ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹೊಟೇಲ್ ಗ್ರೀನ್ ಪಾತ್ ನಲ್ಲಿ ಪರಿಸರ ದಿನಾಚರಣೆ

|
Google Oneindia Kannada News

ಬೆಂಗಳೂರು, ಜೂನ್ 5: ಬೆಂಗಳೂರಿನಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರಮುಖ ಹೊಟೇಲ್ ಗ್ರೀನ್ ಪಾತ್ ಆಗ್ರ್ಯಾನಿಕ್ ಸ್ಟೇಟ್‍ನಲ್ಲಿಂದು ವಿಶ್ವ ಪರಿಸರ ದಿನಾಚರಣೆ ಹಸಿರು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಪರಿಸರ ಮತ್ತು ಮಾನವೀಯತೆಯ ಉಳಿವಿಗಾಗಿ ನನ್ನ ಸಂಕಲ್ಪ ಧ್ಯೇಯ ವಾಕ್ಯದಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮಹಿಳಾ ಬರಹಗಾರ್ತಿಯರ ಸಂಘದ ಶ್ರೀಮತಿ ವಸುಂಧರಾ ಭೂಪತಿ, ನಮ್ಮ ಬೆಂಗಳೂರು ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಪಬಿಶೆಟ್ಟಿ, ಟೈಮ್ಸ್ ಆಫ್ ಇಂಡಿಯಾದ ಸಿಟಿ ಎಡಿಟರ್ ಶ್ರೀಮತಿ ಸೀತಾಲಕ್ಷ್ಮಿ, ದ ಗ್ರೀನ್ ಪಾತ್ ಸಂಸ್ಥಾಪಕರಾದ ಹೆಚ್ ಆರ್ ಜಯರಾಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು ನೂರು ಜನ ಪ್ರಮುಖ ಪರಿಸರವಾದಗಳಿಂದ ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶಗಳನ್ನು ದಾಖಲಿಸಲಾಯಿತು.

ಶಂಕರಮಠಸ್ತೆಯಲ್ಲಿ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು (ಜೂನ್ 5) ಉದ್ಯಾನ ನಗರಿ ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಭಾಗವಾಗಿ ಇಲ್ಲಿನ ಶಂಕರಮಠಸ್ತೆಯ ಮೋಹಲ್ಲಾ ನಿವಾಸಿಗಳಿಂದ 15 ವಿಶೇಷ ಆಯುರ್ವೇದ ಗಿಡಗಳನ್ನು ನೆಡಲಾಯಿತು.

ಹಲವಾರು ದಶಕಗಳಿಂದ ತೋಟಗಾರಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಮೊಹಲ್ಲಾದ ಹಿರಿಯರಾದ ತೋಟದ ಕೃಷ್ಣಮೂರ್ತಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.[ಹಸಿರು ಬೆಂಗಳೂರಿಗಾಗಿ ಅದಮ್ಯ ಚೇತನದಿಂದ 'ಸಸ್ಯಾಗ್ರಹ']

Environment day special in Bengaluru

ಮೋಹಲ್ಲಾದ ನಾಗರಿಕರ ಮನೆಯ ಮುಂದೆಯೇ ಗಿಡಗಳನ್ನು ನೆಡಲಾಗಿದ್ದು, ಒಂದೊಂದು ಗಿಡಗಳನ್ನೂ ಒಂದೊಂದು ಮನೆಯ ಸದಸ್ಯರೇ ದತ್ತು ತೆಗೆದು ಕೊಂಡು ಅದನ್ನು ಬೆಳೆಸುವ ಜವಾಬ್ದಾರಿ ಹೊತ್ತಿರುವುದು ವಿಶೇಷ.

ಈ ಕಾರ್ಯಕ್ರಮಕ್ಕೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಿ.ಟಿ. ಪ್ರಕಾಶ್ ರವರು, ಖ್ಯಾತ ಆಯುರ್ವೇದ ವೈದ್ಯ ಕಾರ್ತಿಕ್ ಪಂಡಿತ್ , ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎಂ. ನಿಶಾಂತ್, ಜ್ಯೋತಿ, ಕಶ್ಯಪ್, ರಂಗನಾಥ್, ಚಾಲನೆ ನೀಡಿದರು. ಮೋಹಲ್ಲಾ ನಿವಾಸಿಗಳೆಲ್ಲ ಅತ್ಯಂತ ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

English summary
For world environment day various programmes are taking place in Bengaluru to create awareness about environment. People of Shankat Math, Bengaluru residents have planted Ayuvredic plants infront of their home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X