಸ್ವಿನಿ ಅನಂತ್

|
Google Oneindia Kannada News

ಬೆಂಗಳೂರು, ನವೆಂಬರ್ 24: ಭಾರತೀಯ ವಸುದೈವ ಕುಟುಂಬಕಂ ಪರಿಕಲ್ಪನೆಯ ಕೌಟುಂಬಿಕ ವ್ಯವಸ್ಥೆಯನ್ನು ಅಧ್ಯಯನ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಶ್ಚಿಮಾತ್ಯ ದೇಶಗಳು, ರಷ್ಯಾ ಮತ್ತು ಯೂರೋಪಿನ 31 ಸದಸ್ಯರ ತಂಡಕ್ಕೆ ಅದಮ್ಯ ಚೇತನದಲ್ಲಿ ಭಾನುವಾರ ಮಧ್ಯಾಹ್ನ ಉಪಹಾರ ಕೂಟದೊಂದಿಗೆ ಭಾರತೀಯ ಕೌಟುಂಬಿಕ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಶ್ರೀಮತಿ ಮಾಧುರಿ ಸಹಸ್ರಬುದ್ಧೆ ಅವರ ನೇತೃತ್ವದ ನಾಲ್ವರು ಉತ್ಸಾಹಿ ಮಾತೆಯರು 14 ತಿಂಗಳ ಕಾಲ ಆ ರಾಷ್ಟ್ರಗಳಲ್ಲಿನ ಕುಟುಂಬಗಳೊಂದಿಗೆ ಬೆರೆತು ಅಲ್ಲಿನ ಕೌಟುಂಬಿಕ ವ್ಯವಸ್ಥೆ, ಆಚಾರ-ವಿಚಾರಗಳು, ಕಲೆ ಸಂಸ್ಕೃತಿ ಸೇರಿದಂತೆ ಮತ್ತಿತರೆ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿಕೊಂಡು ಬಂದಿದ್ದರು.

ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಯೋಜನೆ: ಸಚಿವ ಸಿಸಿ ಪಾಟೀಲ್‌ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಯೋಜನೆ: ಸಚಿವ ಸಿಸಿ ಪಾಟೀಲ್‌

ಇದಕ್ಕೆ ಪ್ರತಿಯಾಗಿ ಆ ದೇಶಗಳ 31 ಸದಸ್ಯರ ತಂಡ ಭಾರತಕ್ಕೆ ಆಗಮಿಸಿದ್ದು, ಇಲ್ಲಿ ಕೌಟುಂಬಿಕ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸುತ್ತಿದೆ. ಇದರ ಅಂಗವಾಗಿ ಬೆಂಗಳೂರಿಗೆ ಬಂದಿರುವ ಈ ತಂಡಕ್ಕೆ ತೇಜಸ್ವಿನಿ ಅನಂತಕುಮಾರ್ ನೇತೃತ್ವದ ಅದಮ್ಯ ಚೇತನದಲ್ಲಿ ಭಾರತೀಯ ಕೌಟುಂಬಿಕ ವ್ಯವಸ್ಥೆ, ಇಲ್ಲಿನ ಕುಟುಂಬದ ಪರಿಕಲ್ಪನೆ ಸೇರಿದಂತೆ ಇನ್ನಿತರೆ ವಿಚಾರಗಳನ್ನು ಮಂಥನ ಮಾಡಲಾಯಿತು.

ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ

ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ

ಈ ಸಂದರ್ಭದಲ್ಲಿ ಮಾತನಾಡಿದ ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು, "ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕೌಟುಂಬಿಕ ವ್ಯವಸ್ಥೆ ಇರುತ್ತದೆ. ಅವರವರ ಆಚರಣೆಯನ್ನು ಅವರು ಮಾಡುತ್ತಾರೆ. ಆದಾಗ್ಯೂ, ಒಟ್ಟಾರೆ ಮಾನವ ಕುಲದ ಕೌಟುಂಬಿಕ ವ್ಯವಸ್ಥೆಯು ಮಾನವೀಯ ನೆಲೆಗಟ್ಟಿನ ಮೇಲೆ ನಿಂತಿರುತ್ತದೆ" ಎಂದು ಅಭಿಪ್ರಾಯಪಟ್ಟರು.

ವಸುದೈವ ಕುಟುಂಬಕಂ ಕಲ್ಪನೆ ವಿವರಣೆ

ವಸುದೈವ ಕುಟುಂಬಕಂ ಕಲ್ಪನೆ ವಿವರಣೆ

"ಅಲ್ಲಲ್ಲಿ ಯುದ್ಧ ಮತ್ತು ಭಯೋತ್ಪಾದನೆಯಂತಹ ಚಟುವಟಿಕೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ವಸುದೈವ ಕುಟುಂಬಕಂ ಪರಿಕಲ್ಪನೆ ಒಂದು ದಾರಿದೀಪವಾಗಲಿದೆ. ಎಲ್ಲರೂ ಒಗ್ಗಟ್ಟಾಗಿ ಒಂದು ಕುಟುಂಬದ ಪರಿಕಲ್ಪನೆಯಲ್ಲಿ ಬದುಕಬೇಕೆಂಬ ಮಾರ್ಗವನ್ನು ಇದು ಸಾರುತ್ತದೆ. ಇಂತಹ ವ್ಯವಸ್ಥೆಯನ್ನು ರೂಢಿಸಿಕೊಂಡಲ್ಲಿ ಎಲ್ಲಿಯೂ ಸಹ ಬೇಧ-ಭಾವ, ದ್ವೇಷ-ಅಸೂಯೆಯಂತಹ ಕೆಟ್ಟ ಆಲೋಚನೆಗಳೇ ಬರುವುದಿಲ್ಲ. ಹೀಗಾಗಿ ವಸುದೈವ ಕುಟುಂಬಕಂ ಎಂಬ ಮಾನವೀಯ ಮೌಲ್ಯಗಳನ್ನು ಸಾರುವ ಮಂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಕರೆ ನೀಡಿದರು.

ತೇಜಸ್ವಿನಿ ಮನೆ ಆತಿಥ್ಯ ಸ್ವೀಕರಿಸಿದ ದೇಶದ ಪ್ರಥಮ ಪ್ರಜೆತೇಜಸ್ವಿನಿ ಮನೆ ಆತಿಥ್ಯ ಸ್ವೀಕರಿಸಿದ ದೇಶದ ಪ್ರಥಮ ಪ್ರಜೆ

ಮಾಧುರಿ ಸಹಸ್ರಬುದ್ಧೆ ಮಾತನಾಡಿ

ಮಾಧುರಿ ಸಹಸ್ರಬುದ್ಧೆ ಮಾತನಾಡಿ

ಇದೇ ವೇಳೆ ಮಾತನಾಡಿದ ಮಾಧುರಿ ಸಹಸ್ರಬುದ್ಧೆ ಅವರು, ನಾವು ಪಾಶ್ಚಿಮಾತ್ಯ ದೇಶಗಳಿಗೆ ಹೋಗಿ ಅಲ್ಲಿ ಕುಟುಂಬಗಳ ವ್ಯವಸ್ಥೆ, ಅಲ್ಲಿನ ಆಚಾರ-ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಅದೇ ರೀತಿ ಆ ದೇಶಗಳ ಪ್ರತಿನಿಧಿಗಳೂ ಸಹ ಇಲ್ಲಿಗೆ ಬಂದಿದ್ದು, ಭಾರತೀಯ ಕುಟುಂಬ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಈ ಮೂಲಕ ಎರಡೂ ದೇಶಗಳಲ್ಲಿನ ಕೌಟುಂಬಿಕ ವ್ಯವಸ್ಥೆಗಳಲ್ಲಿನ ಉತ್ತಮ ಗುಣಗಳು, ಅಂಶಗಳನ್ನು ಜೀವನದಲ್ಲಿ ರೂಢಿಸಿಕೊಂಡರೆ ಮಾನವನ ಜೀವನ ಸಂತಸದಿಂದ ಇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಭಾರತ ಪ್ರವಾಸದಲ್ಲಿರುವ ಪಾಶ್ಚಿಮಾತ್ಯ ಪ್ರತಿನಿಧಿಗಳು

ಭಾರತ ಪ್ರವಾಸದಲ್ಲಿರುವ ಪಾಶ್ಚಿಮಾತ್ಯ ಪ್ರತಿನಿಧಿಗಳು

ಇದೇ ಸಂದರ್ಭದಲ್ಲಿ ಪಾಶ್ಚಿಮಾತ್ಯ ಪ್ರತಿನಿಧಿಗಳ ತಂಡದ ಸದಸ್ಯರು ತಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು. ಈ ತಂಡ ಸೋಮವಾರ ಮುದ್ದೇನಹಳ್ಳಿಗೆ ತೆರಳಿ ಅಲ್ಲಿನ ಕೆಲವು ಕುಟುಂಬಗಳೊಂದಿಗೆ ಮಾತುಕತೆ ನಡೆಸಿದೆ. ಮಂಗಳವಾರ ಬೆಂಗಳೂರಿನ ಎಸ್ ವ್ಯಾಸ ಮತ್ತು ಆರ್ಟ್ ಆಫ್ ಲಿವಿಂಗ್ ಗೆ ಭೇಟಿ ನೀಡಲಿದೆ.

English summary
Tejaswini Ananthkumar showcases Adamya Chetana Mid day meal and other social activities style of working to Russia and European team of 31 members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X