ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಜಿನಿಯರ್ ಬೊಮ್ಮಾಯಿ ಅಂತ ಕರೆದರೆ ಖುಷಿಯಾಗುತ್ತದೆ: ಸಿಎಂ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ನನ್ನನ್ನು ಇಂಜಿನಿಯರ್ ಬೊಮ್ಮಾಯಿ ಅಂತ ಕರೆದರೆ ಖುಷಿಯಾಗುತ್ತದೆ ಎಂದು ಸರ್.ಎಂ. ವಿಶ್ವೇಶ್ವರಯ್ಯನವರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Recommended Video

ಸರ್‌.ಎಂ ವಿಶ್ವೇಶ್ವರಯ್ಯ ಜನ್ಮದಿನ ಹಿನ್ನೆಲೆ ಸಮಾಧಿಗೆ ಪೂಜೆ ಸಲ್ಲಿಕೆ

ಖ್ಯಾತ ಇಂಜಿನಿಯರ್ ಹಾಗೂ ಮೈಸೂರು ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಶ್ರಮಜೀವಿಗಳಾಗಿದ್ದರು. 161 ವರ್ಷವಾದರೂ ಅವರ ಸಾಧನೆಯನ್ನು ನೆನಪಿಸಿಕೊಳ್ಳುತ್ತೇವೆ. ಈ ರಾಜ್ಯಕ್ಕೆ ಮತ್ತೊಮ್ಮೆ ಸರ್.ಎಂ. ವಿಶ್ವೇಶ್ವರಯ್ಯ ಬೇಕಾಗಿದೆ. ನಮ್ಮ ಸ್ವಂತ ಮನೆ ಕಟ್ಟಬೇಕಾದರೆ ಗುಣಮಟ್ಟ ನೋಡುತ್ತೇವೆ. ಅದೇ ಗುಣಮಟ್ಟ ಸರ್ಕಾರಿ ಕೆಲಸದಲ್ಲಿ ಕಾಯ್ದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ವಿಶ್ವೇಶ್ವರಯ್ಯ ಇದ್ದಿದ್ದರೆ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕೊಡುತ್ತಿದ್ದರು ಎನ್ನುವ ಪ್ರಶ್ನೆಯನ್ನು ನಾವೂ ಹಾಕಿಕೊಳ್ಳಬೇಕು. ಆ ಪ್ರಶ್ನೆ ಹಾಕಿಕೊಂಡು ಕೆಲಸ ಮಾಡಬೇಕು. ಇಡೀ ವ್ಯವಸ್ಥೆಯೇ ಹಾಳಾಗುತ್ತಿದೆ. ಸರ್ಕಾರದ ಹಣ ಅದು ಸಾರ್ವಜನಿಕರ ಹಣ. ನಾವೂ ನಮ್ಮ ಮನೆ ಕಟ್ಟಬೇಕಾದರೇ ಯಾವ ರೀತಿ ಗುಣಮಟ್ಟ ಬಯಸುತ್ತೇವೆಯೋ ಅದೇ ರೀತಿ ಸರ್ಕಾರದ ಕೆಲಸವನ್ನು ಮಾಡಬೇಕು ಎಂದು ಇಂದಿನ ಇಂಜಿನಿಯರ್‌ಗಳಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದರು.

Engineers Day 2021: I Will Be Happy If You Call Me As Engineer Bommai Says CM

ಸರ್. ಎಂ. ವಿಶ್ವೇಶ್ವರಯ್ಯ ಜನ್ಮದಿನವನ್ನು ಶ್ರಮಜೀವಿಗಳಿಗೆ ಅರ್ಪಿಸುತ್ತೇನೆ. ಅವರು ಇಲ್ಲದಿದ್ದರೆ ಇಂಜಿನಿಯರ್‌ಗಳು ಡ್ರಾಯಿಂಗ್ ಬಾಕ್ಸ್​ನಲ್ಲಿ ಕಳೆದು ಹೋಗುತ್ತೀರಿ. ಶ್ರಮಜೀವಿಗಳು ದೇಶಕ್ಕೆ ಬೆನ್ನೆಲುಬು. ಇವತ್ತು ಒಂದು ದಿನ ವಿಶ್ವೇಶ್ವರಯ್ಯರನ್ನು ನೆನೆದರೆ ಸಾಕಾಗಲ್ಲ. ಅವರ ಆದರ್ಶಗಳನ್ನು ಸದಾ ಪಾಲಿಸಬೇಕು. ಅವರ ಬಯಸಿದ ನಾಡನ್ನು ಕಟ್ಟೋಣವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸ್ವಾಗತ ಭಾಷಣ ಸಮಯ ಮೀರಿದ್ದಕ್ಕೆ ಸಿಎಂ ಗರಂ
ಸರ್. ಎಂ. ವಿಶ್ವೇಶ್ವರಯ್ಯ ಜನ್ಮದಿನ ಕಾರ್ಯಕ್ರಮದ ಸ್ವಾಗತ ಭಾಷಣ 10 ನಿಮಿಷ ಮೀರಿದ್ದಕ್ಕೆ ಕಾರ್ಯಕ್ರಮದ ಆರಂಭದಲ್ಲಿ ಸಿಎಂ ಬೊಮ್ಮಾಯಿ ಆಯೋಜಕರ ವಿರುದ್ಧ ಗರಂ ಆದರು.

ಕೆಲ ದೇಶಗಳಲ್ಲಿ ಕಾರ್ಯಕ್ರಮ ಮುಕ್ಕಾಲು ಗಂಟೆಗೆ ಮುಗಿಯುತ್ತದೆ. ಆದರೆ ನಮ್ಮಲ್ಲಿ ಇದ್ದವರು, ಇಲ್ಲದವರನ್ನು ಸ್ವಾಗತ ಮಾಡುತ್ತಾರೆ. ಇದು ಸ್ವಲ್ಪ ಬದಲಾವಣೆ ಆಗಬೇಕು ಅಂತ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ 10 ನಿಮಿಷ ಮೀರಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಿಟ್ಟಾದರು.

ಅಧಿವೇಶನ ನಡೆಯುತ್ತಿದೆ, ಹೀಗಾಗಿ ತುರ್ತಾಗಿ ಅಲ್ಲಿ ಹೋಗಬೇಕು. ಹೀಗಾಗಿ ಕೆಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸುತ್ತಿದ್ದೇನೆ. ಸರ್.ಎಂ. ವಿಶ್ವೇಶ್ವರಯ್ಯ ಸಮಯಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದರು. ಹಾಗೆಯೇ ನಾವೂ ಸಹ ಸಮಯಕ್ಕೆ ಮಹತ್ವ ಕೊಡಬೇಕು. ಇದ್ದವರು, ಇಲ್ಲದವರನ್ನೂ ಸ್ವಾಗತಿಸುವ ಪರಂಪರೆ ನಿಲ್ಲಬೇಕು ಎಂದು ಕಾರ್ಯಕ್ರಮ ಆಯೋಜಕರಿಗೆ ಭಾಷಣದ ಆರಂಭದಲ್ಲೇ ಸಿಎಂ ಸೂಚಿಸಿದರು.

Engineers Day 2021: I Will Be Happy If You Call Me As Engineer Bommai Says CM

ಇಂಜಿನಿಯರ್ ದಿನ ಏಕೆ?
ಸೆಪ್ಟೆಂಬರ್​ 15, 1861ರಲ್ಲಿ ಕರ್ನಾಟಕದ ಮುದ್ದೇನಹಳ್ಳಿ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಸರ್.​ ಎಂ. ವಿಶ್ವೇಶ್ವರಯ್ಯರನ್ನು ಇನ್​ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯು​ ಭಾರತದ ಆರ್ಥಿಕ ಯೋಜನೆಯ ರೂವಾರಿ ಎಂಬರ್ಥದಲ್ಲಿ ಕರೆದಿದೆ. ಆ ಕಾಲದಲ್ಲಿಯೇ ಪುಣೆಯ ಇಂಜಿನಿಯರಿಂಗ್​ ಕಾಲೇಜಿನಿಂದ ಪದವಿ ಪಡೆದ ವಿಶ್ವೇಶ್ವರಯ್ಯ ಅವರು ತಮ್ಮ ಆಸಕ್ತಿಯ ಕ್ಷೇತ್ರಗಳಾದ ನೀರಾವರಿ ಹಾಗೂ ಪ್ರವಾಹ ತಡೆ ಯೋಜನೆಗೆ ಸಾಕಷ್ಟು ಕೊಡುಗೆ ನೀಡಿದ್ದರು.

ಪುಣೆಯ ಖಡಕ್​ವಾಸ್ಲ ಜಲಾಶಯದಲ್ಲಿ 1903ರಲ್ಲಿ ನಿರ್ಮಿಸಿದ ಅಟೋಮ್ಯಾಟಿಕ್​ ಬ್ಯಾರಿಯರ್​ ವಾಟರ್​ ಫ್ಲಡ್​ಗೇಟ್​​ಗಳ ಹಿಂದೆ ವಿಶ್ವೇಶ್ವರಯ್ಯ ಇದ್ದರು. ನಂತರ 1917ರಲ್ಲಿ ಸರ್ಕಾರಿ ಇಂಜಿನಿಯರಿಂಗ್​ ಕಾಲೇಜ್​ ಸ್ಥಾಪನೆಗೂ ಅವರೇ ಮುಖ್ಯ ಕಾರಣರಾಗಿದ್ದು, ಅದು ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್​ ಆಫ್​ ಇಂಜಿನಿಯರಿಂಗ್​ ಅಂತಲೂ ಹೆಸರು ಪಡೆದಿದೆ.

ಕರ್ನಾಟಕದಲ್ಲಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಯೋಜನೆಗೆ ಸರ್.​ ಎಂ. ವಿಶ್ವೇಶ್ವರಯ್ಯ ಮುಖ್ಯಸ್ಥರಾಗಿದ್ದರು. 1934ರಲ್ಲಿ ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ ಸಮಿತಿಯಲ್ಲೂ ಅವರ ಪಾತ್ರವಿತ್ತು. ವಿಶ್ವೇಶ್ವರಯ್ಯ ಅವರ ಸಾರ್ವಜನಿಕ ಸೇವೆಯನ್ನು ನೋಡಿ Knight Commander of the British Indian Empire ಎಂಬ ಬಿರುದನ್ನು ನೀಡಲಾಯಿತು. 1955ರಲ್ಲಿ ಸರ್​ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೆ ಪಾತ್ರರಾದರು.

ಸರ್.​ ಎಂ. ವಿಶ್ವೇಶರಯ್ಯರನ್ನು ಇಂದಿಗೂ ಸ್ಮರಿಸಿಕೊಳ್ಳಲು ಕಾರಣ ಅವರು ಮಾಡಿದ ಕೆಲಸಗಳು. ಜಲಾಶಯ ನಿರ್ಮಾಣ, ತೂಗು ಸೇತುವೆ ನಿರ್ಮಾಣದಿಂದ ಹಿಡಿದು ಸಮಾಜಕ್ಕೆ ನೆರವಾಗುವಂತಹ ಅದೆಷ್ಟೋ ಉತ್ತಮ ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ. ನೀರಿನಿಂದ ವಿದ್ಯುತ್​ ಪಡೆಯುವುದು ಇಂದು ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಜಲ ವಿದ್ಯುತ್​ ಶಕ್ತಿ ಯೋಜನೆಯ ಹಿಂದೆಯೂ ಇವರ ಪಾತ್ರವಿದೆ ಎನ್ನುವುದು ಗಮನಾರ್ಹ. ಕರ್ನಾಟಕದಲ್ಲಿ ಕೃಷ್ಣ ರಾಜ ಸಾಗರ ಜಲಾಶಯ ನಿರ್ಮಿಸುವುದರಿಂದ ಹಿಡಿದು ಹೈದರಾಬಾದ್​ನಲ್ಲಿ ಪ್ರವಾಹ ತಡೆಗಟ್ಟುವಿಕೆ ಯೋಜನೆ ರೂಪಿಸುವ ತನಕ ಸರ್.​ ಎಂ.ವಿಶ್ವೇಶ್ವರಯ್ಯ ಹೆಸರು ಮಾಡಿದ್ದಾರೆ.

English summary
I will be happy if you call me as Engineer Bommai says CM Basavaraj Bommai in Engineers Day Program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X