ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಬಲೂರು ಕೆರೆ ಒತ್ತುವರಿ ತೆರವಿಗೆ ಸ್ಥಳೀಯರ ವಿರೋಧ

|
Google Oneindia Kannada News

ಬೆಂಗಳೂರು, ಮಾ. 4 : ಮಂಗಳವಾರ ಬಿಡಿಎ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಬಲೂರು ಕೆರೆ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸಿದರು. ಒತ್ತುವರಿ ತೆರವಿಗೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಜೆಸಿಬಿಗಳಿಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದರು.

ಇಬಲೂರು ಕೆರೆಯ ಸುಮಾರು 18.6 ಗುಂಟೆ ಜಾಗವನ್ನು ಖಾಸಗಿ ಡೆವಲಪರ್ಸ್ ಗಳು ಒತ್ತುವರಿ ಮಾಡಿಕೊಂಡಿದ್ದರು. ಮಂಗಳವಾರ ಬಿಡಿಎ ಅಧಿಕಾರಿಗಳು, ನಗರ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ದಯಾನಂದ ಮುಂತಾದವರು, ಪೊಲೀಸರ ಸಹಕಾರದಲ್ಲಿ ಒತ್ತುವರಿ ತೆರವು ಕಾರ್ಯಚರಣೆ ಕೈಗೊಂಡರು. [ಬಿಡಿಎ ಫ್ಲಾಟ್ ಗೆ ಅರ್ಜಿ ಸಲ್ಲಿಸುವುದು ಹೇಗೆ?]

Iblur

ಇಬಲೂರು ಕೆರೆಯ ಸುಮಾರು 18.6 ಗುಂಟೆ ಜಾಗದಲ್ಲಿ ಶೋಭಾ ಡೆವಲಪರ್ಸ್ ವಸತಿ ಸಮುಚ್ಛಯ ನಿರ್ಮಾಣ ಮಾಡಿತ್ತು ಮತ್ತು 4 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಪೌಂಡ್ ನಿರ್ಮಿಸಿತ್ತು. ಸನ್ ಸಿಟಿ ಡೆವಲಪರ್ಸ್ 5 ಗುಂಟೆ ಜಾಗ ಒತ್ತುವರಿ ಮಾಡಿಕೊಂಡಿದ್ದರೆ, ಮೇ ಫ್ಲವರ್ ಸ್ಕೂಲ್ 1ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. [ಭೈರಸಂದ್ರ ಕೆರೆ ಒತ್ತುವರಿ ಕೆರೆ ತೆರವು]

ಒತ್ತುವರಿ ತೆರವಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳು ಸಾಕಷ್ಟು ಸಮಯಾವಕಾಶ ನೀಡಿದ್ದರು. ಆದರೆ, ಡೆವಲಪರ್ಸ್ ಒತ್ತುವರಿ ತೆರವುಗೊಳಿಸದ ಹಿನ್ನಲೆಯಲ್ಲಿ ಮಂಗಳವಾರ ಕಾರ್ಯಚರಣೆ ಕೈಗೊಂಡು, ಒತ್ತುವರಿ ತೆರವುಗೊಳಿಸಲು ಮುಂದಾದರು. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. [ವಿಶೇಷ ನ್ಯಾಯಾಲಯ ಸ್ಥಾಪನೆಗೆ ಎಎಪಿ ಆಗ್ರಹ]

ವಿರೋಧವೇಕೆ : ಅಧಿಕಾರಿಗಳು ವಸತಿ ಸಮುಚ್ಛಯವನ್ನು ತೆರವುಗೊಳಿಸುತ್ತಾರೆ ಎಂದು ಆತಂಕಗೊಂಡ ಸ್ಥಳೀಯರು ಒತ್ತುವರಿ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ಕಾಪೌಂಡ್ ಮಾತ್ರ ತೆರವುಗೊಳಿಸುತ್ತೇವೆ ಎಂದು ನಿವಾಸಿಗಳ ಮನವೊಲಿಸಿದ ಅಧಿಕಾರಿಗಳು ತೆರವು ಕಾರ್ಯಾಚರಣೆ ಪೂರ್ಣಗೊಳಿಸಿದರು.

ಜಿಲ್ಲಾಧಿಕಾರಿ ಸ್ಪಷ್ಟನೆ : ಒತ್ತುವರಿ ತೆರವು ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಪ್ರಕಾಶ್, ಒತ್ತುವರಿ ಜಾಗ ತೆರವುಗೊಳಿಸುವಂತೆ 2013ರಲ್ಲಿಯೇ ನೋಟಿಸ್ ನೀಡಲಾಗಿತ್ತು. ಆದರೆ, ಡೆವಲಪರ್ಸ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತೆರವು ಕಾರ್ಯಾಚರಣೆಗೆ ತಡಯಾಜ್ಞೆ ತಂದಿದ್ದರಿ. ಸದ್ಯ ಕಾನೂನಿನ ರೀತಿಯಲ್ಲಿಯೇ ತೆರವು ಕಾರ್ಯಾಚರಣೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

English summary
Bangalore Development Authority (BDA) and Deputy Commissioner of Bangalore recovered Encroachment land at Iblur lake on Tuesday, March 4. Private developers encroached Iblur lake land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X