ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಮಾತ್ರವಲ್ಲ ಪ್ರತಿದಿನ ಪರಿಸರ ಉಳಿಸಿ

By Ashwath
|
Google Oneindia Kannada News

ಬೆಂಗಳೂರು, ಜೂ. 5: ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನವೂ ಆಚರಿಸಬೇಕಾದ ಅನಿವಾರ್ಯ‌ತೆಯಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆ ಉತ್ತರಹಳ್ಳಿ ಕೆರೆ ಆವರಣದಲ್ಲಿ ಆಯೋಜಿಸಿದ 300 ಗಿಡ ನೆಡುವ ಕಾರ್ಯ‌ಕ್ರಮದಲ್ಲಿ ಅವರು ಭಾಗಹಿಸಿ ಮಾತನಾಡಿದರು.

ಇಂದಿನ ಕಾರ್ಪೋರೇಟ್‌ ಜನರಿಗೆ ನಮ್ಮ ಊರು, ದೇಶದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ. ಈ ನಡುವೆ ಬೆಂಗಳೂರಿನ ಯುವ ಜನತೆಯನ್ನು ಒಂದೆಡೆ ಸೇರಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುನೈಟೆಡ್‌ ವೇ ಆಫ್‌ ಬೆಂಗಳೂರಿನ ಕಾರ್ಯ‌ ಶ್ಲಾಘನೀಯ ಎಂದರು.

ಸ್ಯಾನ್‌ಡಿಸ್ಕ್‌‌ ಬೆಂಗಳೂರಿನ ಹಿರಿಯ ನಿರ್ದೇಶಕ ಶ್ರೀಪಾದ್‌ ಗೋಪಾಲ್‌ ರಾವ್‌‌ ಮಾತನಾಡಿ ಟೆಕ್‌ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಾವು ಮುಂದಿದ್ದೇವೆ. ಅದೇ ರೀತಿಯಾಗಿ ಸಾಮಾಜಿಕ ಚಟುವಟಿಕೆಯಲ್ಲಿ ನಮ್ಮ ಕಂಪೆನಿ ಮುಂದಿದೆ. ಪರಿಸರ ರಕ್ಷಣೆ ನಮ್ಮಲ್ಲರ ಕರ್ತವ್ಯ. ಮುಂದಿನ ದಿನಗಳಲ್ಲೂ ಪರಿಸರಕ್ಕೆ ಪೂರಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ನಾವು ನಿರಂತರವಾಗಿ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಉತ್ತರಹಳ್ಳಿ ವಾಕರ್ ಅಸೋಸಿಯೇಷನ್‌ ಅಧ್ಯಕ್ಷ ವಿಶ್ವನಾಥ್‌ ಮಾತನಾಡಿ ಕೆರೆ ನಮಗೆ ಏನು ಕೊಟ್ಟಿದೆ ಎನ್ನುವುದು ಮುಖ್ಯವಲ್ಲ. ಕೆರೆಗೆ ನಾವು ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಕೆಲ ವರ್ಷಗಳ ಹಿಂದೆ ಈ ಜಾಗ ಕೊಲೆ, ಸುಲಿಗೆ ಮಾಡುವ ತಾಣವಾಗಿತ್ತು. ಆದರೆ ಈಗ ಇಲ್ಲಿ ಪ್ರತಿದಿನ 650ಕ್ಕೂ ಹೆಚ್ಚು ಜನ ವಾಕಿಂಗ್‌ ಮಾಡುತ್ತಿದ್ದಾರೆ. ಈ ಅಮೂಲ್ಯ ಕೆರೆ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತ‌ವ್ಯ ಎಂದರು.

ಯುನೈಟೆಡ್‌‌ ವೇ ಆಫ್‌ ಬೆಂಗಳೂರಿನ ಅಧ್ಯಕ್ಷ ಸಾಬು ಥೋಮಸ್‌, ಇಂಗರ್ಸಲ್ ರಾಂಡ್‌ ಕಂಪೆನಿಯ‌ ಸಹಾಯಕ ಉಪಾಧ್ಯಕ್ಷ ಎಸ್‌. ಶ್ರೀನಿವಾಸ್‌ ಉಡುಪ, ಬಿಬಿಎಂಪಿ ಕಾರ್ಪೋರೇಟರ್‌ ರಮೇಶ್‌ ರಾಜು ಉಪಸ್ಥಿತರಿದ್ದರು.

ಉತ್ತರಹಳ್ಳಿ ಕೆರೆಯಲ್ಲಿ ಪರಿಸರ ದಿನಾಚರಣೆ

ಉತ್ತರಹಳ್ಳಿ ಕೆರೆಯಲ್ಲಿ ಪರಿಸರ ದಿನಾಚರಣೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ ಗಿಡ ನೆಡುವ ಮೂಲಕ ಕಾರ್ಯ‌ಕ್ರಮಕ್ಕೆ ಚಾಲನೆ ನೀಡಿದರು.

 ಸ್ಯಾನ್‌ ಡಿಸ್ಕ್‌ ಕಂಪೆನಿ ಭಾಗಿ

ಸ್ಯಾನ್‌ ಡಿಸ್ಕ್‌ ಕಂಪೆನಿ ಭಾಗಿ

ಕಾರ್ಯ‌ಕ್ರಮದಲ್ಲಿ ಸ್ಯಾನ್‌‌ಡಿಸ್ಕ್‌ ಕಂಪೆನಿಯ 150ಕ್ಕೂ ಹೆಚ್ಚು ಉದ್ಯೋಗಿಗಳು ಭಾಗವಹಿಸಿದ್ದರು.

ಇಂಗರ್ಸಲ್ ರಾಂಡ್‌ ಕಂಪೆನಿ ಸಾಥ್‌

ಇಂಗರ್ಸಲ್ ರಾಂಡ್‌ ಕಂಪೆನಿ ಸಾಥ್‌

ಇಂಗರ್ಸಲ್ ರಾಂಡ್‌ ಕಂಪೆನಿಯ‌ 36 ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

300 ಗಿಡ

300 ಗಿಡ

ಒಟ್ಟು 300 ವಿವಿಧ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

 ಮೂರು ವರ್ಷದಿಂದ ಅಭಿವೃದ್ಧಿ

ಮೂರು ವರ್ಷದಿಂದ ಅಭಿವೃದ್ಧಿ

ಯುನೈಟೆಡ್‌ ವೇ ಆಫ್‌ ಬೆಂಗಳೂರು ಮೂರು ವರ್ಷದ ಹಿಂದೆ ಉತ್ತರ ಹಳ್ಳಿ ಕೆರೆಯ ಅಭಿವೃದ್ಧಿಯ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಉತ್ತರ ಹಳ್ಳಿ ಕೆರೆ ಸೇರಿ ಬೆಂಗಳೂರಿನ ಒಂಭತ್ತು ಕೆರೆಯ ಸಂಪೂರ್ಣ‌ ಜವಾಬ್ದಾರಿಯನ್ನು ಯುನೈಟೆಡ್‌ ವೇ ಆಫ್‌ ಬೆಂಗಳೂರುನೋಡಿಕೊಳ್ಳುತ್ತಿದೆ.

 ಕಾರ್ಯ‌ಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು

ಕಾರ್ಯ‌ಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು

ಯುನೈಟೆಡ್‌‌ ವೇ ಆಫ್‌ ಬೆಂಗಳೂರಿನ ಅಧ್ಯಕ್ಷ ಸಾಬು ಥೋಮಸ್‌, ಬಿಬಿಎಂಪಿ ಕಾರ್ಪೋರೇಟರ್‌ ರಮೇಶ್‌ ರಾಜು, ಉತ್ತರಹಳ್ಳಿ ವಾಕರ್ ಅಸೋಸಿಯೇಷನ್‌ ಅಧ್ಯಕ್ಷ ವಿಶ್ವನಾಥ್‌, ಬೆಂಗಳೂರು ದಕ್ಷಿಣ ಕ್ಷೇತದ ಶಾಸಕ ಕೃಷ್ಣಪ್ಪ ಭಾಗವಹಿಸಿದ್ದರು.

ನಿರಂತರ ಬೆಂಬಲ

ನಿರಂತರ ಬೆಂಬಲ

"ಟೆಕ್‌ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಾವು ಮುಂದಿದ್ದೇವೆ. ಅದೇ ರೀತಿಯಾಗಿ ಸಾಮಾಜಿಕ ಚಟುವಟಿಕೆಯಲ್ಲಿ ನಮ್ಮ ಕಂಪೆನಿ ಮುಂದಿದೆ. ಪರಿಸರ ರಕ್ಷಣೆ ನಮ್ಮಲ್ಲರ ಕರ್ತವ್ಯ. ಮುಂದಿನ ದಿನಗಳಲ್ಲೂ ಪರಿಸರಕ್ಕೆ ಪೂರಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ನಾವು ನಿರಂತರವಾಗಿ ಬೆಂಬಲ ನೀಡುತ್ತೇವೆ"

ಶ್ರೀಪಾದ್‌ ಗೋಪಾಲ್‌ ರಾವ್‌.ಹಿರಿಯ ನಿರ್ದೇಶಕ,ಸ್ಯಾನ್‌ಡಿಸ್ಕ್‌

English summary
On the occasion of World Environment Day, United Way of Bengaluru along with the Uttarahalli Magakere Walkers' Association and BBMP organised a Tree Planting Drive at Uttarahalli Lake on Thursday, June 5, 2014. 300 saplings planted at the lake by about 300 corporate volunteers and several community members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X