ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಲು ಸಂಪೂರ್ಣ ಡಿಜಿಟಲ್ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 12 : ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ಸಂಪೂರ್ಣ ಡಿಜಿಟಲ್ ಆಗಲಿದೆ. ನೈಸ್ ಸಂಸ್ಥೆಯು ಇ-ಟಿಎಂಎಸ್ ಡಿಜಿಟಲ್ ಟೋಲ್ ಕಲೆಕ್ಷನ್ ಪ್ಲಾಟ್ ಫಾರಂ ಪರಿಚಯಿಸುತ್ತಿದೆ.

ಪ್ರತಿಷ್ಠಿತ ಬಿ.ಎಂ.ಐ.ಸಿ. ಯೋಜನೆಯ ಭಾಗವಾಗಿ ನೈಸ್ ಪೆರಿಫೆರೆಲ್ ರಸ್ತೆ, ಲಿಂಕ್ ರಸ್ತೆ, ಎಕ್ಸ್‌ಪ್ರೆಸ್ ವೇಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾದ ನಂದಿ ಇನ್‍ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್ ಶೀಘ್ರದಲ್ಲೆ ಟೋಲ್ ಸಂಗ್ರಹಿಸಲು ಇ- ಪ್ಲಾಟ್‍ಫಾರಂ ಆರಂಭಿಸುತ್ತಿದೆ.

ಕೊಳ್ಳೇಗಾಲ-ಕಲ್ಲಿಕೋಟೆ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ ಕೊಳ್ಳೇಗಾಲ-ಕಲ್ಲಿಕೋಟೆ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ

ಈ ಅತ್ಯಾಧುನಿಕ ವ್ಯವಸ್ಥೆಯಿಂದಾಗಿ ವಾಹನಗಳನ್ನು ನಿಲ್ಲಿಸದೇ ಟೋಲ್ ಪಾವತಿ ಮಾಡಬಹುದಾಗಿದೆ. ಟೋಲ್ ಸಂಗ್ರಹ ಕಾರ್ಯವನ್ನು ಬಳಕೆದಾರರ ಅನುಕೂಲಕ್ಕಾಗಿ ಡಿಜಿಟಲ್ ಪಾವತಿಗಳನ್ನಾಗಿ ಪರಿವರ್ತಿಸಲು ಈಗ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಕಸದಿಂದ ರಸ : 'ಮುಳುಗಡೆ ನಗರಿ' ಬಾಗಲಕೋಟೆ ಈಗ ಮಾದರಿ ನಗರಸಭೆಕಸದಿಂದ ರಸ : 'ಮುಳುಗಡೆ ನಗರಿ' ಬಾಗಲಕೋಟೆ ಈಗ ಮಾದರಿ ನಗರಸಭೆ

ETMS Platform To Collect Toll In NICE Road

ಕ್ಯಾಮರಾಗಳು ಮತ್ತು ಇನ್‍ಫ್ರಾ ಸ್ಕ್ಯಾನರ್ಸ್‍ಗಳು ವಿವಿಧ ಬಗೆಯ ವಾಹನಗಳನ್ನು ತ್ವರಿತವಾಗಿ ಗುರುತಿಸುತ್ತವೆ ಹಾಗೂ ನೋಂದಣಿ ಸಂಖ್ಯೆಯನ್ನು ಸೆರೆ ಹಿಡಿಯುತ್ತವೆ. ಇದರಿಂದ ಟೋಲ್ ವಾಹನ ಸವಾರರ ಅಮೂಲ್ಯವಾದ ಸಮಯ ಉಳಿತಾಯವಾಗುತ್ತದೆ.

ಉಪ ಚುನಾವಣೆ ಬಳಿಕ ಕರ್ನಾಟಕಕ್ಕೆ ಉಡುಗೊರೆ ಕೊಟ್ಟ ಕೇಂದ್ರ ಉಪ ಚುನಾವಣೆ ಬಳಿಕ ಕರ್ನಾಟಕಕ್ಕೆ ಉಡುಗೊರೆ ಕೊಟ್ಟ ಕೇಂದ್ರ

ಏನಿದು ತಂತ್ರಜ್ಞಾನ : ಇದು ಪ್ರಿ-ಪೇಯ್ದ್ ಮತ್ತು ಉಳಿತಾಯ ಖಾತೆಯಿಂದ ನೇರವಾಗಿ ಟೋಲ್ ಪಾವತಿ ಮಾಡುವ ತಂತ್ರಜ್ಞಾನವಾಗಿದೆ. ಆರ್‌ಎಫ್‌ಐಟಿ ಟ್ಯಾಗ್ ವಾಹನದ ಮುಂಭಾಗದ ಗ್ಲಾಸ್ ಮೇಲೆ ಅಂಟಿಕೊಂಡಿರುತ್ತದೆ.

ತಂತ್ರಜ್ಞಾನದ ಸಹಾಯದಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳನ್ನು ನಿಲ್ಲಿಸದೆ ಟೋಲ್ ಕಟ್ಟಲು ಅನುಕೂಲ ಒದಗಿಸಲಾಗಿದೆ. ಆರ್‍ಎಫ್‍ಐಡಿ ಟ್ಯಾಗ್‌ಗಳನ್ನು ಅಧಿಕೃತ ಬ್ಯಾಂಕ್‍ಗಳಿಂದ ಹಾಗೂ ಟೋಲ್ ಪ್ಲಾಜಾಗಳಲ್ಲಿ ಖರೀದಿಸಬಹುದು.

ನೈಸ್ ಇ-ಟಿಎಂಎಸ್ ವ್ಯವಸ್ಥೆ: ಬೆಂಗಳೂರಿಗರಿಗೆ ಅಂತರರಾಷ್ಟ್ರೀಯ ದರ್ಜೆಯ ಎಕ್ಸಪ್ರೆಸ್‍ವೇ ಮತ್ತು ಗ್ರೇಡ್-ಸಪರೇಟೆಡ್ ರಸ್ತೆಯನ್ನು ಬಳಸಲು ನೈಸ್ ಪೆರಿಫೆರೆಲ್ ರಸ್ತೆ ಮತ್ತು ಲಿಂಕ್ ರಸ್ತೆಗಳು ದಾರಿ ಮಾಡಿಕೊಟ್ಟವು.

"ನೈಸ್ ಇ-ಟಿಎಂಎಸ್ ವ್ಯವಸ್ಥೆ ಪರಿಚಯಿಸುವುದರಿಂದ ಬೆಂಗಳೂರಿಗರು ತಡೆ ರಹಿತವಾಗಿ ಟೋಲ್ ಪಾವತಿಸಿ ಸುಗಮ ಸಂಚಾರದ ಅನುಭವವನ್ನು ಪಡೆಯುತ್ತಾರೆ" ಎಂದು ನೈಸ್ ಕಂಪನಿಯ ಎಂ.ಡಿ. ಅಶೋಕ್ ಖೇಣಿ ಹೇಳಿದ್ದಾರೆ.

ಇಂಟರ್‌ನೆಟ್ ಸಂಪರ್ಕ ಹೊಂದಲು ಬಯಸುವ ಮತ್ತು ಸಮಯವನ್ನು ವ್ಯರ್ಥಮಾಡಲು ಬಯಸದ ಪ್ರಯಾಣಿಕರಿಗೆ ವೇಗದ ಇಂಟರ್‌ನೆಟ್ ಸೌಲಭ್ಯ ಒದಗಿಸಲು ನೈಸ್ ನೆಟ್‍ವರ್ಕ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಂತಿಮ ಹಂತದ ಮಾತುಕತೆಯನ್ನು ನಡೆಸುತ್ತಿದೆ.

English summary
Nandi Infrastructure Corridor Enterprise Limited (NICEL) which is the implementing agency of the NICE Peripheral Road, Link Road and Expressway has introduced e-TMS, a fully integrated e-platform to collect toll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X