ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಂಕ್ ಸ್ಲಿಪ್ ನೀಡಿದ ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ

By Kiran B Hegde
|
Google Oneindia Kannada News

ಬೆಂಗಳೂರು, ಜ. 1: ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಈಚೆಗಷ್ಟೇ ತನ್ನದೇ ಉದ್ಯೋಗಿಗಳ ಸಂಬಳ ಏರಿಸಿತ್ತು. ಆದರೆ, ಈಗ ಉದ್ಯೋಗಿಗಳನ್ನೇ ತೆಗೆದುಹಾಕಲು ಹೊರಟಿದೆ!

ಈ ಕುರಿತು ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಕಂಪನಿಯ ಹಲವು ಉದ್ಯೋಗಿಗಳು ಉಪ ಕಾರ್ಮಿಕ ಆಯುಕ್ತರನ್ನು ಭೇಟಿಯಾಗಿ ದೂರಿದ್ದಾರೆ.

ಹಲವು ಉದ್ಯೋಗಿಗಳನ್ನು 'ಉತ್ತಮ ಕಾರ್ಯನಿರ್ವಹಣೆ ತೋರದವರು' ಎಂದು ಟಿಸಿಎಸ್ ಗುರುತಿಸಿದ್ದು, ಅವರನ್ನು 2014ರ ಡಿಸೆಂಬರ್ 8ರಿಂದ ವಜಾಗೊಳಿಸಲು ಆರಂಭಿಸಿದೆ. ಬೆಂಗಳೂರು, ಪುಣೆ, ಕೋಲ್ಕೊತಾ, ಮುಂಬಯಿ ಸೇರಿದಂತೆ ಇತರ ಕೇಂದ್ರಗಳಲ್ಲಿ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. [ಪ್ರತಿಭಾನ್ವಿತರ ಸೆಳೆಯಲು ವೇತನ ಹೆಚ್ಚಿಸಿದ ಟಿಸಿಎಸ್]

ಸುಮಾರು ಏಳು ವರ್ಷ ಅನುಭವ ಹೊಂದಿರುವ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ರಾಜಿನಾಮೆ ನೀಡಲು ಸೂಚಿಸಲಾಗುತ್ತಿದೆ. ನಮಗೆ ಒಂದು ತಿಂಗಳ ಮುಂಚಿತವಾಗಿ ನೋಟಿಸ್ ನೀಡಲಾಗಿದೆ. ಯಾವುದೇ ಪರಿಹಾರವನ್ನೂ ನೀಡುತ್ತಿಲ್ಲ ಎಂದು ಓರ್ವ ಉದ್ಯೋಗಿ ಆರೋಪಿಸಿದ್ದಾರೆ.

"ಮೊದಲು ಕೈಯಲ್ಲಿದ್ದ ಪ್ರೊಜೆಕ್ಟ್‌ಗಳನ್ನು ಕಿತ್ತುಕೊಳ್ಳುತ್ತಾರೆ. ನಂತರ ರಾಜಿನಾಮೆ ನೀಡುವಂತೆ ಕೇಳುತ್ತಾರೆ" ಎಂದು ಟಿಸಿಎಸ್ ಉದ್ಯೋಗಿಗಳು ತಿಳಿಸಿದ್ದಾರೆ. ಕಂಪನಿಯ ಧೋರಣೆ ವಿರುದ್ಧ ಶೀಘ್ರ ದೂರು ನೀಡುವುದಾಗಿ ತಿಳಿಸಿದ್ದಾರೆ. [ನಾಲ್ಕು ಐಟಿ ಕಂಪನಿಗಳ ನಗದು ಮೊತ್ತವೆಷ್ಟು ಗೊತ್ತೆ?]

tcs

ಸಾಮರ್ಥ್ಯ ಹೆಚ್ಚಿಸುವ ಪ್ರಕ್ರಿಯೆ : ಉದ್ಯೋಗಿಗಳ ಆರೋಪ ಕುರಿತು ಸಂಸ್ಥೆಯನ್ನು ವಿಚಾರಿಸಿದಾಗ, "ಕಂಪನಿಯ ಉದ್ಯೋಗಿಗಳ ಸಾಮರ್ಥ್ಯ ಹೆಚ್ಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ" ಎಂದು ವಕ್ತಾರರು ತಿಳಿಸಿದ್ದಾರೆ.

ಉದ್ಯೋಗಿಗಳ ಆರೋಪ ಕುರಿತು ಉಪ ಕಾರ್ಮಿಕ ಆಯುಕ್ತ ಶ್ರೀಪಾದ ಅವರನ್ನು ಪ್ರಶ್ನಿಸಿದಾಗ, "ಟಿಸಿಎಸ್ ಉದ್ಯೋಗಿಗಳು ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ. ದೂರು ನೀಡಿದ ಮೇಲೆ ವಿಚಾರಣೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ. [ಟಿಸಿಎಸ್ ನಿಂದ ಫ್ರೆಶರ್ಸ್ ಗೆ ಶುಭಸುದ್ದಿ]

ಟಾಟಾ ಕಂಪನಿ ಉದ್ದೇಶವೇನು?: ಹಲವು ಉದ್ಯೋಗಿಗಳನ್ನು 'ಉತ್ತಮ ಕಾರ್ಯನಿರ್ವಹಣೆ ತೋರದವರು' ಎಂದು ಗುರುತಿಸಿರುವ ಟಿಸಿಎಸ್ ಅವರಿಂದ ಸಾಮೂಹಿಕ ರಾಜೀನಾಮೆ ಕೇಳುತ್ತಿದೆ ಎಂದು ಉದ್ಯೋಗಿಗಳು ದೂರುತ್ತಿದ್ದಾರೆ. ಆದರೆ, ಕೆಲವು ದಿನಗಳ ಹಿಂದಷ್ಟೇ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲು ವೇತನ ಹೆಚ್ಚಿಸುವ ನಿರ್ಧಾರ ತಳೆದಿತ್ತು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಜಾಗತಿಕ ಮುಖ್ಯಸ್ಥ ಅಜೋಯೇಂದ್ರ ಮುಖರ್ಜಿ, ಜಗತ್ತಿನಾದ್ಯಂತ ಈ ವರ್ಷ 55 ಸಾವಿರ ಉದ್ಯೋಗಿಗಳ ನೇಮಕ ಮಾಡಿಕೊಳ್ಳಲಿದ್ದೇವೆ. ಅವರಲ್ಲಿ ಭಾರತದಿಂದಲೇ 35 ಸಾವಿರ ನೇಮಕಾತಿ ಮಾಡಲಾಗುವುದು. ಪ್ರಸಕ್ತ ವರ್ಷ ಈಗಾಗಲೇ 31 ಸಾವಿರ ಯುವಜನತೆಗೆ ಆಫರ್ ಲೆಟರ್ ನೀಡಲಾಗಿದೆ. ಕಂಪನಿಯಲ್ಲಿ ನೇರವಾಗಿ ಹಾಗೂ ಹಿರಿಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಕೂಡ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು. [ಟಿಸಿಎಸ್ ಗೆ ನಿರೀಕ್ಷಿತ ಲಾಭ, ಆದಾಯ]

ಜಗತ್ತಿನ ಅತ್ಯಂತ ಪ್ರಾಮಾಣಿಕ ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಟಾಟಾ ಸಮೂಹದ ಟಾಟಾ ಸ್ಟೀಲ್‌ನದ್ದು. ಆದರೆ, ಸಾಫ್ಟ್‌ವೇರ್ ಉದ್ಯಮದಲ್ಲಿ ದೇಶದಲ್ಲಿಯೇ ನಂ. 1 ಸ್ಥಾನದಲ್ಲಿರುವ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಕಂಪನಿ, ಹಲವು ವರ್ಷ ಅನುಭವ ಹೊಂದಿರುವವರಿಂದ ದಿಢೀರ್ ರಾಜಿನಾಮೆ ಕೇಳಿರುವುದು ಅಚ್ಚರಿ ತರಿಸಿದೆ.

English summary
A group of employees of Tata Consultancy Services met the Deputy Labor Commissioner in Bengaluru seeking action against the ‘mass sacking’ of employees. The employees informed that TCS has initiated the process of sacking employees, saying they are ‘non-performers’. So they will file a formal complaint soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X