ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

|
Google Oneindia Kannada News

ಬೆಂಗಳೂರು, ಫೆಬ್ರವರಿ 17: ಮಹಿಳೆಯರ ಹಕ್ಕುಗಳು, ಮಕ್ಕಳ ಹಕ್ಕುಗಳು, ಚಿತ್ರಹಿಂಸೆಗಳಿಗೆ ಕಡಿವಾಣ, ಮರಣ ದಂಡನೆ ಶಿಕ್ಷೆ ಕ್ರಮವನ್ನು ರದ್ದುಪಡಿಸುವುದು, ನಿರಾಶ್ರಿತರುಗಳ ಹಕ್ಕುಗಳ ರಕ್ಷಣೆ, ಕೈದಿಗಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಕಾರ್ಯ ನಿರ್ವಹಿಸುವ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಓದಿಅಮ್ನೆಸ್ಟಿ ಇಂಟರ್ ನ್ಯಾಷನಲ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಓದಿ

ಬೆಂಗಳೂರಿನ ಕಚೇರಿಯಲ್ಲಿ ಜಪ್ತಿ ಮಾಡಿರುವ ಆಸ್ತಿ ಮೌಲ್ಯ 17.66 ಕೋಟಿ ರು ಎಂದು ಅಂದಾಜಿಸಲಾಗಿದೆ. ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಮಾಡಿದ ಆರೋಪದ ಮೆಲೆ ಆಸ್ತಿ ಜಪ್ತಿ ಮಾಡಲಾಗಿದೆ. ಎಫ್ ಸಿ ಆರ್ ಎ ನಿಯಮ ಉಲ್ಲಂಘನೆ ಮಾಡಿ ಆರ್ಥಿಕ ವ್ಯವಹಾರ ನಡೆಸುವ ಆರೋಪ ಹೊರೆಸಲಾಗಿದೆ. 2019ರಲ್ಲಿ ಸಿಬಿಐ ಕೂಡಾ ಇದೇ ಕಾರಣಕ್ಕೆ ಬೆಂಗಳೂರು ಹಾಗೂ ದೆಹಲಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ನಂತರ ಭಾರತದ ಎಲ್ಲಾ ಶಾಖೆಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

Enforcement Directorate attaches properties of Amnesty International

Recommended Video

103ಕ್ಕೆ ಏರಿಕೆಯಾದ ಬಿಳೇಕಹಳ್ಳಿ ಅಪಾರ್ಟ್‌ಮೆಂಟ್‌ನ ಕೊರೊನಾ ಸೋಂಕಿತರ ಸಂಖ್ಯೆ | Oneindia Kannada

ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಒಂದು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ. ಮಾನವ ಹಕ್ಕುಗಳ ರಕ್ಷಣೆಗಾಗಿ ಇದು ಹೋರಾಟ ಮಾಡುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಅದನ್ನು ಸರಿಪಡಿಸಲು ಜನಾಂದೋಲನ ನಡೆಸುತ್ತದೆ. ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಈ ಸಂಸ್ಥೆ ಒಟ್ಟು 7 ಮಿಲಿಯನ್ ಸದಸ್ಯರನ್ನು ಹೊಂದಿದೆ. ಲಂಡನ್‌ನಲ್ಲಿ 1961ರಲ್ಲಿ ಈ ಸಂಸ್ಥೆಯನ್ನು ಪೀಟರ್ ಬೆನೆಸನ್ ಆರಂಭಿಸಿದರು. ಈ ಸಂಘಟನೆಯು 1977 ರಲ್ಲಿ 'ಚಿತ್ರಹಿಂಸೆಯ ವಿರುದ್ಧ ನಡೆಸಿದ ಪ್ರಚಾರಾಂದೋಲನಕ್ಕಾಗಿ' ನೋಬಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದೆ. ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡುವ ಸಂಸ್ಥೆಗಳ ಪೈಕಿ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರುಗಳಿಸಿದೆ.

English summary
The Enforcement Directorate (ED) has provisionally attached movable properties worth Rs 17.66 crores belonging to Amnesty International India Pvt Ltd and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X