ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮುಖ್ಯಮಂತ್ರಿಗಳೇ ಗಡಿಭಾಗದಲ್ಲೂ ವಿಪರೀತ ಸೋಂಕಿದೆ'- ಕಾಂಗ್ರೆಸ್ ನಾಯಕ

|
Google Oneindia Kannada News

ಬೆಂಗಳೂರು, ಜುಲೈ 13: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಒಂದು ವಾರಗಳ ಕಾಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

Recommended Video

ಎಡಬಿಡದೆ ಕಾಡ್ತಿದೆ ಕೊರೋನಾ: ಬೆಂಗಳೂರು ಬಿಡ್ತಿದ್ದಾರೆ ಜನ | Oneindia Kannada

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ''ರಾಜ್ಯದಲ್ಲಿ ಮತ್ತೊಮ್ಮೆ ಕನಿಷ್ಠ 15 ದಿನಗಳ ಕಾಲ ಕಠಿಣ ಲಾಕ್ ಡೌನ್ ವಿಧಿಸಿ'' ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ಲಾಕ್‌ಡೌನ್‌: ಸರ್ಕಾರದ ಮುಂದೆ ಮತ್ತೊಂದು ಬೇಡಿಕೆಯಿಟ್ಟ ದೇವೇಗೌಡಬೆಂಗಳೂರು ಲಾಕ್‌ಡೌನ್‌: ಸರ್ಕಾರದ ಮುಂದೆ ಮತ್ತೊಂದು ಬೇಡಿಕೆಯಿಟ್ಟ ದೇವೇಗೌಡ

ಈ ಕುರಿತು ಟ್ವೀಟ್ ಮಾಡಿರುವ ಖಂಡ್ರೆ ''ಮಾನ್ಯ ಮುಖ್ಯಮಂತ್ರಿಗಳೇ

ಕೇವಲ‌‌ ಬೆಂಗಳೂರು ಅಷ್ಟೇ ಅಲ್ಲ ರಾಜ್ಯದ ಗಡಿಭಾಗದಲ್ಲೂ ವಿಪರೀತ ಸೋಂಕು, ಸಾವು ಹೆಚ್ಚಾಗಿ ಆಗ್ತಾ ಇದೆ,ಬೀದರ್,ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕನಿಷ್ಠ ೧೫ ದಿನಗಳ ಕಾಲ ಕಠಿಣ ಲಾಕ್ ಡೌನ್ ವಿಧಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತನ್ನಿ'' ಎಂದು ಬೇಡಿಕೆಯಿಟ್ಟಿದ್ದಾರೆ.

ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದ ಖಂಡ್ರೆ ''ಸರ್ಕಾರ ಈ ಲಾಕ್ ಡೌನ್ ಅವಧಿಯಲ್ಲಾದರು ಹಿಂದಿನ ಲೋಪದೋಷ ಸರಿಪಡಿಸಿಕೊಂಡು ಮುಂದೆ ಸಮರ್ಥವಾಗಿ ಸೋಂಕು ಎದುರಿಸಲು ಎಲ್ಲಾ ರೀತಿಯ ತಯಾರಿ ನಡೆಸಲಿ'' ಎಂದು ವಿನಂತಿಸಿದ್ದಾರೆ.

Eshwar khandre urges to the government for implement complete lockdown in state

ಬೆಂಗಳೂರು ಲಾಕ್‌ಡೌನ್‌ ಕುರಿತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಪ್ರತಿಕ್ರಿಯೆ ನೀಡಿದ್ದು, ''ರಾಜ್ಯವನ್ನು ಲಾಕ್‌ಡೌನ್‌ ಮಾಡುವುದು ಉತ್ತಮ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

English summary
KPCC working president Eshwar khandre urges to the government for implement complete lockdown in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X