ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನೇಕಲ್ : ಕೋಟಿ ಕೋಟಿ ಬೆಲೆಬಾಳುವ ಭೂಮಿ ಸರ್ಕಾರದ ವಶಕ್ಕೆ

|
Google Oneindia Kannada News

ಬೆಂಗಳೂರು, ಜನವರಿ 11: ಬೆಂಗಳೂರು ಹೊರವಲಯ ಸರ್ಕಾರಿ ಜಮೀನು ಒತ್ತುವರಿಗೆ ಫೇಮಸ್ ಆಗುತ್ತಿದ್ದು, ಅಧಿಕಾರಿಗಳು ಒತ್ತುವರಿ ತೆರವು ಮಾಡಲು ಖಡಕ್ ಪ್ಲಾನ್ ಮಾಡಿದ್ದಾರೆ. ಇದೇ ರೀತಿ ಆನೇಕಲ್ ತಾಲೂಕಿನಲ್ಲೂ ಸರ್ಕಾರಿ ಜಾಗದ ಒತ್ತುವರಿ ತೆರವು ಕಾರ್ಯ ಭರದಿಂದ ಸಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯ ಹುಲಿಮಂಗಲ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 18.11 ಗುಂಟೆ ಸರ್ಕಾರಿ ವಶಕ್ಕೆ ಪಡೆಯಲಾಗಿದೆ. ಈ ಗ್ರಾಮದ ಸರ್ವೆ ನಂಬರ್ 156/6 ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆನೇಕಲ್ ತಹಸೀಲ್ದಾರ್ ಮಹಾದೇವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಗಳನ್ನ ತೆರವುಗೊಳಿಸಲಾಗಿದೆ.

Encroached land take over to government custody at Anekal

Recommended Video

Drug case ಅಲ್ಲಿ Adithya Alva ಅಂದರ್ !! | Oneindia Kannada

ಮನೆ ಮಾಲೀಕರ ಜೊತೆ ಫೈಟಿಂಗ್
ಇನ್ನು ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮನೆ ಕಳೆದುಕೊಂಡವರು ಕಣ್ಣೀರು ಹಾಕಿದ ಘಟನೆ ಕೂಡ ನಡೆದಿದೆ. ಆನೇಕಲ್ ತಹಸೀಲ್ದಾರ್ ನೇತೃತ್ವದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನ ತೆರವುಗೊಳಿಸಿ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಯಿತು. ಆದರೆ ಈ ವೇಳೆ ಮನೆ ಮಾಲೀಕರಿಂದ ಅಧಿಕಾರಿಗಳ ಜೊತೆ ವಾಗ್ವಾದ ಕೂಡ ನಡೆದಿದೆ. ಏಕಾಏಕಿ ಕಟ್ಟಡ ತೆರವಿಗೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಬಳಿಕ ಮನೆ ಸಾಮಗ್ರಿ ತೆಗೆದುಕೊಳ್ಳಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ.

English summary
Encroached land take over to government custody at Anekal, outer area of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X